More

    ಮೊದಲ ಟೆಸ್ಟ್: ಇಂಗ್ಲೆಂಡ್ ಎದುರು ಮೇಲುಗೈ ಸಾಧಿಸಿದ ನ್ಯೂಜಿಲೆಂಡ್

    ಲಂಡನ್: ಅನುಭವಿ ವೇಗಿ ಟೀಮ್ ಸೌಥಿ (43ಕ್ಕೆ 6) ಹಾಗೂ ಕೈಲ್ ಜೇಮಿಸನ್ (85ಕ್ಕೆ 3) ಜೋಡಿಯ ಮಾರಕ ದಾಳಿ ನೆರವಿನಿಂದ ಪ್ರವಾಸಿ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ಮೇಲುಗೈ ಸಾಧಿಸಿದೆ. ಮಳೆಯಿಂದಾಗಿ 3ನೇ ದಿನದಾಟ ಒಂದೇ ಒಂದು ಎಸೆತ ಕಾಣದೆ ರದ್ದುಗೊಂಡಿತ್ತು.

    ಇದನ್ನೂ ಓದಿ: VIDEO: ಬಾಲಿವುಡ್​ ಹಾಡಿಗೆ ಡೇವಿಡ್ ವಾರ್ನರ್ ಭರ್ಜರಿ ಸ್ಟೆಪ್ಸ್,

    ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 2 ವಿಕೆಟ್‌ಗೆ 111 ರನ್‌ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ, ರೋರಿ ಬರ್ನ್ಸ್ (132ರನ್, 297 ಎಸೆತ, 16 ಬೌಂಡರಿ, 1 ಸಿಕ್ಸರ್) ಶತಕದಾಟದ ನಡುವೆಯೂ 101.1 ಓವರ್‌ಗಳಲ್ಲಿ 275 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ 103 ರನ್ ಮುನ್ನಡೆಯೊಂದಿಗೆ 2ನೇ ಸರದಿ ಬ್ಯಾಟಿಂಗ್ ಆರಂಭಿಸಿರುವ ನ್ಯೂಜಿಲೆಂಡ್ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗೆ 62 ರನ್ ಪೇರಿಸಿದ್ದು, ಒಟ್ಟಾರೆ 165 ರನ್ ಮುನ್ನಡೆ ಸಾಧಿಸಿದೆ. ಪಂದ್ಯ ಬಹುತೇಕ ಡ್ರಾ ಹಾದಿ ಹಿಡಿದಿದೆ. ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 378 ರನ್ ಗಳಿಸಿತ್ತು.

    ಇದನ್ನೂ ಓದಿ: ಭಾರತ ತಂಡದ ಅಭ್ಯಾಸದ ಮೈದಾನ ಹೇಗಿದೆ ಗೊತ್ತೇ? 

    ನ್ಯೂಜಿಲೆಂಡ್: 378 ಮತ್ತು 2 ವಿಕೆಟ್‌ಗೆ 62 (ಟಾಮ್ ಲಾಥಮ್ 30*, ಒಲಿ ರಾಬಿನ್‌ಸನ್ 8ಕ್ಕೆ 2), ಇಂಗ್ಲೆಂಡ್: 275 (ರೋರಿ ಬರ್ನ್ಸ್ 132, ಟಿಮ್ ಸೌಥಿ 43ಕ್ಕೆ 6, ಕೈಲ್ ಜೇಮಿಸನ್ 85ಕ್ಕೆ 3).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts