121 ಕೋಟಿ ಡೋಸ್​ ಕರೊನಾ ಲಸಿಕೆ ವಿತರಣೆ; ಇನ್ನೂ ಹೋರಾಟ ಮುಗಿದಿಲ್ಲ ಎಂದ ಸರ್ಕಾರ

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಮತ್ತೊಂದು ಕರೊನಾ ವೈರಸ್​ ರೂಪಾಂತರ ಪತ್ತೆಯಾಗಿರುವ ಈ ಸಂದರ್ಭದಲ್ಲಿ ಕರೊನಾ ಲಸಿಕಾಕರಣದ ಮಹತ್ವ ಇನ್ನೂ ಹೆಚ್ಚಿದೆ. ಹೀಗಿರುವಾಗ ಭಾರತದಲ್ಲಿ ಲಸಿಕಾ ಅಭಿಯಾನದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಸರ್ಕಾರದ ಮೈಗವ್​ ಟ್ವಿಟರ್​ ಖಾತೆಯಲ್ಲಿ ಈ ಬಗ್ಗೆ ಇಂದು ಮಾಹಿತಿ ನೀಡಲಾಗಿದ್ದು, “121 ಕೋಟಿ ಭಾರತೀಯರಿಗೆ ಈವರೆಗೆ ಕರೊನಾ ಲಸಿಕೆ ನೀಡಲಾಗಿದೆ. ಆದರೆ, ಕೋವಿಡ್​ 19 ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಭಾರತವನ್ನು ಸುರಕ್ಷಿತವಾಗಿಸಲು ಪ್ರಯತ್ನಿಸೋಣ” ಎಂದು ಬರೆಯಲಾಗಿದೆ. … Continue reading 121 ಕೋಟಿ ಡೋಸ್​ ಕರೊನಾ ಲಸಿಕೆ ವಿತರಣೆ; ಇನ್ನೂ ಹೋರಾಟ ಮುಗಿದಿಲ್ಲ ಎಂದ ಸರ್ಕಾರ