More

    ಹೆಚ್ಚು ಮಾರ್ಕ್ಸ್​ ಕೊಡದಿದ್ರೆ ಅಷ್ಟೇ.. ನಿಮ್ಮ ಖಾಸಗಿ ಫೋಟೋ ವೈರಲ್​; ಉಪನ್ಯಾಸಕಿಗೇ ಬ್ಲ್ಯಾಕ್​ಮೇಲ್​ ಮಾಡಿದ ವಿದ್ಯಾರ್ಥಿ

    ಬೆಂಗಳೂರು: ‘ದಯವಿಟ್ಟು ಪಾಸ್​ ಮಾಡಿ..’ ಎಂದೆಲ್ಲ ಕೆಲವು ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಬರೆದಿಟ್ಟು, ಹೆಚ್ಚಿನ ಅಂಕಗಳನ್ನು ಪಡೆಯಲು ಯತ್ನಿಸಿದ ಒಂದಷ್ಟು ಪ್ರಕರಣಗಳು ಈ ಹಿಂದೆ ವರದಿಯಾಗಿವೆ. ಆದರೆ ಇದು ಅತಿರೇಕದ ಬೇಡಿಕೆ ಎಂದರೂ ತಪ್ಪೇನಲ್ಲ. ಏಕೆಂದರೆ ಇಲ್ಲೊಬ್ಬ ವಿದ್ಯಾರ್ಥಿ ಹೆಚ್ಚಿನ ಅಂಕಗಳನ್ನು ಪಡೆಯುವ ಸಲುವಾಗಿ ಉಪನ್ಯಾಸಕಿಗೇ ಬ್ಲ್ಯಾಕ್​ಮೇಲ್ ಮಾಡಿದ್ದಾನೆ.

    ಉತ್ತರ ಪತ್ರಿಕೆ ಮೌಲ್ಯಮಾಪನ ವೇಳೆ ಹೆಚ್ಚಿನ ಅಂಕ ನೀಡಬೇಕು ಎಂದು ಒತ್ತಾಯಿಸಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಧಮಕಿ ಹಾಕಿದ್ದು, ಉಪನ್ಯಾಸಕಿ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. ಆರ್.ಟಿ. ನಗರದ ನಿವಾಸಿಯಾಗಿರುವ 40 ವರ್ಷದ ಉಪನ್ಯಾಸಕಿ, ಈ ಸಂಬಂಧ ಉತ್ತರ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಆ ಮೇರೆಗೆ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಸಿಇಎನ್ ಠಾಣೆ ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಕರೊನಾ ಲಸಿಕೆ ಪಡೆದ ಹತ್ತೇ ದಿನಗಳಲ್ಲಿ ಸತ್ತ!; ಸಾವಿಗೆ ಕಾರಣ ವಿಷ ಎಂದಿತ್ತು ಮರಣೋತ್ತರ ಪರೀಕ್ಷೆಯಲ್ಲಿ… 

    ಸಂತ್ರಸ್ತೆ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿ ಆಗಿದ್ದಾರೆ. ಈ ನಡುವೆ ವಿದ್ಯಾರ್ಥಿ, ಉಪನ್ಯಾಸಕಿಗೆ ಕರೆ ಮಾಡಿ ಉತ್ತರಪತ್ರಿಕೆಗಳ ಮೌಲ್ಯ ಮಾಪನದ ವೇಳೆ ಹೆಚ್ಚಿನ ಅಂಕ ಕೊಡಬೇಕು. ಇಲ್ಲವಾದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಿಮ್ಮ ಖಾಸಗಿ ಫೋಟೋಗಳನ್ನು ಕುಟುಂಬ ಸದಸ್ಯರಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ. ಇದೇ ವಿಚಾರಕ್ಕೆ ಉಪನ್ಯಾಸಕಿಯ ಕುಟುಂಬ ಸದಸ್ಯರಿಗೆ ಕರೆ ಮಾಡಿ 82 ಸಾವಿರ ರೂಪಾಯಿಗೆ ಬೇಡಿಕೆ ಒಡ್ಡಿದ್ದು, ಹಣ ಕೊಡದೆ ಇದ್ದರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ. ತಂತ್ರಜ್ಞಾನ ಬಳಸಿ ವಿದ್ಯಾರ್ಥಿ ನನ್ನ ಫೋಟೋ ಎಡಿಟ್ ಮಾಡಿ ದುರ್ಬಳಕೆ ಮಾಡಿಕೊಂಡಿದ್ದಾನೆ. ಇದರಿಂದ ನನ್ನ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಉಪನ್ಯಾಸಕಿ ದೂರು ಕೊಟ್ಟಿದ್ದಾರೆ.

    ಜನರು ಡಾಕ್ಟರ್ ಆಗೋದೇ ಕೈತುಂಬ ವರದಕ್ಷಿಣೆ ಪಡೆಯೋಕಂತೆ!; ಹೇಳಿಕೆ ವಿರೋಧಿಸಿ ಮುಖ್ಯಮಂತ್ರಿಗೆ ದೂರಿತ್ತ ಐಎಂಎ

    ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts