More

    ಮತದಾನದ ಬಳಿಕ ಇವಿಎಂ ಯಂತ್ರಗಳನ್ನೇ ಮರೆತು ಬಿಟ್ಟುಹೋದ ಅಧಿಕಾರಿಗಳು!

    ಚಿಕ್ಕಮಗಳೂರು: ಅತ್ಯಂತ ಜಾಗರೂಕತೆಯಿಂದ ನಡೆಯಬೇಕಾದ ಚುನಾವಣೆಯಲ್ಲಿ ಅಧಿಕಾರಿಗಳು ಎಡವಟ್ಟು ಮಾಡಿಕೊಂಡ ಪ್ರಕರಣವೊಂದು ನಡೆದಿದೆ. ಅದರಲ್ಲೂ ಬಹುಮುಖ್ಯವಾದ ಇವಿಎಂ ಯಂತ್ರಗಳನ್ನೇ ಮತದಾನದ ಬಳಿ ಮರೆತು ಬಿಟ್ಟುಹೋದ ಪ್ರಸಂಗ ನಡೆದಿದೆ.

    ಚಿಕ್ಕಮಗಳೂರು ನಗರದ ಪೆನ್ಷನ್ ಮೊಹಲ್ಲಾದಲ್ಲಿ ಈ ಘಟನೆ ನಡೆದಿದೆ. ಮತದಾನ ಮುಗಿದ ಬಳಿಕ ಮರಳುವಾಗ ಇವಿಎಂ ಯಂತ್ರಗಳನ್ನು ಅಧಿಕಾರಿಗಳು ಮರೆತು ಕಾಲೇಜಿನಲ್ಲೇ ಬಿಟ್ಟುಹೋಗಿದ್ದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಹನ್ನೊಂದರ ಈ ಹುಡುಗಿ ಐನ್​ಸ್ಟೀನ್​-ಸ್ಟೀಫನ್ ಹಾಕಿಂಗ್​ಗಿಂತಲೂ ಬುದ್ಧಿವಂತೆ!

    ಈ ಕಾಲೇಜಿನಲ್ಲಿ 168 ಹಾಗೂ 169ನೇ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮತದಾನದ ಬಳಿಕ 169ರ ಮತಗಟ್ಟೆಯಲ್ಲಿನ ಯಂತ್ರಗಳನ್ನು ತೆಗೆದುಕೊಂಡು ಹೋಗಿದ್ದ ಅಧಿಕಾರಿಗಳು, 168ರಲ್ಲಿನ ಯಂತ್ರಗಳನ್ನು ಬಿಟ್ಟುಹೋಗಿದ್ದರು. ನಂತರ ಈ ಮತಯಂತ್ರಗಳನ್ನು ಕಂಡ ಪಕ್ಷಗಳ ಏಜೆಂಟರು, ಸ್ಥಳೀಯರು ಚುನಾವಣಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಘರ್ಷಣೆ: ಕೈ ಅಭ್ಯರ್ಥಿ ರೈ ಕಾರಿನ ಮೇಲೆ ಕಲ್ಲುತೂರಾಟ

    ಆಮೇಲೆ ಅಧಿಕಾರಿಗಳಿಗೆ ಕರೆ ಮಾಡಿದ ಸ್ಥಳೀಯರು, ಇವಿಎಂ ಯಂತ್ರಗಳನ್ನು ಬಿಟ್ಟುಹೋಗಿದ್ದನ್ನು ತಿಳಿಸಿ, ಸ್ಥಳಕ್ಕೆ ಕರೆಸಿದ್ದರು. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಮತಯಂತ್ರಗಳನ್ನು ತೆಗೆದುಕೊಂಡು ಹೋದರು. ಪೆನ್ಷನ್ ಮೊಹಲ್ಲಾದ ಬೂತ್​ನಲ್ಲಿ 700 ಮತಗಳಿವೆ, ಮತ ಎಣಿಕೆಯ ದಿನ ಅಷ್ಟೂ ಲೆಕ್ಕ ಸರಿಯಾಗಿ ಇರಬೇಕೆಂದು ಸ್ಥಳೀಯರು ತಾಕೀತು ಮಾಡಿ ಕಳಿಸಿದರು.

    ಚುನಾವಣೋತ್ತರ ಸಮೀಕ್ಷೆ- ದಿಗ್ವಿಜಯ ನ್ಯೂಸ್​: ಇಲ್ಲಿದೆ ಲೈವ್ ಅಪ್​ಡೇಟ್ಸ್​

    ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts