More

    8 ವರ್ಷದ ಹಳೇ ಟ್ವೀಟ್ ವಿವಾದ ತಂದ ಆಪತ್ತು, ಇಂಗ್ಲೆಂಡ್ ಬೌಲರ್ ರಾಬಿನ್‌ಸನ್ ಅಮಾನತು

    ಲಂಡನ್: ಇಂಗ್ಲೆಂಡ್ ತಂಡದ ವೇಗದ ಬೌಲರ್ ಒಲಿ ರಾಬಿನ್‌ಸನ್ ಅವರನ್ನು 2012-13ರಲ್ಲಿ ಮಾಡಿದ್ದ ವಿವಾದಾತ್ಮಕ ಟ್ವೀಟ್‌ಗೆ ಸಂಬಂಧಪಟ್ಟಂತೆ ಅಮಾನತುಗೊಳಿಸಲಾಗಿದ್ದು, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ತನಿಖೆ ಮುಗಿಯುವವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೊರಗುಳಿಯಲಿದ್ದಾರೆ. ಇದರಿಂದ ಜೂನ್ 10 ರಿಂದ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ರಾಬಿನ್‌ಸನ್ ಅಲಭ್ಯರಾಗಲಿದ್ದಾರೆ.

    ಇದನ್ನೂ ಓದಿ: ಕೊಲೆ ಆರೋಪಿ ಸುಶೀಲ್​ ಕುಮಾರ್​ ಒಲಿಂಪಿಕ್ಸ್​ ಪದಕ, ಪದ್ಮಶ್ರೀ, ಖೇಲ್​ರತ್ನ ಪ್ರಶಸ್ತಿ ವಾಪಸ್​ ಕೊಡ್ಬೇಕಾ?

    ರಾಬಿನ್‌ಸನ್ ಭಾನುವಾರ ಲಾರ್ಡ್ಸ್‌ನಲ್ಲಿ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ 7 ವಿಕೆಟ್ ಕಬಳಿಸಿದ್ದ 27 ವರ್ಷದ ರಾಬಿನ್‌ಸನ್, ಮೊದಲ ಇನಿಂಗ್ಸ್‌ನಲ್ಲಿ 42 ರನ್ ಸಿಡಿಸಿದ್ದರು. ಜನಾಂಗೀಯ ಹಾಗೂ ಲೈಂಗಿಕತೆ ಬಗ್ಗೆ ರಾಬಿನ್‌ಸನ್ 18 ಹಾಗೂ 19 ವಯಸ್ಸಿನಲ್ಲಿದ್ದಾಗ ಟ್ವೀಟ್ ಮಾಡಿದ್ದರು.

    ಇದನ್ನೂ ಓದಿ: VIDEO: ಬಾಲಿವುಡ್​ ಹಾಡಿಗೆ ಡೇವಿಡ್ ವಾರ್ನರ್ ಭರ್ಜರಿ ಸ್ಟೆಪ್ಸ್,

    ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಬಿನ್‌ಸನ್ ಮೊದಲ ದಿನದಾಟದ ಬಳಿಕ ಕ್ಷಮೆಯಾಚಿಸಿದ್ದರು. ಅಮಾನತುಗೊಂಡಿರುವ ಹಿನ್ನೆಲೆಯಲ್ಲಿ ರಾಬಿನ್‌ಸನ್ ಇಂಗ್ಲೆಂಡ್ ತಂಡ ತೊರೆಯಲಿದ್ದು, ತಮ್ಮ ಕೌಂಟಿ ತಂಡ ಸಸೆಕ್ಸ್ ಅನ್ನು ಕೂಡಿಕೊಳ್ಳಲಿದ್ದಾರೆ ಎಂದು ಇಸಿಬಿ ತಿಳಿಸಿದೆ. ಲಾರ್ಡ್ಸ್‌ನಲ್ಲಿ ಮುಕ್ತಾಯಗೊಂಡ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು.

    ಟೀಮ್​ ಇಂಡಿಯಾದ ಶ್ರೀಲಂಕಾ ಪ್ರವಾಸ ವೇಳಾಪಟ್ಟಿ ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts