More

    VIDEO: ಇಂಗ್ಲೆಂಡ್​-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ

    ಸೌಥಾಂಪ್ಟನ್​: ಆತಿಥೇಯ ಇಂಗ್ಲೆಂಡ್​ ಹಾಗೂ ಪ್ರವಾಸಿ ಪಾಕಿಸ್ತಾನ ನಡುವಿನ 2ನೇ ಟೆಸ್ಟ್​ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿದೆ. ದ ರೋಸ್​ ಬೌಲ್​ ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್​ ಜಯಿಸಿ ಮೊದಲು ಬ್ಯಾಟಿಂಗ್​ ಆರಂಭಿಸಿರುವ ಪಾಕಿಸ್ತಾನ ತಂಡ, ವೇಗಿ ಜೇಮ್ಸ್​ ಆಂಡರ್​ಸನ್​ (24ಕ್ಕೆ 2) ಮಾರಕ ದಾಳಿಗೆ ನಲುಗಿ 33. 5 ಓವರ್​ಗಳಲ್ಲಿ 2 ವಿಕೆಟ್​ಗೆ 85 ರನ್​ ಗಳಿಸಿದ್ದ ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಇದರಿಂದಾಗಿ ನಿಗದಿತ ವೇಳೆಗೂ ಮೊದಲೇ ಚಹಾ ವಿರಾಮ ತೆಗೆದುಕೊಳ್ಳಲಾಯಿತು. ಭೋಜನ ವಿರಾಮದ ವೇಳೆಗೆ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್​ 1 ವಿಕೆಟ್​ಗೆ 62 ರನ್​ ಪೇರಿಸಿತ್ತು.
    ಮೊದಲ ಪಂದ್ಯದ ಮೊದಲ ಇನಿಂಗ್ಸ್​ನ ಶತಕ ಸಾಧಕ ಶಾನ್​ ಮಸೂದ್​ (1) ಇನಿಂಗ್ಸ್​ನ 3ನೇ ಓವರ್​ನಲ್ಲೇ ಜೇಮ್ಸ್​ ಆಂಡರ್​ಸನ್​ಗೆ ವಿಕೆಟ್​ ಒಪ್ಪಿಸಿದರು. ಬಳಿಕ ಅಬಿದ್​ ಅಲಿ (49) ಹಾಗೂ ನಾಯಕ ಅಜರ್​ ಅಲಿ (20) ಜೋಡಿ 2ನೇ ವಿಕೆಟ್​ಗೆ 72 ರನ್​ ಪೇರಿಸಿದ್ದ ವೇಳೆ ಆಂಡರ್​ಸನ್​ ಬೇರ್ಪಡಿಸಿದರು.
    ಇದಕ್ಕೂ ಮೊದಲು ಪಾಕಿಸ್ತಾನ 1 ಹಾಗೂ ಆತಿಥೇಯ ಇಂಗ್ಲೆಂಡ್​ ಎರಡು ಬದಲಾವಣೆ ಮಾಡಿಕೊಂಡವು. ಪಾಕ್​ ಪರ ಸ್ಪಿನ್ನರ್​ ಶಾದಾಬ್​ ಖಾನ್​ ಬದಲಿಗೆ, ಫವಾದ್​ ಅಲಂ 10 ವರ್ಷಗಳ ಬಳಿಕ ರಾಷ್ಟ್ರೀಯ ಟೆಸ್ಟ್​ ತಂಡಕ್ಕೆ ವಾಪಸಾದರು. ಇಂಗ್ಲೆಂಡ್​ ಪರ ಬೆನ್​ ಸ್ಟೋಕ್ಸ್​ ಬದಲಿಗೆ ಜಾಕ್​ ಕ್ರೌಲಿ ಹಾಗೂ ವೇಗಿ ಜೋಫ್ರಾ ಆರ್ಚರ್​ ಬದಲಿಗೆ ಸ್ಯಾಮ್​ ಕರನ್​ ತಂಡಕ್ಕೆ ವಾಪಸಾದರು.

    ಪಾಕಿಸ್ತಾನ : ಮೊದಲ ದಿನದಾಟದ ಚಹಾ ವಿರಾಮದ ವೇಳೆಗೆ 33.5 ಓವರ್​ಗಳಲ್ಲಿ 2 ವಿಕೆಟ್​ಗೆ 85 (ಅಬಿದ್​ ಅಲಿ 49 ಬ್ಯಾಟಿಂಗ್​, ಅಜರ್​ ಅಲಿ 20, ಆಂಡರ್​ಸನ್​ 24ಕ್ಕೆ 2)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts