More

    ಕರೊನಾ…… ಎಲ್ಲೆಲ್ಲಿ ಹುಡುಕಲಿ ನಿನ್ನ, ಕೊಚ್ಚೆ ನೀರಿನ ಮೇಲೂ ಕಣ್ಣಿಟ್ಟಿದ್ದಾರೆ ವಿಜ್ಞಾನಿಗಳು

    ನವದೆಹಲಿ: ವಿಶ್ವದಲ್ಲಿ ಈವರೆಗೆ 30 ಲಕ್ಷ ಜನರು ಕರೊನಾ ಸೋಂಕಿಗೆ ಒಳಗಾಗಿದ್ದರೆ, 2,06,535 ಜನರು ಕೋವಿಡ್-19ನಿಂದಾಗಿ ಮೃತಪಟ್ಟಿದ್ದಾರೆ. ಜಗತ್ತಿನ ಬಹತೇಕ ಎಲ್ಲ ರಾಷ್ಟ್ರಗಳು ಇದರ ಕಪಿಮುಷ್ಠಿಗೆ ಸಿಲುಕಿದಂತಾಗಿವೆ. ಇಷ್ಟು ವ್ಯಾಪಕವಾಗಿ ಕರೊನಾ ವೈರಸ್​ ಪಸರಿಸಲು ಏನು ಕಾರಣ ಎಂಬ ಬಗ್ಗೆ ವಿಜ್ಞಾನಿಗಳು ಚಿಂತಾಕ್ರಾಂತರಾಗಿದ್ದಾರೆ.

    ಗಾಳಿಯ ಮೂಲಕ ಇದು ಹಬ್ಬುತ್ತದೆ, ಗಾಳಿಯಲ್ಲಿರುವ ಮಾಲಿನ್ಯಕಾರಕ ಕಣಗಳು ಈ ವೈರಸ್​ಅನ್ನು ಬಹದೂರದವರೆಗೆ ಕೊಂಡೊಯ್ಯುತ್ತವೆ ಎಂಬೆಲ್ಲ ಸಂಶೋಧನೆಗಳು ನಡೆದಿವೆ. ಆದರೂ, ಇವುಗಳು ಸೋಂಕು ವ್ಯಾಪಿಸುವಷ್ಟು ಪ್ರಬಲ ಸಂಗತಿಗಳು ಎಂಬುದಕ್ಕೆ ಆಧಾರಗಳಿಲ್ಲ ಎಂದು ವಿಜ್ಞಾನಿಗಳೇ ಹೇಳುತ್ತಿದ್ದಾರೆ.

    ಹಾಗಿದ್ದರೆ, ಇನ್ನ್ಯಾವುದರ ಮೂಲಕ ಈ ಮಟ್ಟಿಗೆ ವೈರಸ್​ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿದೆ ಎಂಬುದನ್ನು ಕಂಡುಕೊಳ್ಳಲು ಶೋಧಗಳು ಮುಂದುವರಿದಿದ್ದು, ವಿಜ್ಞಾನಿಗಳೀಗ ಕೊಚ್ಚೆ ನೀರಿನ ಮೇಲೆ ಕಣ್ಣಿಟ್ಟಿದ್ದಾರೆ. ಅಮೆರಿಕದ ನ್ಯೂಕಾಸಲ್ ಕೌಂಟಿ ಅಧಿಕಾರಿಗಳು ಸ್ಟಾರ್ಟಪ್​ ಕಂಪನಿಯೊಂದರ ಜತೆ ಒಪ್ಪಂದ ಮಾಡಿಕೊಂಡು ಕೊಳಚೆ ನೀರಿನ ಪರೀಕ್ಷೆ ಮಾಡಿಸುತ್ತಿದ್ದಾರೆ.​

    ಸೋಂಕಿತ ಮನುಷ್ಯನ ಮಲದಲ್ಲಿ ಕರೊನಾ ವೈರಸ್​ ಇವೆ ಎಂಬುದು ಗೊತ್ತಾಗಿದೆ. ಒಳಚರಂಡಿಗಳ ಮೂಲಕ ಇದು ಕೊಚ್ಚೆ ನೀರನ್ನು ಸೇರಿ ಬೇರೆಯವರಿಗೆ ಹರಡುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಇದಕ್ಕಾಗಿ ವಿವಿಧೆಡೆಯ ಕೊಳಚೆ ನೀರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಏಕೆಂದರೆ, ಕಾಯಿಲೆಗೆ ತುತ್ತಾಗಿದ್ದರೂ ಬಹುತೇಕರಲ್ಲಿ ಅದರ ಲಕ್ಷಣಗಳು ಗೋಚರಿಸುವುದಿಲ್ಲ. ಅಂಥವರಿಂದ ಇತರರಿಗೆ ಹಬ್ಬುವ ಸಾಧ್ಯತೆಗಳು ಹೆಚ್ಚಾಗಿವೆ.

    ಇತ್ತೀಚೆಗೆಷ್ಟೇ ಪ್ಯಾರಿಸ್​ನಲ್ಲಿ ಸಂಸ್ಕರಿಸಿದ ಕೊಳಚೆ ನೀರಿನಲ್ಲಿ ಅತಿ ಸಣ್ಣ ಪ್ರಮಾಣದಲ್ಲಿ ಕರೊನಾ ವೈರಸ್​ ಕಂಡು ಬಂದ ಕಾರಣ ನೀರಿನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದಲ್ಲದೇ, ನೆದರ್ಲೆಂಡ್​ನ ಅಮರ್ಸ್​ಫೋರ್ಟ್​ ನಗರದಲ್ಲಿ ಕರೊನಾ ಪ್ರಕರಣ ವರದಿಯಾಗುವ ಮುನ್ನವೇ ಅಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಕರೊನಾ ವೈರಸ್​ನ ಕುರುಹುಗಳನ್ನು ಪತ್ತೆ ಹಚ್ಚಲಾಗಿತ್ತು. ಈ ಕಾರಣದಿಂದಾಗಿ ತ್ಯಾಜ್ಯ ನೀರಿನ ಪರೀಕ್ಷೆ ಈಗ ಎಲ್ಲಿಲ್ಲದ ಪ್ರಾಮುಖ್ಯತೆ ಪಡೆದುಕೊಂಡಿದೆ.

    ಲಾಕ್​ಡೌನ್​ ನಡುವೆಯೇ ವಿವಿಧ ಇಲಾಖೆಯ 210 ಹುದ್ದೆಗಳ ನೇಮಕಾತಿಗೆ ಆಯ್ಕೆ ಪಟ್ಟಿ ಪ್ರಕಟಿಸಿದ ಕೆಪಿಎಸ್​ಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts