More

    ಮದ್ರಾಸ್ ಹೈಕೋರ್ಟ್​ ವಿರುದ್ಧ ಸುಪ್ರೀಂಗೆ ದೂರು ನೀಡಿದ ಕೇಂದ್ರ ಚುನಾವಣಾ ಆಯೋಗ!

    ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಚುನಾವಣಾ ಆಯೋಗ ಮದ್ರಾಸ್ ಹೈಕೋರ್ಟ್​​ ವಿರುದ್ಧ ಸುಪ್ರೀಂಕೋರ್ಟ್​​ನಲ್ಲಿ ದೂರು ದಾಖಲಿಸಿದೆ. ಚುನಾವಣಾ ಆಯೋಗದ ಈ ನಡೆ ಆಶ್ಚರ್ಯ ತರಿಸಿದೆ.

    ಕೋವಿಡ್ ಎರಡನೇ ಅಲೆಯಿದ್ದರೂ ತಮಿಳುನಾಡಿನಲ್ಲಿ ಚುನಾವಣಾ ರಾಲಿ, ಸಮಾವೇಶಗಳನ್ನು ತಡೆಯದ ಚುನಾವಣಾ ಆಯೋಗದ ಮೇಲೆ ಕೊಲೆ ಪ್ರಕರಣವನ್ನು ದಾಖಲಿಸಬೇಕು ಎಂದು ಮದ್ರಾಸ್ ಹೈಕೋರ್ಟ್​​ ಕಳೆದ ಏಪ್ರಿಲ್ 26 ರಂದು ಪಿಐಎಲ್ ವಿಚಾರಣೆ ವೇಳೆ ಹೇಳಿತ್ತು.

    ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸುಪ್ರೀಂಗೆ ದೂರು ನೀಡಿರುವ ಚುನಾವಣಾ ಆಯೋಗ, ಒಂದು ಸ್ವಾಯತ್ತ ಸಂಸ್ಥೆ ಮತ್ತೊಂದು ಸ್ವಾಯತ್ತ ಸಂಸ್ಥೆ ಮೇಲೆ ಯಾವುದೇ ಪೂರ್ವಾಪರ ವಿಚಾರಿಸದೇ ಅವಮಾನಕರವಾದ ಹಾಗೂ ಅವಹೇಳನಕಾರಿಯಾದ ಕಮೆಂಟ್ ಮಾಡಿದೆ. ಈ ಬಗ್ಗೆ ಪರಿಶೀಲಿಸಬೇಕು ಎಂದು ಮನವಿ ಸಲ್ಲಿಸಿದೆ.

    ಮೇ 2 ರಂದು ಭಾನುವಾರ ನಾಲ್ಕು ರಾಜ್ಯಗಳಿಗೆ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದೆ. ಫಲಿತಾಂಶದ ಬಳಿಕ ಯಾವುದೇ ರೀತಿಯ ವಿಜಯೋತ್ಸವಕ್ಕೆ ಅವಕಾಶ ಇಲ್ಲ ಎಂದು ಚುನಾವಣಾ ಆಯೋಗ ಆದೇಶ ಮಾಡಿದೆ.

    ಚೀನಾ ಮೇಲೆ ನಟ ಸೋನು ಸೂದ್ ಅಸಮಾಧಾನ: ಉತ್ತರ ಕೊಟ್ಟ ರಾಯಭಾರಿ

    ದಾಂಪತ್ಯ ಸುಖವಾಗಿರಬೇಕೆ? ಈ ನಿಯಮ ಪಾಲಿಸಿ ಎಂದು ಪತಿಯ ಜತೆ ಡಾನ್ಸ್‌ ಮಾಡ್ತಾ ಸನ್ನಿ ಲಿಯೋನ್‌ ಕೊಟ್ರು ಟಿಪ್ಸ್‌…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts