More

    ದುಬೆ ಬ್ರಾಹ್ಮಣನೆಂದು ಯೋಗಿ ಸರ್ಕಾರದಿಂದ ಹತ್ಯೆ: ಕಾಂಗ್ರೆಸ್‌ ಆರೋಪ

    ಕಾನ್ಪುರ: ನಟೋರಿಯಸ್‌ ರೌಡಿ ವಿಕಾಸ್‌ ದುಬೆಯ ಎನ್‌ಕೌಂಟರ್‌ ವಿವಾದ ಇದೀಗ ಜಾತಿಯ ಬಣ್ಣ ಪಡೆದಿದೆ. ಅದರಲ್ಲಿಯೂ ಉತ್ತರ ಪ್ರದೇಶದಲ್ಲಿ ಜಾತಿಯ ಪದ್ಧತಿ ತಾಂಡವಾಡುತ್ತಿದ್ದು, ಇದೀಗ ಎನ್‌ಕೌಂಟರ್‌ ಭಾರಿ ಕೋಲಾಹಲ ಸೃಷ್ಟಿಸಿದೆ.

    ಯೋಗಿ ಆದಿತ್ಯನಾಥ್ ಸರ್ಕಾರವು ರಾಜ್ಯದ ಪ್ರಭಾವಿ ಬ್ರಾಹ್ಮಣ ಸಮುದಾಯವನ್ನು ಹಿಂಸಿಸುತ್ತಿದೆ ಎಂದು ಕಾಂಗ್ರೆಸ್ ಮತ್ತು ಬಿಎಸ್ಪಿ ಆರೋಪಿಸಿದ್ದು, ವಿಕಾಸ್‌ ದುಬೆ ಬ್ರಾಹ್ಮಣ ಸಮುದಾಯದಿಂದ ಬಂದ ಹಿನ್ನೆಲೆಯಲ್ಲಿ ಆತನ ಎನ್‌ಕೌಂಟರ್‌ ಮಾಡಲಾಗಿದೆ ಎಂದಿದೆ.

    ಇದನ್ನೂ ಓದಿ: ಕಾಗೆ ಹಿಕ್ಕೆ ಹಾಕಿತೆಂದು ಎರ್ರಾಬಿರ್ರಿ ಗುಂಡು ಹಾರಿಸಿದ್ದ ದುಬೆ!

    2017ರ ಮಾರ್ಚ್‌ ತಿಂಗಳಿನಿಂದ ಉತ್ತರ ಪ್ರದೇಶ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗಿನಿಂದ ಬ್ರಾಹ್ಮಣ ಸಮುದಾಯದ ಸದಸ್ಯರ ಹತ್ಯೆಗಳು ನಡೆಯುತ್ತಿವೆ. ಈ ಆಡಳಿತದಲ್ಲಿ ಬ್ರಾಹ್ಮಣರು ಕಿರುಕುಳವನ್ನು ಎದುರಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಈ ಸಮುದಾಯದ ಅನೇಕ ಸದಸ್ಯರು ಕೊಲ್ಲಲ್ಪಟ್ಟಿದ್ದಾರೆ. ಬೇರೆ ಸಮುದಾಯದ ಕೆಲವು, ದುಷ್ಕರ್ಮಿಗಳನ್ನು ಬಂಧಿಸಲಾಗಿಲ್ಲ ಎಂದು ಕಾಂಗ್ರೆಸ್‌ ಮತ್ತು ಬಿಎಸ್ಪಿ ಆರೋಪಿಸಿದೆ.

    ಬ್ರಾಹ್ಮಣ ಸಮುದಾಯ ಭಯಭೀತವಾಗಿದೆ. ವಿಕಾಸ್ ದುಬೆ ಎನ್‌ಕೌಂಟರ್‌ ನಂತರ ಈ ಸಮುದಾಯಕ್ಕೆ ತುಂಬಾ ಭಯ ಉಂಟಾಗಿದೆ. ಸಮುದಾಯವು ಭಯಭೀತಾಗಿದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

    ವಿಕಾಸ್ ದುಬೆ ಪಾತ್ರ ಮಾಡ್ತಾರಾ ಮನೋಜ್? ಏನಿದು ಸುದ್ದಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts