More

    ಟೀಂ ಇಂಡಿಯಾಗೆ ಜಹೀರ್ ಖಾನ್​ನಂಥ ಎಡಗೈ ವೇಗಿಯ ಅವಶ್ಯಕತೆಯಿದೆ; ಆರ್​.ಅಶ್ವಿನ್

    ನವದೆಹಲಿ: ಗುಣಮಟ್ಟದ ಎಡಗೈ ವೇಗಿಯ ಕೊರತೆಯನ್ನು ಟೀಂ ಇಂಡಿಯಾ ಕೆಲ ವರ್ಷಗಳಿಂದ ಎದುರಿಸುತ್ತಿದೆ. ಜಹೀರ್ ಖಾನ್ ನಿವೃತ್ತಿಯ ನಂತರ ಎಡಗೈ ವೇಗಿಯ ಸ್ಥಾನವನ್ನು ಪರಿಣಾಮಕಾರಿಯಾಗಿ ಯಾವೊಬ್ಬ ಬೌಲರ್​ನಿಂದಲೂ ತುಂಬಲು ಸಾಧ್ಯವಾಗಿಲ್ಲ ಎಂದು ಭಾರತ ತಂಡದ ಸ್ಪಿನ್ನರ್ ಆರ್​.ಅಶ್ವಿನ್ ಅಭಿಪ್ರಾಯ ಪಟ್ಟಿದ್ದಾರೆ. ಇದನ್ನೂ ಓದಿ: ದೂರು ನೀಡಲು ಬಂದಿದ್ದ ಮಹಿಳೆ ಜತೆ ಅಸಭ್ಯ ವರ್ತನೆ ಪ್ರಕರಣ; ಕೊಡಿಗೆಹಳ್ಳಿ ಇನ್ಸ್​ಪೆಕ್ಟರ್ ಅಮಾನತು

    ಸಂದರ್ಶನವೊಂದರಲ್ಲಿ ಅಶ್ವಿನ್ ಮಾತನಾಡುತ್ತಾ, ಎಡಗೈ ವೇಗಿಗಳನ್ನು ಎದುರಿಸುವುದು ಸಾಕಷ್ಟು ಸವಾಲಿನಿಂದ ಕೂಡಿರುತ್ತದೆ. ಭಾರತೀಯ ಬ್ಯಾಟ್ಸ್​ಮನ್​ಗಳು ಇದಕ್ಕಾಗಿ ನೆಟ್ಸ್​ನಲ್ಲಿ ಸಾಕಷ್ಟು ಕಠಿಣ ಅಭ್ಯಾಸ ಮಾಡುತ್ತಿರುತ್ತಾರೆ. ಈ ಹಿಂದೆಯೂ ಮೈದಾನದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್​ಮನ್​ಗಳು ಎಡಗೈ ವೇಗಿಗಳ ವಿರುದ್ಧ ಪರಿಣಾಮಕಾರಿಯಾಗಿ ಬ್ಯಾಟ್ ಬೀಸಿದ್ದಾರೆ ಎಂದು ಹೇಳಿದ್ದಾರೆ.

    ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರನ್ನು ಅಶ್ವಿನ್ ಪ್ರಶಂಸಿಸುತ್ತಾ, ಹಲವಾರು ವರ್ಷಗಳಿಂದ ತಂಡದ ಯಶಸ್ಸಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅದರಲ್ಲೂ ಏಕದಿನ ಪಂದ್ಯಗಳಲ್ಲಿ ಸ್ಟಾರ್ಕ್ ಪರಿಣಾಮಕಾರಿ ವೇಗಿ. ನನ್ನ ಪ್ರಕಾರ ಮಾಜಿ ಆಸ್ಟ್ರೇಲಿಯಾ ವೇಗಿ ಬ್ರೇಟ್​ ಲೀ ಗಿಂತ ಹೆಚ್ಚು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುತ್ತಾರೆ ಎಂದಿದ್ದಾರೆ. (ಏಜೆನ್ಸೀಸ್) 

    ಇದನ್ನೂ ಓದಿ: ಹಾವೇರಿ | 40 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್​ಐ ಮತ್ತು ಪೇದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts