More

    ಎಮಿಷನ್​ನಲ್ಲೂ ಗೋಲ್ಮಾಲ್ !

    ವಾಹನ ಮಾಲೀಕರ ಯಾಮಾರಿಸಿ ವರ್ಷಕ್ಕೆ 2 ಬಾರಿ ವಸೂಲಿ * ನಕಲಿ ದಂಧೆ ಮೂಲಕವೂ ಲಕ್ಷಾಂತರ ರೂಪಾಯಿ ಕಮಾಯಿ

    ಕೀರ್ತಿನಾರಾಯಣ ಸಿ ಬೆಂಗಳೂರು

    ರಾಜ್ಯಾದ್ಯಂತ ವಾಹನ ಮಾಲೀಕರನ್ನು ಯಾಮಾರಿಸಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ವಾಯುಮಾಲಿನ್ಯ ಪ್ರಮಾಣ ಪರೀಕ್ಷಾ (ಎಮಿಷನ್) ಕೇಂದ್ರಗಳ ಕಳ್ಳಾಟ ಬಯಲಾಗಿದೆ. ಈ ಲೂಟಿ ವಿಚಾರ ಗೊತ್ತಿದ್ದರೂ ದಂಧೆಗೆ ಕಡಿವಾಣ ಹಾಕಬೇಕಿದ್ದ ಸಾರಿಗೆ ಇಲಾಖೆಯ ಜಾಣ ಕುರುಡು ಒಂದೆಡೆಯಾದರೆ, ವಾಹನ ಮಾಲೀಕರ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಎಡವಟ್ಟು ದುಡ್ಡು ಮಾಡುವ ವಂಚಕರ ಹಾದಿಯನ್ನು ಮತ್ತಷ್ಟು ಸುಗಮವಾಗಿಸಿದೆ.

    ಎಷ್ಟು ಕೇಂದ್ರಗಳಿವೆ?

    ರಾಜ್ಯಾದ್ಯಂತ 1100ಕ್ಕೂ ಅಧಿಕ ಎಮಿಷನ್ ಟೆಸ್ಟಿಂಗ್ ಕೇಂದ್ರಗಳಿವೆ. ಇದರಲ್ಲಿ ಬೆಂಗಳೂರಲ್ಲೇ 350ಕ್ಕೂ ಹೆಚ್ಚು ಕೇಂದ್ರಗಳಿವೆ.

    ಮೊದಲೇ ಕೇಳಬೇಕಿತ್ತು

    1 ವರ್ಷದ ಬದಲು 6 ತಿಂಗಳಿಗೆ ಸರ್ಟಿಫಿಕೇಟ್ ಮಾಡಿಕೊಟ್ಟಿದ್ದನ್ನು ಒಂದು ವೇಳೆ ಮಾಲೀಕರು ಪ್ರಶ್ನಿಸಿದರೆ ಮೊದಲೇ ಹೇಳಬೇಕಿತ್ತು ಸರ್ ಎಂದು ಕೇಂದ್ರದ ಸಿಬ್ಬಂದಿಯೇ ದಬಾಯಿಸುತ್ತಾರೆ. 6 ತಿಂಗಳು ಅಥವಾ 1 ವರ್ಷ ಅವಧಿಗೆ ಯಾವುದು ಬೇಕೆಂದು ಮೊದಲೇ ತಿಳಿಸಬೇಕು. ಹೇಳಿದರೆ ಮಾತ್ರ ಮಾಡುತ್ತೇವೆ ಎನ್ನುತ್ತಾರೆ.

    ಎಮಿಷನ್​ನಲ್ಲೂ ಗೋಲ್ಮಾಲ್ !ಸರ್ಕಾರದ ನಿಯಮದ ಪ್ರಕಾರ ಬಿಎಸ್-3 ಇಂಜಿನ್ ಹಾಗೂ ಇದಕ್ಕಿಂತ ಮುಂಚಿನ ವಾಹನಗಳಿಗೆ 6 ತಿಂಗಳು ಹಾಗೂ ಬಿಎಸ್-4 ಇಂಜಿನ್ ವಾಹನಗಳಿಗೆ 1 ವರ್ಷದ ಅವಧಿಗೆ ಎಮಿಷನ್ ಸರ್ಟಿಫಿಕೇಟ್ ಕೊಡಬೇಕು. ಸರ್ಟಿಫಿಕೇಟ್​ನಲ್ಲೂ ಈ ಬಗ್ಗೆ ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ, ಹಣ ಮಾಡುವ ದುರುದ್ದೇಶದಿಂದ ಎಲ್ಲ ವಾಹನಗಳಿಗೂ 1 ವರ್ಷದ ಬದಲಿಗೆ 6 ತಿಂಗಳ ಅವಧಿಗೆ ಸರ್ಟಿಫಿಕೆಟ್ ವಿತರಿಸಿ ಮೋಸ ಮಾಡುವ ಮುಖಾಂತರ ಕೋಟ್ಯಂತರ ರೂ. ಲೂಟಿ ಮಾಡಲಾಗುತ್ತಿದೆ.

    5 ಕೋಟಿ ರೂ.ಲೂಟಿ!
    ರಾಜ್ಯಾದ್ಯಂತ ಅಂದಾಜು 2 ಕೋಟಿ ವಾಹನಗಳಿದ್ದು, ಈ ಪೈಕಿ ಬೆಂಗಳೂರಲ್ಲೇ 76 ಲಕ್ಷಕ್ಕಿಂತ ಹೆಚ್ಚಿವೆ. ಇದರಲ್ಲಿ 1.4 ಕೋಟಿ ದ್ವಿಚಕ್ರ ವಾಹನ ಹಾಗೂ 24 ಲಕ್ಷ ಕಾರುಗಳಿವೆ. 2 ಕೋಟಿ ವಾಹನಗಳಲ್ಲಿ 1 ಕೋಟಿ ಬಿಎಸ್ 4 ಮತ್ತು ಬಿಎಸ್ 6 ಇಂಜಿನ್ ವಾಹನಗಳಿವೆ ಎಂದು ಅಂದಾಜಿಸಿ ಸರಾಸರಿ ಪ್ರತಿ ವಾಹನದಿಂದ ಕನಿಷ್ಠ 50 ರೂ. ಹೆಚ್ಚುವರಿ ವಸೂಲಿ ಮಾಡಲಾಗುತ್ತಿದೆ ಎಂದುಕೊಂಡರೂ ವಾರ್ಷಿಕ 5 ಕೋಟಿ ರೂ. ವಂಚಕರ ಜೇಬು ಸೇರುತ್ತಿದೆ.

    ಇದನ್ನೂ ಓದಿ:  ತಾಯಿಯೇ ಹಂತಕಿಯಾದಾಗ…: ಡಾ.ಡಿ.ವಿ.ಗುರುಪ್ರಸಾದ್ ಅವರ ಆ ಕ್ಷಣ.. ಅಂಕಣ

    ಎಮಿಷನ್​ನಲ್ಲೂ ಗೋಲ್ಮಾಲ್ !

    ವಂಚನೆ ಹೇಗೆ?
    ಬಿಎಸ್ 4 ಇಂಜಿನ್​ನ ಡೀಸೆಲ್ ಕಾರ್​ನ ವರ್ಷದ ಅವಧಿಯ ಎಮಿಷನ್ ಸರ್ಟಿಫಿಕೇಟ್​ಗೆ 125 ರೂ. ಶುಲ್ಕ ವಿದೆ. ಆದರೆ, ಎಮಿಷನ್ ಕೇಂದ್ರಗಳವರು 125 ರೂ. ತೆಗೆದುಕೊಂಡು ಕೇವಲ 6 ತಿಂಗಳ ಅವಧಿಗೆ ಮಾತ್ರ ಸರ್ಟಿಫಿಕೇಟ್ ನೀಡುತ್ತಿದ್ದಾರೆ. ಹೀಗಾಗಿ ವಾರ್ಷಿಕ 2 ಬಾರಿ ಸರ್ಟಿಫಿಕೇಟ್ ಪಡೆಯಲು ವಾಹನ ಮಾಲೀಕರು ಒಟ್ಟು 250 ರೂ. ಪಾವತಿಸಬೇಕಾಗುತ್ತದೆ. ಅಂದರೆ 1 ವಾಹನದಿಂದ ವಾರ್ಷಿಕ ಹೆಚ್ಚುವರಿಯಾಗಿ 125 ರೂ. ಸುಲಿಗೆ ಮಾಡಿದಂತಾಗುತ್ತದೆ. ಅದೇ ರೀತಿ ಪೆಟ್ರೋಲ್ ಕಾರಿಗೆ 90 ರೂ. ನಿಗದಿ ಪಡಿಸಲಾಗಿದೆ. ದ್ವಿಚಕ್ರ ವಾಹನಕ್ಕೆ 50 ರೂ. ಹಾಗೂ 3 ಚಕ್ರದ ವಾಹನಗಳಿಗೆ 60 ರೂ. ಇದೆ. ಜನರನ್ನು ಯಾಮಾರಿಸಿ 6 ತಿಂಗಳ ಸರ್ಟಿಫಿಕೇಟ್ ಮಾಡಿಕೊಡುವುದರಿಂದ ವಾರ್ಷಿಕ ಎರಡೆರಡು ಬಾರಿ ಹಣ ವಸೂಲಿ ಮಾಡಲಾಗುತ್ತಿದೆ.

    ಇದನ್ನೂ ಓದಿ:  ನ್ಯಾವಿಗೇಷನ್ ವ್ಯವಸ್ಥೆಯಲ್ಲೂ ಆತ್ಮನಿರ್ಭರ – ಜಿಪಿಎಸ್​ಗೆ ಪರ್ಯಾಯವಾಗಿ ದೇಶೀಯ ಐಆರ್​ಎನ್​ಎಸ್​ಎಸ್ ಸಿದ್ಧ

    ನಕಲಿಯೂ ಸಲೀಸು
    ಕಳ್ಳದಾರಿಯಲ್ಲಿ ಹೆಚ್ಚುವರಿ ವಸೂಲಿ ಒಂದೆಡೆಯಾದರೆ ನಕಲಿ ಸರ್ಟಿಫಿಕೇಟ್ ವಿತರಣೆ ಮತ್ತೊಂದು ದಂಧೆ. ಎಮಿಷನ್ ಟೆಸ್ಟಿಂಗ್ ಕೇಂದ್ರ ಆರಂಭಿಸಲು ಸಾರಿಗೆ ಇಲಾಖೆ ಅನುಮತಿ ಕಡ್ಡಾಯ. 2 ಸಾವಿರ ರೂ. ಶುಲ್ಕ ಹಾಗೂ 10 ಸಾವಿರ ರೂ. ಠೇವಣಿ ಇಟ್ಟು ಅರ್ಜಿ ಸಲ್ಲಿಸಿದರೆ ಷರತ್ತುಗಳನ್ನು ಪರಿಶೀಲಿಸಿ ಅನುಮತಿ ನೀಡಲಾಗುತ್ತದೆ. ಆದರೆ, ಕೆಲವರು ತಾವೇ ಕೇಂದ್ರಗಳನ್ನು ಆರಂಭಿಸಿಕೊಂಡು ನಕಲಿ ಹಾಲೋಗ್ರಾಂಗಳನ್ನು ಅಂಟಿಸಿ ಮಾಲಿನ್ಯ ಪ್ರಮಾಣ ಪತ್ರಗಳನ್ನು ವಿತರಿಸುತ್ತಿದ್ದಾರೆ. ಇಂತಹ 21 ಕೇಂದ್ರಗಳ ವಿರುದ್ಧ ವಿಲ್ಸನ್​ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ.

    ಇದನ್ನೂ ಓದಿ:  ದೇಶಭಾಷೆಯಲ್ಲಿ ವ್ಯವಹಾರ, ಜನಹಿತ ಆಡಳಿತ : ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಸಾಮಯಿಕ ಅಂಕಣ

    ಇನ್​ಸ್ಪೆಕ್ಟರ್​ಗೇ ಧೋಖಾ!
    ಆರ್​ಟಿಒ ಬ್ರೇಕ್ ಇನ್​ಸ್ಪೆಕ್ಟರ್ ಕಾರಿಗೆ ವರ್ಷದ ಬದಲು 6 ತಿಂಗಳ ಅವಧಿಗೆ ಎಮಿಷನ್ ಸರ್ಟಿಫಿಕೇಟ್ ಕೊಟ್ಟು ಯಾಮಾರಿಸಿರುವ ಪ್ರಕರಣವೂ ಬೆಳಕಿಗೆ ಬಂದಿದೆ. ಕಳೆದ ಬಾರಿ 1 ವರ್ಷದ ಅವಧಿಗೆ ಎಮಿಷನ್ ಮಾಡಿಸಿದ್ದರು. ಈ ವರ್ಷ 6 ತಿಂಗಳ ಅವಧಿಗೆ ಕೊಟ್ಟಿದ್ದಾರೆ. ಈ ಕುರಿತು ಎಮಿಷನ್ ಟೆಸ್ಟಿಂಗ್ ಕೇಂದ್ರದ ಸಿಬ್ಬಂದಿ ಪ್ರಶ್ನಿಸಿದಾಗ ಆನ್​ಲೈನ್​ನಲ್ಲಿ ಏನು ನಿಗದಿಯಾಗಿತ್ತೋ ಅದನ್ನೇ ಮಾಡಿಕೊಟ್ಟಿದ್ದೇವೆ. ಬೇಕಾದರೆ ಸಾರಿಗೆ ಇಲಾಖೆಯಲ್ಲಿ ವಿಚಾರಿಸಿಕೊಳ್ಳಿ ಎಂದು ಹಾರಿಕೆ ಉತ್ತರ ಕೊಟ್ಟಿದ್ದಾರೆ.

    ಇದನ್ನೂ ಓದಿ: Web Exclusive | ಜೆಟಿಒ ನೇಮಕಾತಿಗೆ ಗ್ರಹಣ – ಮೂರು ವರ್ಷವಾದರೂ ಪೂರ್ಣಗೊಳ್ಳದ ಪ್ರಕ್ರಿಯೆ

    ಜನ ಮಾಡಬೇಕಾದ್ದು
    * ಶುಲ್ಕ 6 ತಿಂಗಳಿಗೆಷ್ಟು? ವರ್ಷಕ್ಕೆಷ್ಟು ಎಂದು ಕೇಳಿದರೆ ವಂಚನೆ ಆಗಲ್ಲ
    * ಸರ್ಟಿಫಿಕೇಟ್ ಪಡೆದ ಬಳಿಕ ಅದನ್ನು ಗಮನಿಸಿದರೆ ಅದರ ಮೇಲೆಯೇ ವಿವರ ನಮೂದಾಗಿರುತ್ತದೆ
    * ಒಂದು ವೇಳೆ ವಂಚಿಸಿರುವುದು ಸಾಬೀತಾದರೆ ಕೂಡಲೇ ಪೊಲೀಸ್ ಠಾಣೆ ಅಥವಾ ಆರ್​ಟಿಒಗಳಿಗೆ ದೂರು ಕೊಡಿ

    ಸಾರಿಗೆ ಇಲಾಖೆ ನಿರ್ಲಕ್ಷ್ಯವೇನು?
    * ಬಿಎಸ್-3 ಮತ್ತು ಬಿಎಸ್ 4 ವಾಹನಗಳ ಸರ್ಟಿಫಿಕೇಟ್ ಅವಧಿ ಬಗ್ಗೆ ಜಾಗೃತಿ ಮೂಡಿಸಿಲ್ಲ
    * ಮಾಲಿನ್ಯ ಪ್ರಮಾಣ ಪತ್ರ ವಿತರಣಾ ಕೇಂದ್ರಗಳ ಬಗ್ಗೆ ಕಾಲ ಕಾಲಕ್ಕೆ ಪರಿಶೀಲನೆ ಮಾಡಿಸುತ್ತಿಲ್ಲ
    * ವಂಚನೆ ಆರೋಪ ಹೊತ್ತ ಕೇಂದ್ರಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಲ್ಲಿ ವಿಫಲ

    ಇದನ್ನೂ ಓದಿ:  2021ರಲ್ಲಿ 269 ದಿನವಷ್ಟೇ ಸರ್ಕಾರಿ ಕಚೇರಿ! – ಸರ್ಕಾರಿ ನೌಕರರಿಗೆ 19 ಪರಿಮಿತ ರಜೆ ಗಿಫ್ಟ್ ನೀಡಿದ ರಾಜ್ಯ ಸರ್ಕಾರ

    ಸರ್ಟಿಫಿಕೆಟ್ ಗೊಂದಲ
    ಬಿಎಸ್-6 ಇಂಜಿನ್ ವಾಹನಗಳೀಗ ರಸ್ತೆಗೆ ಇಳಿದಿವೆ. ಆದರೆ, ಬಿಎಸ್-3, ಬಿಎಸ್-4 ವಾಹನಗಳಿಗೆ ಮಾತ್ರ 6 ತಿಂಗಳು ಹಾಗೂ 1 ವರ್ಷ ಅವಧಿಯ ಮಾಲಿನ್ಯ ಪ್ರಮಾಣ ಪತ್ರ ಕೊಡಲು ಆದೇಶವಾಗಿದೆ. ಆದರೆ, ಬಿಎಸ್-6 ವಾಹನಗಳಿಗೆ ಯಾವ ಅವಧಿಯ ಸರ್ಟಿಫಿಕೇಟ್ ಕೊಡಬೇಕೆಂದು ಈವರೆಗೂ ಆದೇಶ ಹೊರಡಿಸಿಲ್ಲ. ಇಲಾಖೆಯ ವಿಳಂಬ ಧೋರಣೆ ಕೂಡ ದಂಧೆಕೋರರಿಗೆ ಅನುಕೂಲಕರವಾಗಿದೆ.

    ಇದನ್ನೂ ಓದಿ:  ವಾರಭವಿಷ್ಯ | ಸಿಂಹವೂ ನೀವೇ, ರಾಶಿಯೂ ನಿಮದೇ. ಹುಲಿವೇಷದ ಮರ್ಕಟವನ್ನು ನಂಬದಿರಿ.

    2019ರಿಂದ ದಂಧೆ
    2019ರ ಸೆ.1ರಿಂದ ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ತರುವಾಯ ಎಮಿಷನ್ ಟೆಸ್ಟ್ ಬೃಹತ್ ದಂಧೆಯಾಗಿ ಬದಲಾಗಿದೆ. ಮಾಲಿನ್ಯ ಪ್ರಮಾಣ ಪತ್ರ ಇಲ್ಲದ ವಾಹನಗಳಿಗೆ ವಿಧಿಸುತ್ತಿದ್ದ ದಂಡದ ಪ್ರಮಾಣವನ್ನು 1000 ರೂ.ಗೆ ಏರಿಸಲಾಗಿತ್ತು. ಹೀಗಾಗಿ ಜನ ಸರ್ಟಿಫಿಕೇಟ್​ಗಾಗಿ ಎಮಿಷನ್ ಕೇಂದ್ರಗಳಿಗೆ ಮುಗಿಬಿದ್ದಿದ್ದರು. ಇದು ಹೆಚ್ಚುವರಿ ವಸೂಲಿ ಹಾಗೂ ನಕಲಿ ಸರ್ಟಿಫಿಕೇಟ್ ದಂಧೆಗೆ ಕಾರಣವಾಯಿತು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

    ವಿಶ್ವದ 2.5 ಕೋಟಿ ಜನರ ತಲುಪಿದ ತಾಂತ್ರಿಕ ಶೃಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts