More

    ಸಿಂದಗಿ ತಾಲೂಕಿಗೆ ಮರು ಸೇರ್ಪಡೆಗೊಳಿಸಿ

    ಸಿಂದಗಿ: ಆಲಮೇಲ ತಾಲೂಕಿಗೆ ಸೇರ್ಪಡೆಗೊಂಡಿರುವ ಗಬಸವಾಳಗಿ ಮತ್ತು ಬಿಸನಾಳ ಗ್ರಾಮವನ್ನು ಸಿಂದಗಿ ತಾಲೂಕಿಗೆ ಮರು ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಗಬಸವಾಳಗಿಯಿಂದ ಸಿಂದಗಿ ತಾಲೂಕು ಆಡಳಿತ ಸೌಧದವರೆಗೂ ಬೈಕ್ ರ‌್ಯಾಲಿ ಮೂಲಕ ಆಗಮಿಸಿ, ಕೆಲಕಾಲ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಡಾ. ಪ್ರವೀಣಕುಮಾರ ಹಿರೇಮಠ ಮೂಲಕ ಶುಕ್ರವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

    ಗಬಸಾವಳಗಿ ಗ್ರಾಮದ ಗಜಾನನ ವೃತ್ತದಿಂದ ಬೈಕ್ ರ‌್ಯಾಲಿ ಆರಂಭಿಸಿ ಡಾ. ಅಂಬೇಡ್ಕರ್ ಮಾರ್ಗವಾಗಿ ತಾಲೂಕು ಆಡಳಿತಸೌಧಕ್ಕೆ ತೆರಳಿದ ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿ, ತಮ್ಮ ಸಮಸ್ಯೆಗಳ ಕುರಿತು ಮಾತನಾಡಿದರು.

    ಶಿವಶರಣ ಹೆಳವರ, ಬಾಬು ರೆಡ್ಡಿ, ಶರಣಮ್ಮ ಮೇಲಿನಮನಿ, ಅಶೋಕಗೌಡ ಬಿರಾದಾರ, ರಮೇಶ ನಡುವಿನಕೇರಿ, ಗಂಗಪ್ಪಗೌಡ ಬಿರಾದಾರ, ಸುರೇಶಬಾಬು ಕೋಟಿಖಾನಿ ಮತ್ತಿತರರು ಮಾತನಾಡಿ, ಸಿಂದಗಿ ತಾಲೂಕಿನಲ್ಲಿ ನಾವು ನಿಶ್ಚಿಂತೆಯಿಂದ ಇದ್ದೇವು. ತಾಲೂಕು ವಿಂಗಡಣೆ ವೇಳೆ 40 ಕಿಮೀ ದೂರದ ಆಲಮೇಲ ತಾಲೂಕಿಗೆ ಸೇರ್ಪಡೆಗೊಳಿಸಿದ್ದು ಅವೈಜ್ಞಾನಿಕವಾಗಿದೆ. 2009ರಲ್ಲಿಯೇ ಜಿಲ್ಲೆ, ತಾಲೂಕು ಆಡಳಿತಗಳಿಗೆ ಗ್ರಾಮಗಳನ್ನು ತವರು ತಾಲೂಕಿನಲ್ಲಿಯೇ ಉಳಿಸುವಂತೆ ಮನವಿ ನೀಡಿದ್ದೆವು. ಆದರೆ ಇಂದಿಗೂ ನಮ್ಮ ಬೇಡಿಕೆಗೆ ಯಾವ ಆಡಳಿತವೂ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಗಳನ್ನು ಅವೈಜ್ಞಾನಿಕವಾಗಿ ಆಲಮೇಲ ತಾಲೂಕಿಗೆ ಸೇರಿಸಲಾಗಿದೆ. ಎರಡು ಗ್ರಾಮದ ರೈತರಿಗೆ, ಸಾಮಾನ್ಯ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಾದ ದಾಖಲಾತಿ, ಸೌಲಭ್ಯಗಳನ್ನು ಪಡೆಯಲು, ಆಲಮೇಲ ತಾಲೂಕಿಗೆ ತೆರಳಲು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.

    ಕೂಡಲೇ ಬೇಡಿಕೆಗೆ ಸ್ಪಂದನೆ ಸಿಗದೇ ಇದ್ದರೆ ಮುಂಬರುವ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಬೇಡಿಕೆ ಈಡೇರುವವರೆಗೂ ಗಬಸಾವಳಗಿ ಗ್ರಾಮದಲ್ಲಿ ಫೆ. 26ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿ, ಹಂತಹಂತವಾಗಿ ಸರ್ಕಾರ ಹಾಗೂ ಜನಪ್ರತಿನಿಧಿ ಮತ್ತು ಜಿಲ್ಲಾ ಮತ್ತು ತಾಲೂಕು ಆಡಳಿತಾಧಿಕಾರಿಗಳ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆಯಂತಹ ವಿವಿಧ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು. ನಮ್ಮ ತಾಳ್ಮೆಯನ್ನು ಯಾರು ಪರೀಕ್ಷಿಸಬೇಡಿ ಎಂದು ಎಚ್ಚರಿಕೆ ನೀಡಿದರು.

    ಪ್ರತಿಭಟನೆಯಲ್ಲಿ ಬಾಬಾಗೌಡ ಬಿರಾದಾರ, ಪ್ರಭುಗೌಡ ಬಿರಾದಾರ, ಅಪ್ಪಾಸಹೇಬಗೌಡ ಬಿರಾದಾರ, ಬಂಗಾರೆಪ್ಪಗೌಡ ಬಿರಾದಾರ, ವೆಂಕಟೇಶ ಹೂಗಾರ, ಮಹಾಂತಯ್ಯ ಸುಂಗಠಾಣಮಠ, ಪ್ರಭುಗೌಡ ಬಿರಾದಾರ, ಅಬೂಬಸಾಬ ರಂಜುಣಗಿ, ಶಿವನಗೌಡ ಬಿರಾದಾರ, ಶರಣಪ್ಪ ಕಟ್ಟಿಮನಿ, ಸಿದ್ಧಲಿಂಗ ಹೆಳವರ, ಶಿವಕುಮಾರ ಬಿರಾದಾರ, ಹಣಮಂತ್ರಾಯ ಕುಲಕರ್ಣಿ, ಆಕಾಶ ಆನಶೆಟ್ಟಿ, ಮಾಳಪ್ಪ ಮುಳ್ಳೊಳ್ಳಿ, ಭೀರಣ್ಣ ಜೇರಟಗಿ, ಬಾಬುಗವಡ ಕೋಯಿನಳ್ಳಿ, ಪ್ರಭು ಹೆಗ್ಗನದೊಡ್ಡಿ ಸೇರಿದಂತೆ ಗಬಸಾವಳಗಿ ಹಾಗೂ ಬಿಸನಾಳ ಗ್ರಾಮದ ವಿವಿಧ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts