More

    ಭಾರತವನ್ನು ಅಲ್ಲಾಡಿಸಲು ನೇಪಾಳವನ್ನು ಛೂಬಿಟ್ಟ ಚೀನಾ! ಏನಿದು ಹೊಸ ಕುತಂತ್ರ?

    ನವದೆಹಲಿ: ಭಾರತವನ್ನು ನೇರವಾಗಿ ಎದುರಿಸಲು ಧೈರ್ಯ ಸಾಲದ ಚೀನಾ ಇದೀಗ ಭಾರತಕ್ಕೆ ಬೆದರಿಕೆ ಹಾಕಲು ನೇಪಾಳವನ್ನು ಪುನಃ ಛೂಬಿಟ್ಟಿದೆ. 

    ಚೀನಾದ ಕೈಗೊಂಬೆಯಾಗಿ ಆಡುತ್ತಿರುವ ನೇಪಾಳದ ಪರಿಸ್ಥಿತಿ ಸದ್ಯದ ಮಟ್ಟಿಗೆ ಸರಿಯಿಲ್ಲ. ಅಲ್ಲಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರ ಖುರ್ಚಿಯೇ ಅಲ್ಲಾಡುತ್ತಿದೆ. ಇಂಥ ಸಂದರ್ಭದಲ್ಲಿ ಭಾರತಕ್ಕೆ ಬೆದರಿಕೆ ಹಾಕಲು ನೇಪಾಳ ಪ್ರಾರಂಭಿಸಿದೆ. ಇದು ಸ್ವಲ್ಪ ಮಟ್ಟಿಗೆ ಭಾರತಕ್ಕೂ ಸವಾಲಿನ ದಿನಗಳೇ.

    ಅಷ್ಟಕ್ಕೂ ಈ ಬೆದರಿಕೆ ಏನೆಂದರೆ ನದಿಯುದ್ದಕ್ಕೂ ಒಡ್ಡುಗಳ ಒಂದು ಭಾಗವನ್ನು ತೆಗೆದುಹಾಕುವಂತೆ ನೇಪಾಳ ಹೇಳಿದೆ. ಒಂದು ವೇಳೆ ಭಾರತವು ಒಡ್ಡು ತೆಗೆಯದಿದ್ದರೆ ತಾನೇ ಅದನ್ನು ಮುರಿಯುವುದಾಗಿ ಹೇಳಿದೆ. ಒಂದೊಮ್ಮೆ ನೇಪಾಳ ಈ ಒಡ್ಡು ತೆಗೆದದ್ದೇ ಆದರೆ ಬಿಹಾರದಲ್ಲಿ ತೀವ್ರ ಸ್ವರೂಪದ ಪ್ರವಾಹ ಬರುವ ಸಾಧ್ಯತೆ ಇದೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಚೀನಾ, ನೇಪಾಳವನ್ನು ಇದೀಗ ಛೂಬಿಟ್ಟಿದೆ.

    ಇದನ್ನೂ ಓದಿ: ನೇಪಾಳದ ಈ ಸುಂದರಿ ಕತೆ ಕೇಳಿ…

    ಚೀನಾದ ಮಾತು ಕೇಳಿರುವ ನೇಪಾಳ, ಭಾರತಕ್ಕೆ ಲಾಲ್‌ಬಕಯ್ಯ ನದಿಯ ಒಡ್ಡು ತೆಗೆಯುವಂತೆ ಬೆದರಿಕೆ ಹಾಕಿದ್ದು ಒಂದೊಮ್ಮೆ ಭಾರತ ಇದನ್ನು ತೆಗೆಯದಿದ್ದರೆ ಅದನ್ನು ಮುರಿಯುವುದಾಗಿ ಹೇಳಿದೆ. ಈ ನದಿಯು ಭಾರತದ ಗಡಿಯಲ್ಲಿರುವ ಬಂಜಾರಹ ಬಳಿಯ ನೋ ಮೆನ್ಸ್ ಲ್ಯಾಂಡ್‌ನ ಪಕ್ಕದಲ್ಲಿದೆ. ಇದರಲ್ಲಿ ನೇಪಾಳವು ಒಡ್ಡು ಭಾಗವನ್ನು ತೆಗೆದುಹಾಕಲು ಬಯಸಿದೆ. ಭಾರತ ಇದನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ಹಾಗೆ ಮಾಡುವುದರಿಂದ ಬಿಹಾರ ಪ್ರವಾಹಕ್ಕೆ ಸಿಲುಕಬಹುದು.

    ಈ ನದಿಯ ಒಡ್ಡು ಎರಡು ಮೀಟರ್ ಅಗಲವಿದೆ. ಆದರೆ ಅದರ ಉದ್ದ ಇನ್ನೂರು ಮೀಟರ್. ನೇಪಾಳದ ರೌತತ್ ಜಿಲ್ಲಾಡಳಿತವು ಬಿಹಾರ ಸರ್ಕಾರದ ಜಲಸಂಪನ್ಮೂಲ ಇಲಾಖೆಯು ಎರಡು ಮೀಟರ್ ಅಗಲ ಮತ್ತು 200 ಮೀಟರ್ ಉದ್ದದ ಒಡ್ಡು ನೋ-ಮ್ಯಾನ್ಸ್ ಭೂಮಿಯನ್ನು ಅತಿಕ್ರಮಿಸಿದೆ ಎಂದು ವಾದಿಸಿಸುತ್ತಿದೆ.

    ಒಡ್ಡುಗಳಲ್ಲಿ 11 ಸ್ಥಳಗಳಲ್ಲಿ ಕಂಬಗಳನ್ನು ನಿರ್ಮಿಸಲಾಗಿದೆ ಮತ್ತು ಭೂಮಿಯಲ್ಲಿ ಸುಮಾರು ಎರಡು ಮೀಟರ್ ಮತ್ತು ಒಂದು ಮೀಟರ್ ಅತಿಕ್ರಮಣ ಮಾಡುವ ಮೂಲಕ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ ಎಂದು ನೇಪಾಳದ ರೌತತ್‌ನ ಸಿಡಿಒ (ಡಿಎಂ) ವಾಸುದೇವ್ ಘಿಮ್ರೆ ಹೇಳುತ್ತಿದ್ದಾರೆ. ಭಾರತ ಏನು ನಿರ್ಧಾರ ಮಾಡಿಲಿದೆ ಎನ್ನುವುದನ್ನು ಇನ್ನಷ್ಟೇ ಕಾದು ನೋಡಬೇಕಿದೆ. (ಏಜೆನ್ಸೀಸ್‌)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts