More

    ನಗರದಲ್ಲಿ ಮತ್ತೆ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಶುರು!; ಇನ್ಮುಂದೆ ಹೇಗೆ ಟೆಸ್ಟ್ ಮಾಡ್ತಾರೆ ಗೊತ್ತಾ?

    ಬೆಂಗಳೂರು: ನಗರದಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸುತ್ತಿರುವ ಕಾರಣ ಶನಿವಾರ (ಸೆ.25)ದಿಂದ ನಗರ ಸಂಚಾರ ಪೊಲೀಸರು ಮತ್ತೆ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.

    ಶನಿವಾರ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಕಂಟ್ರೋಲ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಹಾಗೂ ಸಂಚಾರ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಯ ಸುರಕ್ಷತಾ ದೃಷ್ಟಿಯಿಂದ ಬೆಂಗಳೂರು ನಗರ ಸಂಚಾರ ವಿಭಾಗದಲ್ಲಿ 2020ರಿಂದ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಪ್ರಕರಣ ದಾಖಲು ಮಾಡುವಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು.

    ಇದನ್ನೂ ಓದಿ: ‘ವಿಜಯಾನಂದ’ ಚಿತ್ರದ ಆಡಿಷನ್ಸ್​ಗೆ ಜಮಾಯಿಸಿದ ಕಲಾವಿದರು

    ಆದರೆ, ನಗರದಲ್ಲಿ ಹೆಚ್ಚುತ್ತಿರುವ ಮಾರಣಾಂತಿಕ ಅಪಘಾತಗಳ ಕಾರಣಗಳನ್ನು ವಿಶ್ಲೇಷಿಸಿದಾಗ ಬಹಳಷ್ಟು ಅಪಘಾತಗಳಲ್ಲಿ ವಾಹನ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಹಿನ್ನೆಲೆಯಲ್ಲಿ ಅಪಘಾತಗಳು ಸಂಭವಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿರುವುದು ಗೊತ್ತಾಗಿದೆ. ಹೆಚ್ಚುತ್ತಿರುವ ಅಪಘಾತಗಳನ್ನು ತಗ್ಗಿಸುವ ನಿಟ್ಟಿನಲ್ಲಿ ನಗರ ಸಂಚಾರ ವಿಭಾಗದಿಂದ ಶನಿವಾರದಿಂದ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವ ಪ್ರಕ್ರಿಯೆಗೆ ಪುನಃ ಚಾಲನೆ ನೀಡಲಾಗಿದೆ ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.

    ತಪಾಸಣೆಗೆ ಹೊಸ ಮಾರ್ಗಸೂಚಿ

    • ಚಾಲಕರ ತಪಾಸಣೆ ನಡೆಸುವ ವೇಳೆ ಪ್ರತಿಯೊಬ್ಬರಿಗೂ ಪ್ರತ್ಯೇಕ ಸ್ಟ್ರಾ ಉಪಯೋಗಿಸಲಾಗುವುದು.
    • ತಪಾಸಣೆ ಮಾಡುವ ಪ್ರತಿಯೊಬ್ಬ ಸಿಬ್ಬಂದಿಯು ಹ್ಯಾಂಡ್‌ಗ್ಲೌಸ್ , ಮಾಸ್ಕ್ ಮತ್ತು ಫೇಸ್‌ಶೀಲ್ಡ್ ಬಳಸುವುದರ ಜತೆಗೆ ಪ್ರತಿಬಾರಿಯು ತಪಾಸಣೆ ಮಾಡಿದ ನಂತರ ಹ್ಯಾಂಡ್ ಸ್ಯಾನಿಟೈಸ್ ಮಾಡಬೇಕು.
    • ತಪಾಸಣೆ ಮಾಡುವಾಗ ಚಾಲಕರ ಮುಂದೆ ಪ್ರತಿಬಾರಿಯು ಸ್ಯಾನಿಟೈಜ್ ಮಾಡಬೇಕು. .
    • ಸ್ಯಾನಿಟೈಸ್ ಆದ ಆಲ್ಕೋಮೀಟರ್‌ಗಳನ್ನು ಪ್ರತ್ಯೇಕ ಜಿಪ್‌ಲಾಕರ್ ಕವರ್‌ನಲ್ಲಿರಿಸಿ, ಉಪಯೋಗಿಸಿದ ನಂತರ ಅದೇ ಜಿಪ್ ಲಾಕರ್ ಕವರ್‌ನಲ್ಲಿ ಪ್ರತ್ಯೇಕವಾಗಿರಿಸಬೇಕು.
    • ತಪಾಸಣೆ ಮಾಡಿದ ಒಂದು ಉಪಕರಣವನ್ನು ಆ ದಿನ ಕೇವಲ ಒಂದು ಬಾರಿ ಮಾತ್ರ ಬಳಕೆಗೆ ಸೀಮಿತಗೊಳಿಸಲಾಗುವುದು.
    • ಬಳಸಿದ ಉಪಕರಣವನ್ನು ಸ್ಯಾನಿಟೈಸ್ ಮಾಡಿ ಕನಿಷ್ಠ 3 ದಿನಗಳ ಮಟ್ಟಿಗೆ ಉಪಯೋಗಿಸದಂತೆ ನೋಡಿಕೊಳ್ಳಲಾಗುವುದು.
    • ತಪಾಸಣೆ ಮಾಡುವ ವೇಳೆಯಲ್ಲಿ ವಾಹನ ಚಾಲಕರು ಮದ್ಯಪಾನ ಮಾಡಿದ್ದಾರೆಂಬುದು ಕಂಡುಬಂದಲ್ಲಿ ಮಾತ್ರ ಉಪಕರಣದಲ್ಲಿ ತಪಾಸಣೆಗೆ ಒಳಪಡಿಸಬೇಕು.
    • ಮದ್ಯಪಾನ ಮಾಡಿ ವಾಹನ ಚಲಾಯಿಸಿದ ವಾಹನ ಚಾಲಕ ಆಲ್ಕೋಮೀಟರ್‌ಗಳಲ್ಲಿ ತಪಾಸಣೆಗೆ ಒಳಪಡಲು ನಿರಾಕರಿಸಿದ್ದಲ್ಲಿ, ಅಂಥವರುಗಳನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts