More

    ನೋವು ನಿವಾರಕ, ಆ್ಯಂಟಿ ಬಯೋಟಿಕ್ ಸೇರಿದಂತೆ ಅಗತ್ಯ ಔಷಧಗಳು ಏಪ್ರಿಲ್‌ನಿಂದ ಇನ್ನಷ್ಟು ದುಬಾರಿ

    ನವದೆಹಲಿ: ಈಗಾಗಲೇ ಹಣದುಬ್ಬರದಿಂದ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ತಗುಲಿದೆ. ಮಾರುಕಟ್ಟೆಯಲ್ಲಿ ದಿನನಿತ್ಯ ಬಳಕೆಯಾವ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನರ ಜೇಬಿಗೆ ಮತ್ತೆ ಕತ್ತರಿ ಬೀಳಲಿದೆ. ಅತ್ಯಗತ್ಯವಾಗಿರುವ ಔಷಧಗಳ ಬೆಲೆ ಕೂಡಾ ಹೆಚ್ಚಾಗುತ್ತಿದೆ.

    ವಾರ್ಷಿಕ ಬೆಲೆ ಸೂಚ್ಯಂಕದಲ್ಲಿ ಬದಲಾವಣೆಗೆ ಅನುಗುಣವಾಗಿ ಔಷಧ ಕಂಪನಿಗಳ ಬೆಲೆ ಹೆಚ್ಚಳಕ್ಕೆ ಅನುಮತಿ ನೀಡಲು ಸರ್ಕಾರ ಸಿದ್ಧವಾಗಿದೆ. ನೋವು ನಿವಾರಕ, ಸೋಂಕು ನಿವಾರಕಗಳು, ಆಂಟಿಬಯೋಟಿಕ್ಸ್ ಹಾಗೂ ಹೃದಯಕ್ಕೆ ಸಂಬಂಧಿಸಿದ ಔಷಧಗಳ ಬೆಲೆ ಏರಿಕೆಯಾಗಲಿದೆ ಎಂದು ತಿಳಿದದು ಬಂದಿದೆ.

    ಇದನ್ನೂ ಓದಿ: ಲಕ್ಷ್ಮಿ ದೇವಿಯ ನೆಕ್ಲೇಸ್ ತೊಟ್ಟಿದ್ದ ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು
    ಕಳೆದ ವರ್ಷ, ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್​ಪಿಪಿಎ) ಸಗಟು ಬೆಲೆ ಸೂಚ್ಯಂಕದಲ್ಲಿ (ಡಬ್ಲ್ಯುಪಿಐ) 10.7 ಶೇಕಡಾ ಬದಲಾವಣೆಯನ್ನು ಘೋಷಿಸಿತು. ಪ್ರತಿ ವರ್ಷ, ಔಷಧಗಳ (ಬೆಲೆ ನಿಯಂತ್ರಣ) ಆದೇಶದ ಅನುಸಾರವಾಗಿ ಎನ್​ಪಿಪಿಏ ಸಗಟು ಬೆಲೆ ಸೂಚ್ಯಂಕದಲ್ಲಿ ಬದಲಾವಣೆಯನ್ನು ಪ್ರಕಟಿಸುತ್ತದೆ. ಆ ಆದೇಶದ ಆಧಾರದ ಮೇಲೆ, ಔಷಧ ಬೆಲೆ ನಿಯಂತ್ರಕ ಪ್ರತಿ ವರ್ಷ ಡಬ್ಲ್ಯುಪಿಐ ಆಧಾರಿತ ಬೆಲೆ ಬದಲಾವಣೆ ಘೋಷಿಸುತ್ತದೆ. ನಂತರ  ಔಷಧೀಯ ಕಂಪನಿಗಳು ಜಾರಿಗೆ ತರುತ್ತವೆ. ಬೆಲೆ ನಿಗದಿಯು  ಅಗತ್ಯ ಔಷಧಗಳು ಮತ್ತು ವೈದ್ಯಕೀಯ ಸಾಧನಗಳ ಮೇಲೆ ಪರಿಣಾಮ ಬೀರುತ್ತದೆ.

    ಇದನ್ನೂ ಓದಿ: ಬೆಂಕಿಯಿಂದ ಪಾರಾಗಲು ಹೋಗಿ 6ನೇ ಮಹಡಿಯಿಂದ ಬಿದ್ದು ಪ್ರಾಣ ಬಿಟ್ಟ ಮಾಡೆಲ್​​
    27 ಬೇರೆ ಚಿಕಿತ್ಸೆಗಳಿಗೆ ಅವಶ್ಯಕವಾಗಿರವ 388 ಔಷಧಗಳ ಬೆಲೆ ಶೇ.12 ರಷ್ಟು ಏರಿಕೆಯಾಗುವ ನೀರಿಕ್ಷೆ ಇದೆ ಎಂದು ಔಷಧ ಬೆಲೆ ನಿಯಂತ್ರಕ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ತಿಳಿಸಿದೆ.

    ನಿತಿನ್ ಗಡ್ಕರಿಗೆ ಬೆದರಿಕೆ ಹಾಕಿದ್ದ ಶಂಕಿತನನ್ನು ಬೆಳಗಾವಿಯಿಂದ ಕರೆದೊಯ್ದ ನಾಗ್ಪುರ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts