More

  ಭಾರತದ ಜೆರ್ಸಿ ಧರಿಸಿ ಆಡುವುದೇ ನನಗೆ ಹೆಮ್ಮೆಯ ವಿಷಯವಾಗಿತ್ತು, ವಿಶೇಷ ಕ್ಷಣವಾಗಿತ್ತು: ಪದ್ಮಶ್ರೀ ಪುರಸ್ಕೃತ ಜಹೀರ್​ ಖಾನ್​ ಮನದಾಳ

  ಮುಂಬೈ: ಭಾರತ ಕ್ರಿಕೆಟ್​ ತಂಡದ ಮಾಜಿ ವೇಗದ ಬೌಲರ್​ ಜಹೀರ್ ಖಾನ್​ಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.

  ತಮಗೆ ದೇಶದ ಉನ್ನತ ಗೌರವ ಸಿಕ್ಕಿದ್ದರ ಬಗ್ಗೆ ಟ್ವೀಟ್​ ಮೂಲಕ ಅವರು ಕೃತಜ್ಞತೆ ಹೇಳಿದ್ದಾರೆ.
  ನನಗೆ ಸಿಕ್ಕ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪುರಸ್ಕಾರಕ್ಕೆ ವಿಧೇಯನಾಗಿದ್ದೇನೆ ಎಂದಿದ್ದಾರೆ.

  ಈ ದೇಶಕ್ಕಾಗಿ ಕ್ರಿಕೆಟ್​ ಆಡುವುದು ನನ್ನ ಕನಸಾಗಿತ್ತು. ಆ ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞನಾಗಿದ್ದೇನೆ. ಭಾರತದ ಜೆರ್ಸಿಯನ್ನು ಧರಿಸಿ ಆಟವಾಡುವುದೇ ನನ್ನ ಪಾಲಿಗೆ ದೊಡ್ಡ ಹೆಮ್ಮೆಯಾಗಿತ್ತು. ಅದೊಂದು ಗೌರವವಾಗಿತ್ತು. ನನ್ನ ತಂಡದ ಉಳಿದ ಆಟಗಾರರಂತೆ ನಾನೂ ಕೂಡ ನನ್ನ ಕೈಲಾದಷ್ಟು ಉತ್ತಮವಾಗಿ ಆಟವಾಡಿದ್ದೇನೆ ಎಂದು ಜಹೀರ್ ಖಾನ್​ ಟ್ವೀಟ್ ಮಾಡಿದ್ದಾರೆ.

  ಪ್ರತಿ ಗೆಲುವಿನ ಕ್ಷಣಗಳೂ ನನ್ನ ಮನಸಲ್ಲಿ ಅಚ್ಚೊತ್ತಿವೆ. ಅವೆಲ್ಲ ನನ್ನ ಪಾಲಿಗೆ ಸ್ಮರಣೀಯ ಸಂದರ್ಭಗಳು. ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.(ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts