More

    ಕೇರಳದಲ್ಲಿ ಅರಮನೆಯನ್ನೇ ಕಟ್ಟಿದ ಅನಿವಾಸಿ ಭಾರತೀಯ ತೈಲೋದ್ಯಮಿ ಮೃತದೇಹ ತರಲು ಕುಟುಂಬಕ್ಕೆ ಇದೆಂಥ ಸಂಕಷ್ಟ?

    ಕೊಚ್ಚಿ: ಕೇರಳದಲ್ಲಿಯೇ ಅತಿದೊಡ್ಡ ಮನೆ, ಅಲ್ಲ ‘ಅರಮನೆ’ಯನ್ನೇ ಕಟ್ಟಿರುವ ಉದ್ಯಮಿಯೊಬ್ಬರು ದುಬೈಯಲ್ಲಿ ಮೃತಪಟ್ಟಿದ್ದಾರೆ. ಆದರೆ, ಅವರ ದೇಹವನ್ನು ಭಾರತಕ್ಕೆ ತರಲಾಗುತ್ತಿಲ್ಲ. ನೋಡಿ ಇದೆಂಥ ದುಸ್ಥಿತಿ….
    ಇಂಥದ್ದೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಲ್ಲಿದೆ ಫ್ಯಾಕ್ಟ್​ಚೆಕ್​.

    ಜಾಯ್​ ಅರಕ್ಕಲ್​ (54) ಮುಖ್ಯ ಕಚೇರಿ ಹೊಂದಿರುವ ಇನ್ನೋವಾ ರಿಫೈನಿಂಗ್​ ಆ್ಯಂಡ್ ಟ್ರೇಡಿಂಗ್​ ಕಂಪನಿಯ ಸಂಸ್ಥಾಪಕರು. ಶಾರ್ಜಾ, ಯುಎಇ, ಸೌದಿ ಅರೇಬಿಯಾಗಳಲ್ಲಿ ಈ ಕಂಪನಿಯು ರಿಫೈನರಿಗಳನ್ನು ಹೊಂದಿದೆ. ಇದಲ್ಲದೇ, ವಾಹನೋದ್ಯಮ, ಕೈಗಾರಿಕೆ ಹಾಗೂ ಹಡಗುಗಳಿಗೆ ತೈಲೋತ್ಪನ್ನಗಳನ್ನು ಪೂರೈಸುತ್ತದೆ. ಇದಲ್ಲದೇ ಟ್ಯಾಂಕರ್​, ಹಡಗುಗಳ ಮೂಲಕ ಪೂರೈಸಲಾಗುವ ತೈಲಗಳ ಸಂಗ್ರಹ ಹಾಗೂ ನಿರ್ವಹಣಾ ವ್ಯವಸ್ಥೆ ಹೊಂದಿದೆ. ಇದಕ್ಕಾಗಿ ಶಾರ್ಜಾ, ದುಬೈ, ದಮ್ಮಂ ಮೊದಲಾದ ಕಡೆ ಕಾರ್ಗೋ ಘಟಕಗಳನ್ನು ಸ್ಥಾಪಿಸಿದೆ. ಕೊಲ್ಲಿ ರಾಷ್ಟ್ರದಲ್ಲಿಯೇ ಸಾವಿರಾರು ಕೋಟಿಗಳ ಒಡೆಯರಾಗಿದ್ದಾರೆ ಜಾಯ್​ ಅರಕ್ಕಲ್​.

    ಇನ್ನು, ಭಾರತದಲ್ಲಿ 11 ಕಂಪನಿಗಳ ನಿರ್ದೇಶಕ ಮಂಡಳಿಯಲ್ಲಿ ಜಾಯ್​ ಸ್ಥಾನ ಪಡೆದಿದ್ದಾರೆ. ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ.

    ಕೇರಳದ ವಯನಾಡ್​ ಜಿಲ್ಲೆಯ ಮಾನಂದವಾಡಿ ಸಮೀಪದ ವರಾಯಲ್​ ಗ್ರಾಮದವರಾದ ಜಾಯ್​, ರೈತಾಪಿ ಕುಟುಂಬದ ಹಿನ್ನೆಯುಳ್ಳವರು. ಪಾರ್ಟ್​ಟೈಮ್​ ಜಾಬ್​ ಮಾಡುತ್ತಲೇ ಜಾಯ್​ ಶಿಕ್ಷಣ ಪಡೆದರು. ಕೊನೆಗೆ ಉದ್ಯೋಗ ಅರಸಿ ಕೊಲ್ಲಿ ರಾಷ್ಟ್ರದತ್ತ ಮುಖ ಮಾಡಿದರು. ಕೆಲ ಸಮಯದಲ್ಲಿಯೇ ಅಲ್ಲೊಂದು ಕಂಪನಿ ಆರಂಭಿಸಿ ಯಶಸ್ಸಿನ ಉತ್ತುಂಗಕ್ಕೇರಿದರು.

    ಜಾಯ್​ ಅರಕ್ಕಲ್​ ಬಗ್ಗೆ ಭಾರಿ ಚರ್ಚೆಗಳು ಶುರುವಾಗಿದ್ದು, ಮಾನಂದವಾಡಿಯಲ್ಲಿ ಮನೆ ಕಟ್ಟಲು ಆರಂಭಿಸಿದಾಗ. ಅಂದಾಜು ಒಂದು ಎಕರೆಗೂ ಹೆಚ್ಚು ವಿಸ್ತೀರ್ಣವಿರುವ ಈ ಮನೆಯನ್ನು “ಅರಕ್ಕಲ್​ ಪ್ಯಾಲೇಸ್​” ಎಂದೇ ಕರೆಯಲಾಗುತ್ತದೆ. ಕೇರಳದಲ್ಲಿಯೇ ಅತ್ಯಂತ ದೊಡ್ಡ ಮನೆ ಎಂಬ ಖ್ಯಾತಿ ಇದಕ್ಕಿದೆ.

    ಇಂಥ ಹಿನ್ನೆಲೆಯ ಜಾಯ್​ ಅರಕ್ಕಲ್​ ಏಪ್ರಿಲ್​ 23 (ಗುರುವಾರ) ದುಬೈನಲ್ಲಿ ಮೃತಪಟ್ಟಿದ್ದಾರೆ. ತೀವ್ರ ಹೃದಯ ಸ್ತಂಭನದಿಂದ ಇವರ ಸಾವು ಸಂಭವಿಸಿದೆ ಹೊರತು ಇನ್ಯಾವ ಕಾರಣವೂ ಇಲ್ಲ. ಇವರಿಗೆ ಪತ್ನಿ ಸೆಲಿನಾ ಜಾಯ್​ ಮಕ್ಕಳಾದ ಅರುಣ್​ ಹಾಗೂ ಆಶ್ಲೇ ಇದ್ದಾರೆ.

    ಸದ್ಯ ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಮೃತದೇಹವನ್ನು ಕೇರಳಕ್ಕೆ ತರಲು, ಅಲ್ಲಿಂದ ಮಾನಂದವಾಡಿಗೆ ಕೊಂಡೊಯ್ಯಲು ಕುಟುಂಬದವರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

    ಕರೊನಾ…… ಎಲ್ಲೆಲ್ಲಿ ಹುಡುಕಲಿ ನಿನ್ನ, ಕೊಚ್ಚೆ ನೀರಿನ ಮೇಲೂ ಕಣ್ಣಿಟ್ಟಿದ್ದಾರೆ ವಿಜ್ಞಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts