More

    ಕಲಾವಿದರಿಗೆ ಮಾಸಾಶನ ನೀಡಲು ಚಿಂತನೆ ನಡೆಸಿದೆ ಎಂದ ಪದ್ಮಶ್ರೀ ಪುರಸ್ಕೃತೆ ಬಿ. ಮಂಜಮ್ಮ ಜೋಗತಿ

    ಕುಕನೂರು: ರಾಜ್ಯದ ನಾಲ್ಕು ಕಡೆ ವಿಶ್ವ ಜಾನಪದ ದಿನಾಚರಣೆ ಮಾಡಲಾಗುತ್ತಿದ್ದು, ಮುಂದಿನ ದಿನದಲ್ಲಿ ಸರ್ಕಾರ ಸಹ ವಿಶ್ವ ಜಾನಪದ ದಿನ ಆಚರಿಸಲಿ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಹಾಗೂ ಪದ್ಮಶ್ರೀ ಪುರಸ್ಕೃತೆ ಬಿ. ಮಂಜಮ್ಮ ಜೋಗತಿ ಹೇಳಿದರು.

    ತಾಲೂಕಿನ ಗೊರ್ಲೆಕೊಪ್ಪ ಗ್ರಾಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಗೊರ್ಲೆಕೊಪ್ಪದ ಶ್ರೀ ಕಟ್ಟಿಬಸವಲಿಂಗೇಶ್ವರ ಜಾನಪದ ಕಲಾ ಸಂಘ ಮಂಗಳವಾರ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆಯನ್ನು ಉದ್ಘಾಟಿಸಿದರು. ಕರೊನಾ ವೇಳೆಯಲ್ಲಿ ಕಲಾವಿದರಿಗೆ ಮಾಸಶನ ನೀಡುವ ಪ್ರತಿಕ್ರಿಯೆ ಸರ್ಕಾರದ ಹಂತದಲ್ಲಿದೆ. ಕರೊನಾದಿಂದಾಗಿ ಅಕಾಡೆಮಿಗಳಿಗಳಿಗೆ ಕಡಿಮೆ ಹಣ ಬಂದಿದೆ. ಬೆಂಗಳೂರಿನಲ್ಲಿ ಕಾರ್ಯಕ್ರಮ ಮಾಡಿದ್ದರೆ ಜಾನಪದ ಜನರಿಗೆ ತಲುಪುತ್ತಿರಲಿಲ್ಲ. ಆದ ಕಾರಣ ರಾಜ್ಯದ ನಾಲ್ಕು ಕಡೆ ಗ್ರಾಮೀಣ ಪ್ರದೇಶದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ. ಗೊರ್ಲೆಕೊಪ್ಪ ಗ್ರಾಮ ಕಲಾವಿದರ ತವರೂರು ಆಗಿದ್ದು, ಜಾನಪದ ಅಕಾಡೆಮಿಯೇ ಈ ಗ್ರಾಮವನ್ನು ಮಾದರಿ ರೀತಿಯಲ್ಲಿ ಸ್ವೀಕರಿಸಿದೆ. ಕಲಾವಿದರೂ ಫೈಬರ್ ವಾದ್ಯಗಳ ಮೊರೆ ಹೋಗಬಾರದು. ಅದು ಕಲೆಯನ್ನು ಕೊಲ್ಲುತ್ತದೆ. ಚರ್ಮವಾದ್ಯಗಳ ಬಳಕೆ ಮಾಡಬೇಕು. ಕಲಾವಿದರ ವೇಷ, ಭೂಷಣ ಅತ್ಯಂತ ಶಿಸ್ತಿನಿಂದ ಇರಬೇಕು ಎಂದರು.

    ಶಿಕ್ಷಕ ಸಿದ್ದಯ್ಯ ಕಲ್ಕುಂಡಿಮಠ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಮುಖಂಡ ಸಿದ್ದಯ್ಯ ಕಳ್ಳಿಮಠ, ವಕೀಲ ಗವಿಸಿದ್ದಪ್ಪ ಆರ್ಯರ, ಕಲಾ ಸಂಘದ ಅಧ್ಯಕ್ಷ ಶರಣಯ್ಯ ಇಟಗಿ, ಉದ್ಯಮಿ ಸಚಿನ್ ಆಚಾರ್, ಗ್ರಾಪಂ ಅಧ್ಯಕ್ಷ ಪ್ರಭು ಹಳ್ಳಿ, ಉಪಾಧ್ಯೆಕ್ಷೆ ಬಸವರಾಜೇಶ್ವರಿ ಕಂತಿಮಠ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಚಂದ್ರಶೇಖರ ಲಿಂಗದಳ್ಳಿ, ಕಲಾವಿದ ಒಕ್ಕೂಟದ ಗೌರವಾದ್ಯಕ್ಷ ಡಿ.ಎಸ್ ಪೂಜಾರ, ಲಕ್ಷ್ಮಣ, ಮುಖಂಡರಾದ ಅಂದಪ್ಪ ಹುರುಳಿ, ಬಸವರಾಜ ಕೊಡ್ಲಿ, ಕರಬಸಯ್ಯ ಬಿನ್ನಾಳ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ, ನಾಗರಾಜ ಬೆಣಕಲ್ಲ, ಕಲಾವಿದ ಮರಿಯಪ್ಪ ಅಳವಂಡಿ, ಆದಪ್ಪ ಗುಳಗುಳಿ, ಕಸಾಪ ತಾಲೂಕು ಅಧ್ಯಕ್ಷ ಕಳಕಪ್ಪ ಕುಂಬಾರ, ಶಾಂತವೀರಯ್ಯ ಜುಲ್ಪಿ, ಚನ್ನಪ್ಪಗೌಡ ಮಾಪಾ, ಡಾ.ವಿರೂಪಾಕ್ಷಯ್ಯ ಹಿರೇಮಠ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts