More

    ಒಂದೇ ದಿನದಲ್ಲಿ 10 ಬಾರಿ ಲಸಿಕೆ ಪಡೆದ! ಕಾರಣ ತಿಳಿದರೆ ಶಾಕ್​ ಆಗ್ತೀರಾ

    ವೆಲ್ಲಿಂಗ್ಟನ್​: ಕರೊನಾ ಲಸಿಕೆ ಪಡೆಯುವಾಗ ಜನರು ಭಯದಿಂದ, ಆತಂಕದಿಂದ ವಿಚಿತ್ರ ವರ್ತನೆಗಳನ್ನು ತೋರಿಸಿದ ಬಗ್ಗೆ ನೀವು ಓದಿರಬಹುದು. ಆದರೆ, ಇದು ಅದೆಲ್ಲಕ್ಕಿಂತಲೂ ವಿಚಿತ್ರವಾದ, ವಿಪರೀತವಾದ ಘಟನೆ. ಅದೇನೆಂದರೆ, ಒಂದೇ ದಿನದಲ್ಲಿ ಒಬ್ಬನೇ ವ್ಯಕ್ತಿ ಕರೊನಾ ಲಸಿಕೆಯ ಹತ್ತು ಡೋಸ್​ಗಳನ್ನು ಪಡೆದಿರುವ ಪ್ರಸಂಗವೊಂದು ನ್ಯೂಜಿಲೆಂಡಿನಿಂದ ವರದಿಯಾಗಿದೆ.

    ಹೌದು! ತನಗೆ ದುಡ್ಡು ಕೊಟ್ಟ ಕೆಲವು ಜನರ ಪರವಾಗಿ ನ್ಯೂಜಿಲೆಂಡಿನ ಒಬ್ಬ ಪುರುಷ ಕನಿಷ್ಠ ಹತ್ತು ಬಾರಿ ಲಸಿಕೆ ಪಡೆದಿರುವುದು ಪತ್ತೆಯಾಗಿದ್ದು, ಇದನ್ನು ಅಧಿಕಾರಿಗಳು ‘ಪೆದ್ದತನ ಮತ್ತು ಅಪಾಯಕಾರಿ ವರ್ತನೆ’ ಎಂದು ಕರೆದಿದ್ದಾರೆ. ಈ ಪುರುಷನ ಹೆಸರನ್ನು ಬಯಲುಮಾಡದೆ, ಸ್ಥಳೀಯ ಮಾಧ್ಯಮಗಳು ಈ ಪ್ರಸಂಗವನ್ನು ವರದಿ ಮಾಡಿವೆ. ಇವನು ಒಂದೇ ದಿನದಲ್ಲಿ ಹಲವು ಲಸಿಕಾ ಕೇಂದ್ರಗಳಿಗೆ ಹೋಗಿ ಬೇರೆ ಬೇರೆ ವ್ಯಕ್ತಿಗಳ ಹೆಸರಲ್ಲಿ ಮತ್ತೆ ಮತ್ತೆ ಲಸಿಕೆ ಪಡೆದಿದ್ದಾನೆ. ಇದಕ್ಕಾಗಿ ಆ ಜನರು ಇವನನ್ನು ಹೈರ್​ ಮಾಡಿದ್ದರು ಎನ್ನಲಾಗಿದೆ. ಈ ವ್ಯಕ್ತಿಗೆ ತಕ್ಷಣ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಲು ಸೂಚಿಸಲಾಗಿದ್ದು, ಪ್ರಾಣಕ್ಕೇನೂ ಅಪಾಯವಾಗುವುದಿಲ್ಲ ಎಂದು ವೈದ್ಯಾಧಿಕಾರಿಗಳು ನಂಬಿದ್ದಾರೆ.

    ಇದನ್ನೂ ಓದಿ: ರಾವತ್ ಸಾವನ್ನು ಸಂಭ್ರಮಿಸಿ ಪೋಸ್ಟ್ ಮಾಡಿದ್ದವನ ಸೆರೆ; ಇನ್ನುಳಿದವರಿಗೂ ಬಂಧನ ಭೀತಿ..

    ನ್ಯೂಜಿಲೆಂಡಿನಲ್ಲಿ ಲಸಿಕೆ ಪಡೆಯುವಾಗ ತಮ್ಮ ಗುರುತಿನ ಬಗ್ಗೆ ಯಾವುದೇ ಪ್ರಮಾಣಪತ್ರವನ್ನು ತೋರಿಸಬೇಕಾದ ಅವಶ್ಯಕತೆಯಿಲ್ಲ. ಆದರೆ, ಕರೊನಾ ಆರಂಭದಿಂದಲೂ ಅತಿಕಡಿಮೆ ಕೇಸುಗಳನ್ನು ವರದಿ ಮಾಡಿರುವ ಈ ದೇಶದಲ್ಲಿ ಸಾರ್ವಜನಿಕ ಪ್ರದೇಶಗಳಿಗೆ ಹೋಗಲು ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ ಎನ್ನಲಾಗಿದೆ.

    ನ್ಯೂಜಿಲೆಂಡಿನ ಆರೋಗ್ಯ ಮಂತ್ರಾಲಯವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುತ್ತಿದ್ದು, ಪೊಲೀಸ್​ ತನಿಖೆ ಆದೇಶಿಸಿದೆ. “ಇನ್ನೊಬ್ಬರ ಸೋಗು ಹಾಕಿ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅಪಾಯಕಾರಿ. ಈ ರೀತಿ ಲಸಿಕೆ ಪಡೆದವನ ಆರೋಗ್ಯಕ್ಕೆ ಇದು ತೊಂದರೆ ಮಾಡಬಲ್ಲದು. ಜೊತೆಗೆ, ಲಸಿಕೆ ಪಡೆಯದೆ ತಮ್ಮ ರೆಕಾರ್ಡಿನಲ್ಲಿ ಲಸಿಕೀಕೃತರೆಂದು ತೋರಿಸಿಕೊಳ್ಳುವವರಿಗೂ ಅನಗತ್ಯ ರಿಸ್ಕ್​ ತರುತ್ತದೆ” ಎಂದು ಅಲ್ಲಿನ ಲಸಿಕೀಕರಣ ನಿರ್ವಾಹಕರಾದ ಆಸ್ಟ್ರಿಡ್ ಕೂರ್​ನೀಫ್​ ಹೇಳಿದ್ದಾರೆ. (ಏಜೆನ್ಸೀಸ್)

    ಕಾನೂನು ಬದಲಾಯಿಸಿ, ನೀವೇ ಚ್ಯಾನ್ಸಲರ್​ ಆಗಿಬಿಡಿ: ಸಿಎಂಗೆ ರಾಜ್ಯಪಾಲರ ಸಲಹೆ!

    22 ವರ್ಷದ ಮಗಳ ಸೋಗು ಹಾಕಿದ 48ರ ಮಹಿಳೆ! ಕಾಲೇಜು ಸೇರಿ ಯುವಕರೊಂದಿಗೆ ಸರಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts