More

    ಏರುತ್ತಿದೆ ಪರಿಷತ್ ಚುನಾವಣೆ ಕಾವು: ಅನ್ಯಪಕ್ಷಗಳ ಮತ ಸೆಳೆಯಲು ಕೈ ಕಸರತ್

    ಚನ್ನಪಟ್ಟಣ :  ತಾಲೂಕಿನಲ್ಲಿ ಒಕ್ಕಲಿಗರ ಸಂದ ಚುನಾವಣೆಯ ಅಬ್ಬರದ ನಡುವೆಯೂ ವಿಧಾನ ಪರಿಷತ್ ಚುನಾವಣೆ ಕಾವು ನಿಧಾನಕ್ಕೆ ಏರುತ್ತಿದೆ. ಡಿ.10ರಂದು ವಿಧಾನ ಪರಿಷತ್ (ಸ್ಥಳೀಯ ಸಂಸ್ಥೆ) ಚುನಾವಣೆ ನಿಗದಿಯಾಗಿದ್ದು, ವಾಜಿ ಸಿಎಂ ಎಚ್.ಡಿ. ಕುವಾರಸ್ವಾಮಿ ಸ್ವಕ್ಷೇತ್ರದಲ್ಲಿ ಬಿರುಸು ಪಡೆದುಕೊಂಡಿದೆ.

    ರಾಮನಗರ ಹಾಗೂ ಬೆಂಗಳೂರು ಗ್ರಾವಾಂತರ ಜಿಲ್ಲೆಗಳ ವ್ಯಾಪ್ತಿಯ ಈ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿದ್ದು, ಮೂರು ಪಕ್ಷಗಳು ತಮ್ಮದೇ ಆದ ಕಾರ್ಯತಂತ್ರಗಳನ್ನು ಆರಂಭಿಸಿವೆ.
    ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಎಸ್. ರವಿ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ. ಜೆಡಿಎಸ್‌ನಿಂದ ವಿಧಾನ ಪರಿಷತ್ ಸದಸ್ಯ ರಮೇಶ್‌ಗೌಡ, ಬಿಜೆಪಿಯಿಂದ ನಾರಾಯಣಸ್ವಾಮಿ ಕಣದಲ್ಲಿದ್ದಾರೆ.

    ಕಾಂಗ್ರೆಸ್‌ನಿಂದ ಸದ್ದಿಲ್ಲದೆ ಮತಬೇಟೆ: ಬೊಂಬೆ ನಗರಿಯಲ್ಲಿ 32 ಗ್ರಾಪಂಗಳ ಪೈಕಿ ಬಹುತೇಕ ಜೆಡಿಎಸ್ ತೆಕ್ಕೆಯಲ್ಲಿವೆ. ಇದರೊಂದಿಗೆ ನಗರಸಭೆಯಲ್ಲೂ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಷತ್ ಚುನಾವಣೆಯಲ್ಲಿ ತಾಲೂಕಿನಲ್ಲಿ ಜೆಡಿಎಸ್ ಹೆಚ್ಚು ಮತದಾರರನ್ನು ಹೊಂದಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೂರನೇ ಸ್ಥಾನದಲ್ಲಿರುವುದು ಆ ಪಕ್ಷವನ್ನು ಕಂಗೆಡಿಸಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳನ್ನು ಪುಸಲಾಯಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಕೆಪಿಸಿಸಿ ಅಧ್ಯಕ್ಷರ ತವರುನೆಲದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಎಂದು ಕೈ ನಾಯಕರು ಹಠ ತೊಟ್ಟಿದ್ದಾರೆ.

    ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡು ಬಾರಿ ಗೆಲುವು ಹಾಗೂ ಒಂದು ಬಾರಿ ಸೋಲು ಕಂಡಿರುವ ಎಸ್. ರವಿ ಈ ಭಾಗದಲ್ಲಿ ಚಿರಪರಿಚಿತವಾಗಿರುವುದು ಹಾಗೂ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಅಷ್ಟೊಂದು ಪರಿಚಯ ಇಲ್ಲದಿರುವುದನ್ನು ಪ್ಲಸ್ ಪಾಯಿಂಟ್ ವಾಡಿಕೊಂಡಿರುವ ಕೈ ಮುಖಂಡರು ಅನ್ಯ ಪಕ್ಷದ ಮತಗಳನ್ನು ತಮ್ಮತ್ತ ವಾಲಿಸಿಕೊಳ್ಳಲು ಕಸರತ್ತು ಆರಂಭಿಸಿದ್ದಾರೆ. ತಾಲೂಕಿನಲ್ಲಿ ಸಂಸದರು, ಶಾಸಕರು ಸೇರಿದಂತೆ ಒಟ್ಟು 514 ಮತವಿದ್ದು, ಈ ಮತಗಳ ಮೇಲೆ ಖುದ್ದು ಸಂಸದ ಡಿ.ಕೆ. ಸುರೇಶ್ ಕಣ್ಣಿಟ್ಟಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷವು ತಾಲೂಕಿನಲ್ಲಿ ಸರಣಿ ಸಭೆಗಳನ್ನು ನಡೆಸಿದೆ. ಗ್ರಾಪಂ ಮಟ್ಟದಲ್ಲಿ ಪಕ್ಷದ ಮುಖಂಡರು, ಜನಪ್ರತಿನಿಧಿಗಳ ಜತೆ ನಿರಂತರವಾಗಿ ಪಕ್ಷದ ಮುಖಂಡರು ಚುನಾವಣಾ ಸಂಬಂಧ ಚರ್ಚೆ ನಡೆಸಿದ್ದಾರೆ. ತಾಲೂಕಿನ ಕೆಂಗಲ್ ಹಾಗೂ ಕೂಡ್ಲೂರು ರಸ್ತೆಯಲ್ಲಿ ಬಾಡೂಟದೊಂದಿಗೆ ಬೃಹತ್ ಸಭೆಗಳು ಕೂಡ ಜರುಗಿವೆ.
    ಇನ್ನೊಂದೆಡೆ ಚುನಾವಣೆ ಸಂಬಂಧ ಬಿಜೆಪಿಯಲ್ಲಿ ಒಂದು ಸಭೆಯನ್ನು ಹೊರತುಪಡಿಸಿ, ಯಾವುದೇ ಚಟುವಟಿಕೆಗಳು ಕಂಡು ಬರುತ್ತಿಲ್ಲ. ಇನ್ನು ಮತದಾನದ ಹಕ್ಕು ಹೊಂದಿರುವ ಕೆಲವರಂತೂ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ನಾವು ಸ್ವತಂತ್ರರು ಎನ್ನುವ ಮೂಲಕ ಮತ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.

    ಇಂದು ಜೆಡಿಎಸ್ ಸಭೆ :  ಸ್ವಕ್ಷೇತ್ರದಲ್ಲಿನ ಪಕ್ಷದ ಮತ ಉಳಿಸಿಕೊಳ್ಳಲು ಹಾಗೂ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಎಚ್.ಡಿ. ಕುವಾರಸ್ವಾಮಿ ಖುದ್ದು ಕಣಕ್ಕಿಳಿದಿದ್ದಾರೆ. ಬುಧವಾರ ಬೆಳಗ್ಗೆ 11 ಗಂಟೆಗೆ ಬಿಡದಿಯ ತಮ್ಮ ತೋಟದಲ್ಲಿ ಪಕ್ಷ ಬೆಂಬಲಿತ ಮತದಾರರು ಹಾಗೂ ಪಕ್ಷದ ಮುಖಂಡರ ಸಭೆಯನ್ನು ಆಯೋಜಿಸಿದ್ದಾರೆ. ತಾಲೂಕಿನಲ್ಲಿರುವ ಜೆಡಿಎಸ್ ಪಕ್ಷದ ಮತಗಳನ್ನು ಭದ್ರಪಡಿಸಿಕೊಳ್ಳುವುದು ಹಾಗೂ ಕಾಂಗ್ರೆಸ್ ನಾಯಕರಿಗೆ ಚುನಾವಣೆಯಲ್ಲಿ ಸಮರ್ಥವಾಗಿ ಟಾಂಗ್ ಕೊಡುವುದು ದಳಪತಿಯ ಉದ್ದೇಶವಾಗಿದೆ.

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts