More

    ದೆಹಲಿಯಲ್ಲಿ ಎರಡನೇ ದಿನವೂ ಲಘುವಾಗಿ ನಡುಗಿದ ಭೂಮಿ, 2.7 ತೀವ್ರತೆ ದಾಖಲು

    ನವದೆಹಲಿ: ದೆಹಲಿಯಲ್ಲಿ ಸೋಮವಾರ ಮಧ್ಯಾಹ್ನ ಮತ್ತೊಮ್ಮೆ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ 2.7ರ ತೀವ್ರತೆ ದಾಖಲಾಗಿದೆ.
    ಭಾನುವಾರ ಸಂಜೆ 5.45ರಲ್ಲಿ ದೆಹಲಿಯಲ್ಲಿ 3.5 ತೀವ್ರತೆ ಲಘು ಭೂಕಂಪ ಸಂಭವಿಸಿತ್ತು. ಪೂರ್ವ ದೆಹಲಿಯ ಸೋನಿಯಾ ವಿಹಾರದಲ್ಲಿ ಕಂಪನದ ಕೇಂದ್ರಬಿಂದು ಸ್ಥಿತವಾಗಿತ್ತು.

    ಕಂಪನದ ಕೇಂದ್ರ ಬಿಂದುವಿನಲ್ಲಿ ಕಂಪನವು ತುಂಬಾ ಆಳವಾಗಿರಲಿಲ್ಲ. ಹಾಗಾಗಿ, ಭಾನುವಾರದ ಲಘು ಭೂಕಂಪನದ ಸಂದರ್ಭದಲ್ಲಿ ಜೋರಾದ ಅಲುಗಾಟ ಉಂಟಾಗಿತ್ತು ಎಂದು ಭೂಕಂಪಶಾಸ್ತ್ರ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಇದಕ್ಕೂ ಮುನ್ನ 2018ರ ಏಪ್ರಿಲ್​ 24ರಂದು ಕೂಡ 3.5 ತೀವ್ರತೆಯ ಭೂಕಂಪ ಸಂಭವಿಸಿತ್ತು. 2011ರ ಸೆಪ್ಟೆಂಬರ್​ 7ರಂದು ದೆಹಲಿ ಮತ್ತು ಹರಿಯಾಣ ಗಡಿಭಾಗದಲ್ಲಿ 3.8 ತೀವ್ರತೆಯ ಭೂಕಂಪನ ಸಂಭವಿಸಿತ್ತು. 2007ರಲ್ಲಿ ಕೂಡ ಅತ್ಯಂತ ಲಘು ಭೂಕಂಪನವಾಗಿತ್ತು. 2001 ಏಪ್ರಿಲ್​ 28ರಂದು 3.1 ತೀವ್ರತೆಯಲ್ಲಿ ಭೂಮಿ ನಡುಗಿತ್ತು.

    ಮಹಾರಾಷ್ಟ್ರದ ತಾರಾಪುರ ರಾಸಾಯನಿಕ ವಲಯದಲ್ಲಿ ಸ್ಫೋಟ, ಸ್ಯಾನಿಟೈಸರ್​ ಕಾರ್ಖಾನೆಯಲ್ಲಿ ಇಬ್ಬರ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts