More

    ಒಮಿಕ್ರಾನ್ ಭೀತಿಯ ನಡುವೆ ಭಾರತ ಸರ್ಕಾರ ನೀಡಿದೆ ಶುಭ ಸುದ್ದಿ

    ನವದೆಹಲಿ: ಕರೊನಾ ವೈರಾಣುವಿನ ಹೊಸ ಹೊಸ ರೂಪಾಂತರಿಗಳು ಕಾಣಿಸಿಕೊಂಡು ದಿಗಿಲು ಹುಟ್ಟಿಸುತ್ತಿರುವ ಈ ಸಂದರ್ಭದಲ್ಲಿ ಭಾರತ ಸರ್ಕಾರ ಜನರಿಗೆ ಶುಭ ಸುದ್ದಿ ನೀಡಿದೆ. ಸೋಂಕಿನ ತೀವ್ರತೆ ಹೆಚ್ಚಾಗದಂತೆ ರೋಗನಿರೋಧಕ ಶಕ್ತಿ ಒದಗಿಸುವ ಕರೊನಾ ಲಸಿಕೆಗಳ ಎರಡೂ ಡೋಸ್​ಗಳನ್ನು ದೇಶದ ಅರ್ಧಕ್ಕೂ ಹೆಚ್ಚು ಅರ್ಹ ಜನಸಂಖ್ಯೆಗೆ ನೀಡಲಾಗಿದೆ.

    ಜಗತ್ತಿನಲ್ಲಿ ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿದ ನಮ್ಮ ದೇಶ ಕರೊನಾ ಲಸಿಕಾ ಅಭಿಯಾನ ಪ್ರಾರಂಭಿಸಿದ 11 ತಿಂಗಳೊಳಗೆ ಶೇಕಡ 50ಕ್ಕಿಂತ ಹೆಚ್ಚು ವಯಸ್ಕರಿಗೆ ಸಂಪೂರ್ಣ ಲಸಿಕೀಕರಣದ ಗುರಿಯನ್ನು ಸಾಧಿಸಿದೆ. ಭಾನುವಾರದವರೆಗೆ ದೇಶದಾದ್ಯಂತ ಒಟ್ಟು 127.93 ಕೋಟಿ ಡೋಸ್‌ ಕರೊನಾ ಲಸಿಕೆ ನೀಡಲಾಗಿದ್ದು, 18 ವರ್ಷ ಮೇಲ್ಪಟ್ಟ ಜನಸಂಖ್ಯೆಯಲ್ಲಿ ಶೇ.85ಕ್ಕಿಂತ ಹೆಚ್ಚು ಜನರು ಕನಿಷ್ಠ ಒಂದು ಡೋಸ್‌ ಲಸಿಕೆ ಪಡೆದಿದ್ದಾರೆ. ಇತ್ತೀಚಿನ 10 ಕೋಟಿ ಡೋಸ್​ಗಳನ್ನು ಕಳೆದ 15 ದಿನಗಳಲ್ಲೇ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

    ಇದನ್ನೂ ಓದಿ: ಭಾರತದ ಈ ಭಾಗದಲ್ಲಿ ಕರೊನಾ ಲಸಿಕೆ ಕಡ್ಡಾಯ! ಒಲ್ಲೆ ಎನ್ನುವವರಿಗೆ ಶಿಕ್ಷೆ

    ಶೇಕಡ 50ರಷ್ಟು ಫಲಾನುವಭವಿಗಳಿಗೆ ಎರಡೂ ಡೋಸ್​ಗಳನ್ನು ನೀಡಲಾಗಿರುವುದನ್ನು ತಿಳಿಸಿ ಕೇಂದ್ರ ಆರೋಗ್ಯ ಸಚಿವ ಮನಸೂಖ್​ ಮಾಂಡವೀಯ ಪೋಸ್ಟ್​ ಮಾಡಿರುವ ಟ್ವೀಟನ್ನು ಪ್ರಧಾನಿ ನರೇಂದ್ರ ಮೋದಿ ರೀಟ್ವೀಟ್ ಮಾಡಿದ್ದಾರೆ. “ಭಾರತದ ಲಸಿಕಾ ಅಭಿಯಾನ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ದಾಟಿದೆ. ಕರೊನಾ ವಿರುದ್ಧದ ಹೋರಾಟವನ್ನು ಬಲಗೊಳಿಸಲು ಈ ವೇಗವನ್ನು ಮುಂದುವರಿಸಿಕೊಂಡು ಹೋಗಬೇಕು. ಇನ್ನು, ಮಾಸ್ಕ್​ ತೊಡುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಎಲ್ಲಾ ಇತರ ಕೋವಿಡ್​19 ಪ್ರೊಟೋಕಾಲನ್ನು ಅನುಸರಿಸುತ್ತಿರಿ” ಎಂದು ಮೋದಿ ಬರೆದಿದ್ದಾರೆ.

    ಒಮಿಕ್ರಾನ್ ರೂಪಾಂತರಿ ಸೋಂಕು ಭಾರತದಲ್ಲೂ ತಲೆದೋರಿರುವ ಸಮಯದಲ್ಲಿ ಇದು ಉತ್ತಮ ಬೆಳವಣಿಗೆಯಾಗಿದೆ. ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದ ಈ ರೂಪಾಂತರಿ ವಿರುದ್ಧ ಕರೊನಾ ಲಸಿಕೆ ಉತ್ತಮ ರಕ್ಷಣೆ ನೀಡುತ್ತದೆ. ಆದರೆ, ಎರಡನೇ ಅಲೆಯಲ್ಲಿ ಮಾರಕವಾದ ಹಾಗೂ ಈಗಲೂ ತನ್ನ ಕರಿನಾಲಿಗೆ ಚಾಚಿರುವ ಡೆಲ್ಟಾ ರೂಪಾಂತರಿ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. (ಏಜೆನ್ಸೀಸ್)

    ರೇಷ್ಮೆ ಸೀರೆ ತೊಟ್ಟು ಮಧ್ಯರಾತ್ರಿ ಊಟ ಬಡಿಸಿದ ಮಹಿಳೆ! ಪ್ರಶಂಸೆಯ ಸುರಿಮಳೆ

    ನೂರಕ್ಕೆ ನೂರು ಲಸಿಕಾ ಅಭಿಯಾನ ಪೂರೈಸಿದ ಮೊದಲ ರಾಜ್ಯವಿದು!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts