More

    ದೆಹಲಿಯಲ್ಲಿ ಕಳೆದ 120 ವರ್ಷಗಳಲ್ಲಿ 12 ಸಲ ಹೀಗಾಗಿತ್ತು!

    ನವದೆಹಲಿ: ದೇಶದಲ್ಲಿ 122 ವರ್ಷಗಳ ಬಳಿಕ ಅತ್ಯಧಿಕ ಮಾಸಿಕ ಸರಾಸರಿ ಉಷ್ಣಾಂಶ ಕಂಡುಬಂದಿದ್ದು, ಈ ಸಲದ ಮಾರ್ಚ್ ಭಯಂಕರ ತಾಪಮಾನದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ.

    ಅಂದರೆ 1901ರ ಮಾರ್ಚ್​ನಲ್ಲಿ ಮಾಸಿಕ ಸರಾಸರಿ ಉಷ್ಣಾಂಶ 33.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಅದಾಗಿ 122 ವರ್ಷಗಳ ಬಳಿಕ ಈ ಸಲ ಮತ್ತೆ ಅಷ್ಟೇ ಮಾಸಿಕ ಸರಾಸರಿ ಉಷ್ಣಾಂಶ ಕಂಡುಬಂದಿದೆ. ಇನ್ನು ಈ ಗರಿಷ್ಠ ತಾಪಮಾನ ಏಪ್ರಿಲ್​ನ 10-15ರ ವರೆಗೂ ಮುಂದುವರಿಯಲಿದೆ. ಮಾತ್ರವಲ್ಲ, ಅಧಿಕ ತಾಪಮಾನದಿಂದ ವಾಯವ್ಯ ಭಾರತ ಅತಿಹೆಚ್ಚು ಬಾಧಿಸಲ್ಪಡಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಅತಿಯಾದ ಒಣಹವೆ ಹಾಗೂ ಶಾಖದ ಅಲೆಗಳ ಪರಿಣಾಮವಾಗಿ ಕಾಳ್ಗಿಚ್ಚು ಉಂಟಾಗುವ ಸಾಧ್ಯತೆಗಳಿದ್ದು, ಆ ಬಗ್ಗೆ ಅರಣ್ಯ ಇಲಾಖೆಗೂ ಹವಾಮಾನ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.

    ಇನ್ನು ದೆಹಲಿಯಲ್ಲಿ ನಾಲ್ಕು ವರ್ಷಗಳ ಬಳಿಕ ಮಾರ್ಚ್ ಡ್ರೈ ಅನಿಸಿಕೊಂಡಿದೆ. ಅಂದರೆ ಕಳೆದ ನಾಲ್ಕು ವರ್ಷಗಳಿಂದ ದೆಹಲಿಯಲ್ಲಿ ಮಾರ್ಚ್​ನಲ್ಲಿ ಮಳೆ ಆಗುತ್ತಿದ್ದು, ಈ ಸಲದ ಮಾರ್ಚ್​ನಲ್ಲಿ ಒಮ್ಮೆಯೂ ಮಳೆಯಾಗದಿರುವುದು ವರದಿಯಾಗಿದೆ. ಅದರಲ್ಲೂ ಕಳೆದ 120 ವರ್ಷಗಳಲ್ಲಿ ಕೇವಲ 12 ಸಲ ಮಾತ್ರ ಇಂಥ ಡ್ರೈ ಮಾರ್ಚ್​ ಕಂಡುಬಂದಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

    122 ವರ್ಷಗಳಲ್ಲಿ ಯಾವತ್ತೂ ಇರಲಿಲ್ಲ ಇಷ್ಟೊಂದು ತಾಪಮಾನ!; ದಾಖಲೆಯ ಉಷ್ಣಾಂಶ ದಾಖಲು..

    ಅಂಬಾನಿಯನ್ನು ಹಿಂದಿಕ್ಕಿದ ಅದಾನಿ; ಗೌತಮ್ ಈಗ ಏಷ್ಯಾದ ಅತಿ ಶ್ರೀಮಂತ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts