More

    50 ಪ್ರಯಾಣಿಕರಿದ್ದ ಬಸ್​ ಮೇಲೆಯೇ ಬಿತ್ತು ವಿದ್ಯುತ್​ ತಂತಿ!

    ಚಿಕ್ಕಮಗಳೂರು: ರಾಜ್ಯಾದ್ಯಂತ ಭಾರಿ ಮಳೆ ಸುರಿಯಲಾರಂಭಿಸಿದ ಬಳಿಕ ಆಗುತ್ತಿರುವ ಅವಾಂತರಗಳು ಒಂದೆರಡಲ್ಲ. ರಸ್ತೆಯ್ಲಲಿ ವಾಹನ ಸವಾರ ಪರದಾಡುತ್ತಿರುವುದು, ಮನೆಗೆ ನೀರು ನುಗ್ಗಿ ಜನಸಾಮಾನ್ಯರು ಸಂಕಟ ಪಡುತ್ತಿರುವುದು, ಒಟ್ಟಾರೆಯಾಗಿ ಜನಜೀವನ ಅಸ್ತವ್ಯಸ್ತ ಆಗಿರುವುದರ ಜತೆಗೆ ಇತರ ತೊಂದರೆಗಳು ಕಾಡಲಾರಂಭಿಸಿವೆ.

    ಈ ಮಧ್ಯೆ ಚಿಕ್ಕಮಗಳೂರಿನಲ್ಲಿ ಒಮ್ಮೆಗೆ ಒಂದಿಡೀ ಬಸ್​ನ ಜನರು ಹಾಗೂ ಸಾರ್ವಜನಿಕರು ಆತಂಕಕ್ಕೆ ಒಳಗಾಗುವಂತಹ ಸನ್ನಿವೇಶವೊಂದು ಸೃಷ್ಟಿಯಾಗಿತ್ತು. ಅದೇನೆಂದರೆ ಐವತ್ತು ಪ್ರಯಾಣಿಕರಿದ್ದ ಕೆಎಸ್​ಆರ್​ಟಿಸಿ ಬಸ್​ ಮೇಲೇ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು.

    ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುದುರೆಗುಂಡಿ ಬಳಿ ಈ ಘಟನೆ ನಡೆದಿದೆ. ಈ ಬಸ್​ ಮೂಡಿಗೆರೆಯಿಂದ ಚಿಕ್ಕಮಗಳೂರು ಕಡೆಗೆ ಚಲಿಸುತ್ತಿತ್ತು. ಬಸ್​ ಸಾಗುತ್ತಿದ್ದಂತೆ ವಿದ್ಯುತ್ ಕಂಬವೊಂದು ಮುರಿದುಬಿದ್ದಿದ್ದು, ತುಂಡಾದ ವಿದ್ಯುತ್ ತಂತಿ ಬಸ್​ ಮೇಲೆಯೇ ಬಿದ್ದಿತ್ತು. ಆದರೆ ಆ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಇರದ್ದರಿಂದ ಅದೃಷ್ಟವಶಾತ್ ಯಾವ ಸಾವು-ನೋವು ಸಂಭವಿಸಿಲ್ಲ. ಪರಿಣಾಮವಾಗಿ ಆತಂಕಕ್ಕೆ ಒಳಗಾದ ಪ್ರಯಾಣಿಕರು ಕೆಲವೇ ಕ್ಷಣಗಳಲ್ಲಿ ನಿಟ್ಟುಸಿರುಬಿಟ್ಟರು.

    ಕೆನಡಾದಲ್ಲಿ ಕನ್ನಡ ಮಾತು: ಚಂದ್ರ ಆರ್ಯರಿಗೆ ಭಾರಿ ಬೆಂಬಲ; ಹಿಂಬಾಲಕರ ಸಂಖ್ಯೆಯಲ್ಲಿ ಹೆಚ್ಚಳ…

    ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ; ಕಾರಣ ಒಂದಲ್ಲ ಎರಡಲ್ಲ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts