More

    ಲಸಿಕೆಗೆ ಹೆದರಿ ಮನೆ ಮಾಳಿಗೆ ಏರಿದ! ಅಧಿಕಾರಿಗಳೂ ಏಣಿ ಹತ್ತಿದರು!

    ಕೊಪ್ಪಳ: ಕೊಪ್ಪಳದಲ್ಲಿ ಜಿಲ್ಲಾಧಿಕಾರಿ ಮತ್ತು ‌ಜಿಲ್ಲಾ ಪಂಚಾಯತ್​ ಸಿಇಒ ನೇತೃತ್ವದಲ್ಲಿ ಕರೊನಾ ಲಸಿಕೆ ಅಭಿಯಾನ ನಡೆಯುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಜನರನ್ನು ಲಸಿಕೆ ಪಡೆಯಲು ಪ್ರೇರೇಪಿಸಲಾಗುತ್ತಿದೆ. ಅಭಿಯಾನದ ಸಂದರ್ಭದಲ್ಲಿ ಕೆಲವರು ಲಸಿಕೆ ಬೇಡ ಎಂದು ವಿಪರೀತವಾಗಿ ವರ್ತಿಸಿದ ಹತ್ತಾರು ಹಾಸ್ಯ ಪ್ರಸಂಗಗಳು ಕಂಡುಬಂದಿವೆ.

    ಜಿಲ್ಲೆಯ ಕಾರಟಗಿ ತಾಲೂಕು ಬೂದಗುಂಪ ಗ್ರಾಮದಲ್ಲಿ ಲಸಿಕೆಗೆ ಹೆದರಿ ಪುರುಷನೊಬ್ಬ ಮನೆಯ ಮಾಳಿಗೆ ಏರಿದ ಪ್ರಸಂಗ ನಡೆದಿದೆ. ಗ್ರಾಮದ ಹುಚ್ಚಪ್ಪ ಛಲವಾದಿ ಮಾಳಿಗೆ ಏರಿದ ವ್ಯಕ್ತಿ. ಶನಿವಾರ ಆರೋಗ್ಯ ಇಲಾಖೆಯಿಂದ ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಲು ಹೇಳುತ್ತಿದ್ದಾಗ, ಲಸಿಕೆ ಬಗ್ಗೆ ಹಿಂಜರಿಕೆ ತೋರಿದ ಹುಚ್ಚಪ್ಪ ಈ ರೀತಿ ವರ್ತಿಸಿದ್ದಾರೆ. ಅಧಿಕಾರಿಗಳು ಪಟ್ಟು ಬಿಡದೆ ಏಣಿ ಹತ್ತಿ ಮಾಳಿಗೆಯ ಮೇಲಕ್ಕೆ ಹೋಗಿ ಮನವೊಲಿಸಿದ ಬಳಿಕ ಆತ ಲಸಿಕೆ ಹಾಕಿಸಿಕೊಂಡಿದ್ದಾರೆ.

    ಇದನ್ನೂ ಓದಿ: ನನಗೆ ಅಧಿಕಾರ ಬೇಕಿಲ್ಲ, ನಾನು ಜನರ ಸೇವೆ ಮಾಡಬೇಕಷ್ಟೇ: ಪ್ರಧಾನಿ ಮೋದಿ

    ಕುಷ್ಟಗಿ ತಾಲೂಕು ಶಾಖಾಪುರ ಗ್ರಾಮದಲ್ಲಿ ಮತ್ತೊಬ್ಬರು ಲಸಿಕೆ ನೀಡಲು ಹೋದಾಗ ಮೈಮೇಲೆ ದೇವರು ಬಂದಂತೆ ವರ್ತಿಸಿದ ಘಟನೆ ನಡೆದಿದೆ. ರಾಮಣ್ಣ ಯಲಬುರ್ತಿ ಎಂಬುವರು ವಿಲಕ್ಷಣವಾಗಿ ವರ್ತಿಸಿ ಲಸಿಕೆ ಹಾಕಲು ಹೋದ ಕೆ.ಬೋದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಶಾಕ್ ನೀಡಿದ್ದಾರೆ. ಸಿಬ್ಬಂದಿ ಬರುತ್ತಿದ್ದಂತೆ ಗಂಟೆ ಹಿಡಿದು ಕುದುರೆ, ಕುದುರೆ ಬೇಕು ಎನ್ನುತ್ತಾ ವಿಚಿತ್ರವಾಗಿ ನಡೆದುಕೊಂಡರು. ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಲು ಯತ್ನಿಸಿದರೂ ಪ್ರಯತ್ನ ವಿಫಲವಾಯಿತು ಎನ್ನಲಾಗಿದೆ.

    121 ಕೋಟಿ ಡೋಸ್​ ಕರೊನಾ ಲಸಿಕೆ ವಿತರಣೆ; ಇನ್ನೂ ಹೋರಾಟ ಮುಗಿದಿಲ್ಲ ಎಂದ ಸರ್ಕಾರ

    ಡಾ.ರತ್ನಾಕರ್​ ಕಾಮಪುರಾಣ: 8 ಮಹಿಳೆಯರೊಂದಿಗೆ ಅನುಚಿತ ವರ್ತನೆ; ಶೀಘ್ರವೇ ಸಂತ್ರಸ್ತರ ಹೇಳಿಕೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts