More

    ಆಸೀಸ್-ಇಂಗ್ಲೆಂಡ್ ಕ್ರಿಕೆಟಿಗರನ್ನು ಐಪಿಎಲ್​ಗೆ ಕರೆತರುವ ವಿಶೇಷ ವಿಮಾನದ ಬಾಡಿಗೆ ಎಷ್ಟು ಗೊತ್ತೇ?

    ದುಬೈ: ಸೀಮಿತ ಓವರ್ ಸರಣಿಯ ಬಳಿಕ ಇಂಗ್ಲೆಂಡ್-ಆಸ್ಟ್ರೇಲಿಯಾ ತಂಡದ 22 ಆಟಗಾರರನ್ನು ಮ್ಯಾಂಚೆಸ್ಟರ್‌ನಿಂದ ದುಬೈಗೆ ಕರೆಸುವ ಬಾಡಿಗೆ ವಿಮಾನಕ್ಕಾಗಿ ಐಪಿಎಲ್‌ನ 7 ತಂಡಗಳು ಸುಮಾರು 1 ಕೋಟಿ ರೂ. ವೆಚ್ಚ ಮಾಡಲಿವೆ. ಸೆ. 16ರಂದು ಏಕದಿನ ಸರಣಿ ಮುಗಿದ ಬಳಿಕ ಆಸೀಸ್-ಇಂಗ್ಲೆಂಡ್ ಆಟಗಾರು ನೇರವಾಗಿ ಯುಎಇಗೆ ಪ್ರಯಾಣಿಸಲಿದ್ದಾರೆ. ಆದರೆ ಈ ಪೈಕಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಆಟಗಾರರಿಲ್ಲ. ಹೀಗಾಗಿ ಈ ಬಾಡಿಗೆ ವಿಮಾನಕ್ಕೆ ಮುಂಬೈ ತಂಡ ಯಾವುದೇ ಮೊತ್ತ ವ್ಯಯಿಸುತ್ತಿಲ್ಲ.

    ಇಂಗ್ಲೆಂಡ್‌ನ ಬಯೋ-ಬಬಲ್‌ನಿಂದ ನೇರವಾಗಿ ಈ ಆಟಗಾರರು ಬರಲಿರುವ ಕಾರಣ ಅವರಿಗೆ ದುಬೈನಲ್ಲಿ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗುತ್ತಿದೆ. ಆದರೆ ಅಬುಧಾಬಿಯಲ್ಲಿ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗುತ್ತಿಲ್ಲ. ಹೀಗಾಗಿ ಅಲ್ಲಿ ನೆಲೆಸಿರುವ ಕೋಲ್ಕತ ನೈಟ್‌ರೈಡರ್ಸ್‌ ತಂಡದ ಮೂವರು ಆಟಗಾರರಾದ ಇವೊಯಿನ್ ಮಾರ್ಗನ್, ಟಾಮ್ ಬಾಂಟನ್ ಮತ್ತು ಪ್ಯಾಟ್ ಕಮ್ಮಿನ್ಸ್ 6 ದಿನಗಳ ಕ್ವಾರಂಟೈನ್‌ಗೆ ಒಳಪಡುವುದು ಅಗತ್ಯವಾಗಿದೆ. ಆದರೆ ಕೆಕೆಆರ್ ತಂಡ ಟೂರ್ನಿಯಲ್ಲಿ ತಡವಾಗಿ ಅಂದರೆ ಸೆ. 23ರಂದು ಅಭಿಯಾನ ಆರಂಭಿಸಲಿರುವುದರಿಂದ ಆ ಪಂದ್ಯದ ವೇಳೆ ಈ ಮೂವರು ಆಟಗಾರರು ಲಭ್ಯರಾಗುತ್ತಾರೆ.

    ಆಟಗಾರರು ಒಂದು ವೇಳೆ ವಾಣಿಜ್ಯ ವಿಮಾನದಲ್ಲಿ ಆಗಮಿಸಿದರೆ ದುಬೈನಲ್ಲೂ ಕ್ವಾರಂಟೈನ್‌ಗೆ ಒಳಪಡುವುದು ಕಡ್ಡಾಯವಾಗಿರುತ್ತದೆ. ಹೀಗಾಗಿ ಅವರನ್ನು ಬಾಡಿಗೆ ವಿಮಾನದ ಮೂಲಕ ಅವರನ್ನು ಕರೆಸಿಕೊಳ್ಳಲಾಗುತ್ತಿದೆ. ಒಂದು ವೇಳೆ ಬಿಜಿನೆಸ್ ಕ್ಲಾಸ್ ಮೂಲಕ ವಾಣಿಜ್ಯ ವಿಮಾನದ ಮೂಲಕ ಆಗಮಿಸಿದರೆ ಆಗಲೂ 22 ಆಟಗಾರರ ಟಿಕೆಟ್‌ಗೆ ಸುಮಾರು 1 ಕೋಟಿ ರೂ. ಮೊತ್ತವೇ ಆಗುತ್ತದೆ ಎಂದು ್ರಾಂಚೈಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಈ ಬಾರಿ ಐಪಿಎಲ್ V/s ಬಿಗ್ ಬಾಸ್ ಮುಖಾಮುಖಿ!

    ಓಲ್ಡ್ ಟ್ರಾಫೋರ್ಡ್​‌ನಲ್ಲಿ ಅಂತಿಮ ಏಕದಿನ ಪಂದ್ಯ ಆಡಿದ ಬೆನ್ನಲ್ಲೇ ಆಟಗಾರರು ಸ್ಯಾನಿಟೈಸ್ಡ್ ಬಸ್ ಮೂಲಕ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ. ಅಲ್ಲಿಂದ ದುಬೈ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಆಟಗಾರರು, ತಮ್ಮ ಐಪಿಎಲ್ ತಂಡಗಳಿಗೆ ಸಂಬಂಧಿಸಿದ ಬಸ್ ಮೂಲಕ ಬಯೋ-ಬಬಲ್ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

    ಬಾಡಿಗೆ ವಿಮಾನ ಏರಲಿರುವ 22 ಆಟಗಾರರು:
    ಚೆನ್ನೈ ಸೂಪರ್‌ಕಿಂಗ್ಸ್: ಜೋಶ್ ಹ್ಯಾಸಲ್‌ವುಡ್, ಸ್ಯಾಮ್ ಕರ‌್ರನ್.
    ಡೆಲ್ಲಿ ಕ್ಯಾಪಿಟಲ್ಸ್: ಮಾರ್ಕಸ್ ಸ್ಟೋಯಿನಿಸ್, ಅಲೆಕ್ಸ್ ಕ್ಯಾರಿ, ಡೇನಿಯಲ್ ಸ್ಯಾಮ್ಸ್.
    ಆರ್‌ಸಿಬಿ: ಆರನ್ ಫಿಂಚ್, ಮೊಯಿನ್ ಅಲಿ, ಆಡಂ ಜಂಪಾ, ಜೋಶ್ ಫಿಲಿಪ್.
    ಕಿಂಗ್ಸ್ ಇಲೆವೆನ್ ಪಂಜಾಬ್: ಕ್ರಿಸ್ ಜೋರ್ಡನ್, ಗ್ಲೆನ್ ಮ್ಯಾಕ್ಸ್‌ವೆಲ್.
    ಕೆಕೆಆರ್: ಇವೊಯಿನ್ ಮಾರ್ಗನ್, ಪ್ಯಾಟ್ ಕಮ್ಮಿನ್ಸ್, ಟಾಮ್ ಬಾಂಟನ್.
    ರಾಜಸ್ಥಾನ ರಾಯಲ್ಸ್: ಸ್ಟೀವನ್ ಸ್ಮಿತ್, ಆಂಡ್ರೋ ಟೈ, ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಟಾಮ್ ಕರ‌್ರನ್.
    ಸನ್‌ರೈಸರ್ಸ್‌: ಡೇವಿಡ್ ವಾರ್ನರ್, ಜಾನಿ ಬೇರ್‌ಸ್ಟೋ, ಮಿಚೆಲ್ ಮಾರ್ಷ್.

    ಜಾರ್ಖಂಡ್ ಕ್ರಿಕೆಟ್ ಸಂಸ್ಥೆಗೆ ಧೋನಿ ಬಾಕಿ ಉಳಿಸಿಕೊಂಡ 1,800 ರೂಪಾಯಿಯಿಂದ ವಿವಾದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts