More

    ಜೈಕೋವಿ-ಡಿ : ಮತ್ತೊಂದು ಕರೊನಾ ಲಸಿಕೆಯ ತುರ್ತು ಬಳಕೆಗೆ ಅರ್ಜಿ

    ನವದೆಹಲಿ : ‘ಜೈಕೋವಿ-ಡಿ’ ಎಂಬ ತನ್ನ ಕರೊನಾ ಲಸಿಕೆಗೆ ತುರ್ತು ಬಳಕೆ ಪರವಾನಗಿಗಾಗಿ ಜೈಡಸ್​ ಕಾಡಿಲಾ ಔಷಧ ಕಂಪೆನಿ ಅರ್ಜಿ ಸಲ್ಲಿಸಿದೆ. ಈ ನಿಟ್ಟಿನಲ್ಲಿ ಈ ಪ್ಲಾಸ್ಮಿಡ್​ ಡಿಎನ್​ಎ ವ್ಯಾಕ್ಸಿನ್ನಿನ ಪ್ರಯೋಗಗಳ ಫಲಿತಾಂಶಗಳನ್ನು ಡ್ರಗ್​ ಕಂಟ್ರೋಲರ್ ಜನರಲ್ ಆಫ್​ ಇಂಡಿಯ(ಡಿಸಿಜಿಐ) ಕಛೇರಿಗೆ ಸಲ್ಲಿಸಿದೆ ಎಂದು ಕಂಪೆನಿ ಸುದ್ದಿಗಾರರಿಗೆ ತಿಳಿಸಿದೆ.

    ಜೈಕೋವಿ-ಡಿ ಲಸಿಕೆಗೆ 50ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಅತಿದೊಡ್ಡ ಪ್ರಮಾಣದ ಕ್ಲಿನಿಕಲ್ ಟ್ರಯಲ್​ಅನ್ನು ನಡೆಸಲಾಗಿದೆ. ಲಸಿಕೆಯನ್ನು 12 ರಿಂದ 18 ವರ್ಷ ವಯೋಮಾನದವರ ಮೇಲೂ ಪ್ರಯೋಗ ಮಾಡಲಾಗಿದ್ದು, ಈ ಗುಂಪಿನಲ್ಲಿ 1000 ಜನರು ಲಸಿಕೆ ಪಡೆದಿದ್ದಾರೆ. ಈ ವಯೋಮಾನದ ಅಭ್ಯರ್ಥಿಗಳಿಗೆ ಮತ್ತು ವಯಸ್ಕರಿಗೆ ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ತಿಳಿದುಬಂದಿದೆ ಎನ್ನಲಾಗಿದೆ.

    ಇದನ್ನೂ ಓದಿ: ವರನಿಗೆ ಮದುವೆಯಾಗೋ ಅರ್ಜೆಂಟು: ಹಾರ ಬದಲಾಯಿಸುವಾಗ ಎಡವಟ್ಟು- ಮುಂದೇನಾಯ್ತು ನೋಡಿ…

    ಈ ಲಸಿಕೆಗೆ ಪರವಾನಗಿ ಸಿಕ್ಕಲ್ಲಿ ಇದು 12 ರಿಂದ 18 ವರ್ಷದ ಗುಂಪಿನ ಜನರಿಗೆ ಭಾರತದಲ್ಲಿ ಲಭ್ಯವಾಗುವ ಮೊದಲ ಲಸಿಕೆಯಾಗಲಿದೆ. ಕೋವಿಶೀಲ್ಡ್​ ಮತ್ತು ಕೋವಾಕ್ಸಿನ್​ನ ನಂತರ ಅನುಮೋದನೆ ಗಳಿಸುವ ಮೂರನೇ ದೇಶೀಯ ಕರೊನಾ ಲಸಿಕೆಯಾಗಲಿದೆ. (ಏಜೆನ್ಸೀಸ್)

    ಜೂಡೋ ಕ್ಲಾಸಲ್ಲಿ ಪೆಟ್ಟುತಿಂದು ಕೋಮಾಗೆ ಜಾರಿದ್ದ ಬಾಲಕನ ಸಾವು; ಶಿಕ್ಷಕನಿಂದ ನಡೆದಿತ್ತು ಘೋರ ಅನರ್ಥ!

    ರಾಷ್ಟ್ರೀಯ ವೈದ್ಯರ ದಿನ : ಐಎಂಎ ಕಾರ್ಯಕ್ರಮದಲ್ಲಿ ಮೋದಿ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts