More

    ಉತ್ತಮ ಉದ್ಯೋಗಿಗೆ ಸಿಕ್ಕಿತು ‘ಚಂದ್ರನ ತುಂಡು’!; ಚಂದ್ರಲೋಕದಲ್ಲಿ ಒಂದು ಎಕರೆ ಜಾಗ ಉಡುಗೊರೆ ಕೊಟ್ಟ ಕಂಪನಿ

    ನವದೆಹಲಿ: ಅದೆಷ್ಟೇ ಕೆಲಸ ಮಾಡಿದರೂ ಸಾಮಾನ್ಯ ಜನರು ಈ ಭೂಮಿ ಮೇಲೆ ಒಂದು ಜಾಗ ಖರೀದಿಸಲು ಹರಸಾಹಸ ಪಡಬೇಕಾಗುತ್ತದೆ. ಆದರೆ ಇಲ್ಲೊಬ್ಬರು ತಮ್ಮ ಕೆಲಸದಿಂದಲೇ ಚಂದ್ರಲೋಕದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ. ಇವರ ಕೆಲಸಕ್ಕೆ ಪ್ರತಿಯಾಗಿ ಚಂದ್ರನ ಮೇಲೆ ಒಂದು ಎಕರೆ ಜಾಗವನ್ನು ಕಂಪನಿ ಉಡುಗೊರೆಯಾಗಿ ಕೊಟ್ಟಿದೆ.

    ಹೀಗೆ ಚಂದ್ರ ಲೋಕದಲ್ಲಿನ ಜಾಗವನ್ನು ಉಡುಗೊರೆಯಾಗಿ ಪಡೆದ ಉದ್ಯೋಗಿಯ ಹೆಸರು ಇಫ್ಟೇಕರ್​ ರಹಮಾನಿ. ಬಿಹಾರ ಮೂಲದ ಇವರು ನೋಯ್ಡಾದಲ್ಲಿ ಕೆಲಸ ಮಾಡುತ್ತಿದ್ದಾರೆ. ನೋಯ್ಡಾದಲ್ಲಿ ಇವರು ಎಆರ್​ ಸ್ಟುಡಿಯೋಸ್​ ಎಂಬ ಸಾಫ್ಟ್​ವೇರ್ ಕಂಪನಿ ಹೊಂದಿದ್ದಾರೆ. ಈ ಕಂಪನಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​ ಕುರಿತ ಸೇವೆ ನೀಡುತ್ತಿದೆ. ಮತ್ತೊಂದೆಡೆ ಲೂನಾ ಸೊಸೈಟಿ ಇಂಟರ್​ನ್ಯಾಷನಲ್​ ಎಂಬ ಅಮೆರಿಕದ ಕಂಪನಿಗೂ ರಹಮಾನಿ ಅವರೇ ಸಾಫ್ಟ್​ವೇರ್​ ಅಭಿವೃದ್ಧಿ ಮಾಡಿಕೊಡುತ್ತಿದ್ದಾರೆ. ಚಂದ್ರಲೋಕದಲ್ಲಿನ ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ತೊಡಗಿಕೊಂಡಿರುವ ಈ ಕಂಪನಿ, ರಹಮಾನಿ ಅವರ ಸಾಫ್ಟ್​ವೇರ್​ನಿಂದ ಉತ್ತಮ ಲಾಭ ಹೊಂದಿದ್ದರಿಂದ ಚಂದ್ರಲೋಕದಲ್ಲಿನ 1 ಎಕರೆ ಜಾಗವನ್ನು ಉಡುಗೊರೆಯಾಗಿ ಕೊಟ್ಟಿದೆ.

    ಇದನ್ನೂ ಓದಿ: ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!

    ಹಿಂದಿ ಚಿತ್ರನಟರಾದ ಶಾರುಖ್​ ಖಾನ್​, ಸುಶಾಂತ್ ಸಿಂಗ್ ರಜಪೂತ್, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು ಈಗಾಗಲೇ ಚಂದ್ರಲೋಕದಲ್ಲಿ ಭೂಮಿ ಖರೀದಿಸಿದ್ದು, ಈಗ ಆ ಪಟ್ಟಿಯಲ್ಲಿ ಇಫ್ಟೇಕರ್​ ರಹಮಾನಿ ಅವರ ಹೆಸರೂ ಸೇರಿಕೊಂಡ ಹಾಗಾಗಿದೆ.

    ಇದನ್ನೂ ಓದಿ: ಯೋಧನ ಪತ್ನಿಯ ಜೀವ ಕಸಿದ ವಿಡಿಯೋಕಾಲ್​- ಬೈಕ್​ನಲ್ಲಿ ಹೋಗುವಾಗ ಅವಘಡ

    ಎಲ್​​ಪಿಜಿ ದರ 10 ರೂ. ಇಳಿಕೆ; 14.2 ಕೆ.ಜಿ. ಸಿಲಿಂಡರ್‌ಗೆ 812 ರೂಪಾಯಿ.

    ಇಂಥ ಮದುವೆ ಇನ್ಯಾವುದೂ ಆಗೇ ಇಲ್ಲ ಅನಿಸುತ್ತೆ!: ತೋಟದಲ್ಲೇ ಲಗ್ನ, ಸೈಕಲಲ್ಲೇ ದಿಬ್ಬಣ; ಒಟ್ಟು ಖರ್ಚೆಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts