More

    ವಿದೇಶದಲ್ಲಿ ಕೋಟ್ಯಂತರ ರೂ. ಆಸ್ತಿ: ರವಿ ಪೂಜಾರಿ ವಿಚಾರಣೆಗೆ ಇ.ಡಿ. ಸಿದ್ಧತೆ

    ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಯಡಿ ಎನ್‌ಫೋರ್ಸ್‌ಮೆಂಟ್ ಕೇಸ್ ಇನ್‌ಫರ್ಮೇಶನ್ ರಿಪೋರ್ಟ್ (ಇಸಿಐಆರ್) ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ (ಇಡಿ) ಈಗ ಈತನ ಹೇಳಿಕೆ ದಾಖಲಿಸಿಕೊಳ್ಳಲು ಸಿದ್ಧತೆ ನಡೆಸಿದೆ.

    ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕಂಬಿ ಎಣಿಸುತ್ತಿರುವ ರವಿ ಪೂಜಾರಿ ಹೇಳಿಕೆ ಪಡೆಯಲು ಅನುಮತಿ ನೀಡುವಂತೆ ಕೋರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್‌ಗೆ ಇಡಿ ಮನವಿ ಮಾಡಿದೆ. ಅನುಮತಿ ನೀಡಿದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ತೆರಳಿ ಆತನ ಹೇಳಿಕೆ ಪಡೆಯಲಿದೆ. ಇದಾದ ಬಳಿಕ ಈತ ನಡೆಸಿರುವ ಅಕ್ರಮ ಹಣಕಾಸು ವರ್ಗಾವಣೆ ಹಾಗೂ ವಿದೇಶದಲ್ಲಿ ಹೊಂದಿರುವ ಅಕ್ರಮ ಆಸ್ತಿ-ಪಾಸ್ತಿ ಬಗ್ಗೆ ತನಿಖೆ ನಡೆಸಲಿದೆ. ನಂತರ ಇ.ಡಿ. ಅಧಿಕಾರಿಗಳು ಈತನನ್ನು ವಶಕ್ಕೆ ಪಡೆದು ಈ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕುವ ಸಾಧ್ಯತೆಗಳಿವೆ. ಇದನ್ನೂ ಓದಿ ಅಭಿವೃದ್ಧಿ ಕಾರ್ಯಕ್ಕಾಗಿ 33000 ಕೋಟಿ ರೂ. ಸಾಲ ಪಡೆಯಲಿದೆ ರಾಜ್ಯ ಸರ್ಕಾರ

    26ಕ್ಕೂ ಅಧಿಕ ವರ್ಷಗಳ ಕಾಲ ಭೂಗತ ಜಗತ್ತನ್ನು ಆಳಿ ಸದ್ಯ ಕಂಬಿ ಎಣಿಸುತ್ತಿರುವ ಗ್ಯಾಂಗ್‌ಸ್ಟರ್ ರವಿ ಪೂಜಾರಿ ಸೆನಗಲ್‌ನಲ್ಲಿ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ ಹೊಂದಿದ್ದ. ಭಾರತದಲ್ಲಿ ಈತ ನಡೆಸಿದ ಅಕ್ರಮ ಚಟುವಟಿಕೆಗಳಲ್ಲಿ ಗಳಿಸಿದ ನೂರಾರು ಕೋಟಿ ರೂ.ಗಳನ್ನು ಆಫ್ರಿಕಾದ ಸೆನಗಲ್‌ನಲ್ಲಿ ನಡೆಸುತ್ತಿದ್ದ ಉದ್ಯಮಗಳಲ್ಲಿ ಹೂಡಿಕೆ ಮಾಡಿರುವುದು ಇ.ಡಿ. ತನಿಖೆಯಲ್ಲಿ ಕಂಡು ಬಂದಿದೆ.

    ಆಫ್ರಿಕಾದ ಬುರ್ಕೀನಾ ಫಾಸೊದಲ್ಲಿರುವ ‘ಯುನೈಟೆಡ್ ಬ್ಯಾಂಕ್ ಆಫ್ ಅಮೆರಿಕಾ’ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದ ಪೂಜಾರಿ, ಉದ್ಯಮದಲ್ಲಿ ಬಂದ ಲಾಭಾಂಶವನ್ನು ಈ ಬ್ಯಾಂಕ್‌ನಲ್ಲೇ ಹೂಡಿಕೆ ಮಾಡುತ್ತಿದ್ದ. ಬುರ್ಕೀನಾ ಫಾಸೊದ ಓಗ ದೋಗು ಪ್ರದೇಶದಲ್ಲಿದ್ದ ಗುಥಿಯಾರ್ ಎಲೆಕ್ಟ್ರಾನಿಕ್ಸ್, ಸೆನಗಲ್‌ನ ರಾಜಧಾನಿ ದಖಾರ್‌ನಲ್ಲಿ ಆಪ್ತನ ಜತೆ ಪಾಲುದಾರಿಕೆಯಲ್ಲಿ ನಡೆಸುತ್ತಿದ್ದ ಮಹಾರಾಜಾ ಇಂಡಿಯನ್ ಕ್ಯಾಸಿನೋ ಬಾರ್ ಆೃಂಡ್ ರೆಸ್ಟೊರೆಂಟ್, ಬುರ್ಕೀನಾದ ಓಗ ದೋಗುನಲ್ಲಿ ಹೊಂದಿದ್ದ ನಮಸ್ತೆ ಇಂಡಿಯಾ, ದಖಾರ್‌ನ ಆೃಂಬಿಯೆನ್ಸ್ ಸೆಲೂನ್‌ಗಳು ಹಾಗೂ ಈ ಉದ್ಯಮದಲ್ಲಿ ಬಂದ ನೂರಾರು ಕೋಟಿ ರೂ. ಆದಾಯವನ್ನು ವಶಕ್ಕೆ ಪಡೆಯಲು ಇಡಿ ಮುಂದಾಗಿದೆ. ಭಾರತದಲ್ಲೂ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಕೋಟ್ಯಂತರ ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಸುಳಿವು ಸಿಕ್ಕಿದೆ. ಪತ್ನಿ ಹಾಗೂ ಮಕ್ಕಳ ಹೆಸರಲ್ಲೂ ವಿದೇಶದಲ್ಲಿ ಕೋಟ್ಯಂತರ ರೂ. ಹೊಂದಿರುವುದು ಇ.ಡಿ. ಗಮನಕ್ಕೆ ಬಂದಿದೆ.

    ಕೊಲ್ಕತ್ತದ ಕೆಲವು ಪುರುಷರ ವಿಚಿತ್ರ ಖಯಾಲಿ; ಮಾಜಿ ಪ್ರೇಯಸಿಯರಿಂದ ಪೊಲೀಸರಿಗೆ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts