ಸಿನಿಮಾ

ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ದಾವಣಗೆರೆ: ನಗರದ 10ನೇ ತರಗತಿ ಉತ್ತೀರ್ಣರಾದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಮೇ 26 ರಂದು ಕಾರ್ಯಾಗಾರ ನಡೆಯಲಿದೆ.

ಬ್ರಾಹ್ಮಣ ಸಮಾಜ ಸೇವಾ ಸಂಘ ಕಾರ್ಯಾಗಾರವನ್ನು ಆಯೋಜಿಸಿದ್ದು, ಸಂಜೆ 5 ಗಂಟೆಗೆ ಸಮಾಜದ ವಿದ್ಯಾರ್ಥಿ ನಿಲಯದ ಆವರಣದಲ್ಲಿ ನಡೆಯಲಿದೆ.

ಸಎಸ್.ಎಸ್.ಎಲ್.ಸಿ. ನಂತರ ವಿದ್ಯಾಭ್ಯಾಸಕ್ಕೆ ಇರುವ ಅವಕಾಶಗಳು ಮತ್ತು ಉದ್ಯೋಗ ಲಭ್ಯತೆ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಲಾಗುವುದು. ಸಂಪನ್ಮೂಲ ವ್ಯಕ್ತಿ ಸುರೇಶ್ ಶಾಸ್ತ್ರಿ ಮಾಹಿತಿ ನೀಡುವರು.

ಅರ್ಹ ಬ್ರಾಹ್ಮಣ ವಿದ್ಯಾರ್ಥಿಗಳು ಮೇ 24 ರ ಒಳಗೆ ಬ್ರಾಹ್ಮಣ ಸಂಘದ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಬ್ರಾಹ್ಮಣ ಸಮಾಜ ಸೇವಾ ಸಂಘ ಕೋರಿದೆ.

Latest Posts

ಲೈಫ್‌ಸ್ಟೈಲ್