More

    16 ವರ್ಷಗಳ ಬಳಿಕ ಪಾಕ್‌ಗೆ ಇಂಗ್ಲೆಂಡ್ ತಂಡ

    ಕರಾಚಿ: ಇಂಗ್ಲೆಂಡ್ ತಂಡ 16 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಸಜ್ಜಾಗಿದೆ. ಉಭಯ ಕ್ರಿಕೆಟ್ ಮಂಡಳಿಗಳ ಒಪ್ಪಂದದ ಮೇರೆಗೆ 2021ರ ಅಕ್ಟೋಬರ್‌ನಲ್ಲಿ ಇಂಗ್ಲೆಂಡ್ ತಂಡ 2 ಟಿ20 ಪಂದ್ಯಗಳನ್ನಾಡಲು ಪಾಕ್‌ಗೆ ಪ್ರಯಾಣಿಸಲಿದೆ. ಅಕ್ಟೋಬರ್ 14 ಮತ್ತು 15ರಂದು ಕರಾಚಿಯಲ್ಲಿ ಪಂದ್ಯಗಳು ನಡೆಯಲಿದ್ದು, 2021ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಪೂರ್ವಸಿದ್ಧತೆಯ ಭಾಗವಾಗಿ ಈ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.

    ಮುಂದಿನ ಜನವರಿಯಲ್ಲೇ ಪ್ರವಾಸ ಕೈಗೊಳ್ಳುವಂತೆ ಪಿಸಿಬಿ ಆಹ್ವಾನ ನೀಡಿತ್ತು. ಆದರೆ, ಅಗ್ರ ಆಟಗಾರರ ಅನುಪಸ್ಥಿತಿಯಿಂದಾಗಿ ಪ್ರವಾಸದ ವೇಳಾಪಟ್ಟಿಯನ್ನು ಪರಿಷ್ಕರಿಸಲಾಯಿತು. ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಇಂಗ್ಲೆಂಡ್ ತಂಡ ಪಾಕ್ ಪ್ರವಾಸ ಕೈಗೊಳ್ಳಲಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳು ಬುಧವಾರ ಸ್ಪಷ್ಟಪಡಿಸಿವೆ. ‘ಮುಂದಿನ ಅಕ್ಟೋಬರ್‌ನಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ’ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸೀಂ ಖಾನ್ ತಿಳಿಸಿದ್ದಾರೆ.

    16 ವರ್ಷಗಳ ಬಳಿಕ ಇಂಗ್ಲೆಂಡ್ ತಂಡಕ್ಕೆ ಮೊದಲ ಪಾಕ್ ಪ್ರವಾಸ ಇದಾಗಲಿದೆ. ಜತೆಗೆ 2022-23ರ ಅವಧಿಗೆ ಟೆಸ್ಟ್ ಹಾಗೂ ಏಕದಿನ ಸರಣಿ ಆಯೋಜನೆಗೆ ಇದು ದಾರಿ ಮಾಡಿಕೊಡಲಿದೆ. ಪ್ರವಾಸದಲ್ಲಿ ಪೂರ್ಣ ಪ್ರಮಾಣದ ತಂಡ ಪಾಲ್ಗೊಳ್ಳಲಿದ್ದು, ಎಫ್ ಟಿಪಿಯಂತೆ 2021-22ನೇ ವೇಳಾಪಟ್ಟಿಯಂತೆ ಆಸ್ಟ್ರೇಲಿಯಾ ಕೂಡ ಪಾಕ್ ಪ್ರವಾಸ ಕೈಗೊಳ್ಳಲಿದೆ ಎಂದು ಖಾನ್ ತಿಳಿಸಿದ್ದಾರೆ.

    ಕರೊನಾ ವೈರಸ್ ಹಾವಳಿಗೆ ಹೆದರಿದ ಕೇನ್ ರಿಚರ್ಡ್‌ಸನ್, ಭಾರತ ವಿರುದ್ಧದ ಏಕದಿನ ಸರಣಿಯಿಂದ ಹೊರಕ್ಕೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts