More

    ಭೂಕಂಪನಕ್ಕೆ ಬೆಚ್ಚಿಬಿದ್ದ ಜನ, ಒಂದೇ ದಿನ ಹಲವು ಬಾರಿ ಸದ್ದು, ಬೆಂಗಳೂರಿನಿಂದ ತಜ್ಞರ ತಂಡ ಭೇಟಿ-ಪರಿಶೀಲನೆ

    ವಿಜಯಪುರ: ಸರಣಿ ಭೂಕಂಪನದಿಂದಾಗಿ ಬೆಚ್ಚಿ ಬಿದ್ದ ಜಿಲ್ಲೆಯ ಜನತೆಗೆ ಆತ್ಮಸ್ಥೈರ್ಯ ಮೂಡಿಸಲು ಮತ್ತು ಭೂಕಂಪನದ ಅಧ್ಯಯನ ನಡೆಸಲು ಬೆಂಗಳೂರಿನ ತಜ್ಞರ ತಂಡ ಭೇಟಿ ನೀಡಿದೆ.

    ಶುಕ್ರವಾರ ಉಕ್ಕಲಿ ಗ್ರಾಮಕ್ಕೆ ಭೇಟಿ ನೀಡಿದ ತಂಡ ಭೂಕಂಪನದ ಕುರಿತು ಮಾಹಿತಿ ಕಲೆ ಹಾಕಿದೆ. ಅಲ್ಲದೇ, ಸ್ಥಳೀಯರೊಂದಿಗೆ ಸಂವಾದ ನಡೆಸಿದ್ದು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯ ಇಲ್ಲವೆಂದು ಧೈರ್ಯ ತುಂಬಿದೆ.

    ಇದಕ್ಕೂ ಮುನ್ನವೇ ನಾಲ್ಕೈದು ಬಾರಿ ಭೂಮಿ ಕಂಪಿಸಿದೆ. ಗುರುವಾರ ರಾತ್ರಿ 2 ರಿಂದ ಶುಕ್ರವಾರ ಬೆಳಗ್ಗೆ 8ರವರೆಗೆ ನಾಲ್ಕೈದು ಬಾರಿ ಭೂಮಿ ಕಂಪಿಸಿದೆ. ಆದರೆ, ಎರಡು ಕಂಪನಗಳು ಮಾತ್ರ ರಿಕ್ಟರ್‌ಮಾಪಕದಲ್ಲಿ ದಾಖಲಾಗಿವೆ. ರಾತ್ರಿ 2.21ಕ್ಕೆ ವಿಜಯಪುರ ನಗರ ಸೇರಿದಂತೆ ಕವಲಗಿ ಮತ್ತು ಮದಬಾವಿ ಸುತ್ತಮುತ್ತ ಭೂಕಂಪನವಾಗಿದೆ. ರಿಕ್ಟರ್‌ಮಾಪಕದಲ್ಲಿ 3.9 ತೀವ್ರತೆ ದಾಖಲಾಗಿದೆ. ಆನಂತರ ಎರಡ್ಮೂರು ಬಾರಿ ಭೂಕಂಪನದ ಅನುಭವವಾಗಿದೆ. ಬೆಳಗ್ಗೆ 7 ರ ಸಮಾರಿಗೆ ಮತ್ತೆ ಭೂಮಿ ಕಂಪಿಸಿದ್ದು, 3.7ರಷ್ಟು ತೀವ್ರತೆ ದಾಖಲಾಗಿದೆ.

    ಈ ಬಗ್ಗೆ ತಜ್ಞರು ಜಿಲ್ಲಾಡಳಿತದಿಂದ ಸಮರ್ಪಕ ಮಾಹಿತಿ ಕಲೆ ಹಾಕಿದ್ದು, ಬಾಧಿತ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ. ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಸಿಇಒ ರಾಹುಲ್ ಶಿಂಧೆ, ಎಸ್ ಪಿ ಎಚ್.ಡಿ. ಆನಂದಕುಮಾರ, ರಾಕೇಶ ಜೈನಾಪುರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts