More

    ಇ.ಡಿ.ತನಿಖೆಗೆ ಸಹಕರಿಸದ ಯೆಸ್​ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್​ ಅರೆಸ್ಟ್​…

    ಮುಂಬೈ: ಯೆಸ್​ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್​ರನ್ನು ವಿಚಾರಣೆಗಾಗಿ ಶನಿವಾರ ಬೆಳಗ್ಗೆ ಮುಂಬೈ ಕಚೇರಿಗೆ ಕರೆದೊಯ್ದಿದ್ದ ಇಡಿ ಅಧಿಕಾರಿಗಳು ಭಾನುವಾರ ಮುಂಜಾನೆ ಬಂಧಿಸಿದ್ದಾರೆ.

    ಬ್ಯಾಂಕ್​ನ ಆರ್ಥಿಕ ಸ್ಥಿತಿ ಹದಗೆಟ್ಟ ಕಾರಣದ ಬಗ್ಗೆ ಅವರನ್ನು ವಿಚಾರಣೆ ನಡೆಸಿದರೂ ರಾಣಾ ಕಪೂರ್​ ಅವರು ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲದ ಕಾರಣ ಇ.ಡಿ.ಅಧಿಕಾರಿಗಳನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
    ರಾಣಾ ಕಪೂರ್​ ಅವರನ್ನು ಇಂದು ಸ್ಥಳೀಯ ನ್ಯಾಯಾಲಯದ ಎದುರು ಹಾಜರು ಪಡಿಸಲಾಗುವುದು ಎನ್ನಲಾಗಿದೆ.

    ಯೆಸ್​ ಬ್ಯಾಂಕ್​ ದಿವಾಳಿ ಹಿನ್ನೆಲೆಯಲ್ಲಿ ಆರ್​ಬಿಐ ಮಧ್ಯಪ್ರವೇಶ ಮಾಡಿ, ಅಲ್ಲಿನ ಆಡಳಿತ ಮಂಡಳಿಯನ್ನು ವಜಾಗೊಳಿಸಿತ್ತು. ಶುಕ್ರವಾರ ಯೆಸ್​ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್​ ಮನೆ ಮೇಲೆ ಇ.ಡಿ. ದಾಳಿ ನಡೆಸಿತ್ತು.

    ಇದನ್ನೂ ಓದಿ: ಸಂಕಷ್ಟಕ್ಕೆ ಸಿಲುಕಿರುವ ಯೆಸ್​ ಬ್ಯಾಂಕ್​ ಗ್ರಾಹಕರಿಗೆ ಬಿಗ್​ ರಿಲೀಫ್​ ನೀಡಿದ ಆರ್​ಬಿಐ, ಕೇಂದ್ರ ಸರ್ಕಾರ

    ಇ.ಡಿ.ಅಧಿಕಾರಿಗಳು ಹಣಕಾಸು ಅಕ್ರಮ ವರ್ಗಾವಣೆ ತಡೆ ಕಾನೂನಿನ (ಪಿಎಂಎಲ್​ಎ) ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಡಿಎಚ್​ಎಫ್​ಎಲ್(ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಶನ್ ಲಿಮಿಟೆಡ್) ತನಿಖೆಯಲ್ಲಿ ಸಿಕ್ಕ ವಿವರಗಳ ಆಧಾರದಲ್ಲಿ ಯೆಸ್ ಬ್ಯಾಂಕ್ ವಿರುದ್ಧ ಕ್ರಮ ಆರಂಭಿಸಲಾಗಿದೆ.(ಏಜೆನ್ಸೀಸ್)

    ಇಡಿ ಅಧಿಕಾರಿಗಳಿಂದ ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್ ನಿವಾಸದಲ್ಲಿ ಶೋಧ ಕಾರ್ಯ: ಲುಕ್ ಔಟ್ ನೋಟಿಸ್​ ಜಾರಿ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts