More

    ಚುನಾವಣೆ ಬಹಿಷ್ಕಾರ; ರಸ್ತೆ ದುರಸ್ತಿ ಪಡಿಸಿ ಗ್ರಾಮಕ್ಕೆ ಕಾಲಿಡಿ..ಗ್ರಾಮಸ್ಥರ ಆಕ್ರೋಶ!

    ಚಿಕ್ಕಮಗಳೂರು: ರಸ್ತೆ ದುರಸ್ತಿಗಾಗಿ ಚಿಕ್ಕಮಗಳೂರಿನ ಎರಡು ಗ್ರಾಮಗಳಿಂದ ಜನರು ಚುನಾವಣೆ ಬಹಿಷ್ಕಾರ ಮಾಡಿದ್ದಾರೆ. ಇದನ್ನು ತಿಳಿದು ವಿಚಾರಣೆಗೆ ಬಂದಿರುವ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹಂದಿಹಡ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಹಂದಿಹಡ್ಲು, ಕುಂಬಳಡಿಕೆ ಊರಿನ ರಸ್ತೆ ಹದಗೆಟ್ಟಿದೆ. ಈ ರಸ್ತೆಯ ದುರಸ್ತಿಗಾಗಿ ಎರಡು ಗ್ರಾಮಗಳಿಂದ ಚುನಾವಣಾ ಬಹಿಷ್ಕಾರ ಮಾಡಲಾಗಿದೆ. ಚುನಾವಣಾ ಬಹಿಷ್ಕಾರ ವಿಷಯ ತಿಳಿದು ಗ್ರಾಮಕ್ಕೆ ಅಧಿಕಾರಿಗಳು ಬಂದು ಗ್ರಾಮಸ್ಥರ ಮನವೊಲಿಸುವ ಯತ್ನ ಮಾಡಿದ್ದಾರೆ.

    ಇದನ್ನೂ ಓದಿ: ವಿದ್ಯಾರ್ಥಿ ಅಂಕಪಟ್ಟಿಯಲ್ಲಿ ‘She Has Passed Away’ ಎಂದು ಬರೆದ ಶಿಕ್ಷಕ !

    ಗ್ರಾಮಸ್ಥರ ಮನವೊಲಿಸಲು ಬಂದ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳಿಗೆ ರಸ್ತೆ ದುರಸ್ತಿ ಪಡಿಸಿ ಗ್ರಾಮಕ್ಕೆ ಕಾಲಿಡಿ ಎಂದು ಜನರು ಹೇಳಿದ್ದಾರೆ. ಗ್ರಾಮದ ಮುಖ್ಯ ರಸ್ತೆಗೆ ಚುನಾವಣಾ ಬಹಿಷ್ಕಾರದ ಬ್ಯಾನರ್ ಹಾಕಿದ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

    ನೋವು ನಿವಾರಕ, ಆ್ಯಂಟಿ ಬಯೋಟಿಕ್ ಸೇರಿದಂತೆ ಅಗತ್ಯ ಔಷಧಗಳು ಏಪ್ರಿಲ್‌ನಿಂದ ಇನ್ನಷ್ಟು ದುಬಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts