More

    ಮಾದಕ ವಸ್ತು ಸೇವನೆಯಿಂದ ಬದುಕು ನಾಶ

    ದೇವದುರ್ಗ: ಯುವಜನತೆ ದುಶ್ಚಟಗಳಿಗೆ ದಾಸರಾಗುತ್ತಿರುವುದು ಅತ್ಯಂತ ಖೇದಕರ ಸಂಗತಿಯಗಿದೆ. ಆರೋಗ್ಯಯುತ ಜೀವನ ನಡೆಸಲು ಮಾದಕ ವಸ್ತುಗಳ ಸೇವನೆ ಬೇಡ ಎಂದು ಆರೋಗ್ಯ ಇಲಾಖೆಯ ತಂಬಾಕು ನಿಯಂತ್ರಣ ವಿಭಾಗದ ಅಧಿಕಾರಿ ವೆಂಕೋಬ ಸರ್ಜಾಪುರ ಹೇಳಿದರು.

    ಪಟ್ಟಣದ ಶರಣಪ್ಪ ಮುರಿಗೆಪ್ಪ ಖೇಣೇದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಆಯೋಜಿಸಿದ್ದ ರಾಷ್ಟ್ರೀಯ ತಂಬಾಕು ನಿಯಂತ್ರಣ ಅಭಿಯಾನ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಬುಧವಾರ ಉಪನ್ಯಾಸ ನೀಡಿದರು.

    ಮಾರಣಾಂತಿಕ ರೋಗಗಳಿಗೆ ತುತ್ತು

    ತಂಬಾಕು, ಗುಟ್ಕಾ, ಸಿಗರೇಟ್, ಡ್ರಗ್ಸ್, ಮದ್ಯಪಾನ ಸೇವನೆಯಿಂದ ಬದುಕು ನಶಿಸಿ ಹೋಗುತ್ತದೆ. ಅಲ್ಲದೆ ಇವುಗಳ ಸೇವನೆಯಿಂದ ಮಾರಣಾಂತಿಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಯುವಕರು ಜನರಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು ಎಂದರು.

    ದುಶ್ಚಟಗಳಿಗೆ ಬಲಿಯಾದರೆ ದೇಶದ ಭವಿಷ್ಯಕ್ಕೆ ಮಾರಕ

    ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಸುಭಾಷಚಂದ್ರ ಪಾಟೀಲ್ ಮಾತನಾಡಿ, ಯುವಜನತೆ ದೇಶದ ಸಂಪನ್ಮೂಲ. ದುಶ್ಚಟಗಳಿಗೆ ಬಲಿಯಾದರೆ ದೇಶದ ಭವಿಷ್ಯಕ್ಕೆ ಮಾರಕ. ದೇಶವನ್ನು ಕಟ್ಟುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಯುವಜನತೆ ಮಾದಕ ವಸ್ತುಗಳಿಗೆ ಮಾರುಹೋಗಿ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು. ಸಹಾಯಕ ಪ್ರಾಧ್ಯಾಪಕ ಡಾ.ಮಲ್ಲಯ್ಯ ಅತ್ತನೂರು, ಇತಿಹಾಸ ಪ್ರಾಧ್ಯಾಪಕ ಡಾ.ಅನಂತ್ ಬಿ.ಜಿ., ಪ್ರಮುಖರಾದ ಶ್ರೀದೇವಿ ಪಾಟೀಲ್, ಮುನಿಯಪ್ಪ ನಾಗೋಲಿ, ಗುರುರಾಜ, ಹನುಮಂತ್ರಾಯ ನಾಯ, ಕಾಶಪ್ಪ ಇತರರಿದ್ದರು.

    ಇದನ್ನೂ ಓದಿ: ಈ ಒಂದು ದುಶ್ಚಟ ಬಿಟ್ಟರೆ ಸಾಕು ಬದುಕು ಸುಂದರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts