More

    ಈ ಒಂದು ದುಶ್ಚಟ ಬಿಟ್ಟರೆ ಸಾಕು ಬದುಕು ಸುಂದರ!

    ಕಡೂರು: ಮದ್ಯವ್ಯಸನದಿಂದ ದೂರವಾಗಲು ಯಾವುದೇ ಔಷಧಕ್ಕಿಂತ ಮನಸ್ಸು ಮುಖ್ಯ ಎಂದು ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ. ಕಾಂತರಾಜ್ ಅಭಿಪ್ರಾಯಪಟ್ಟರು.

    ಕೆ.ಹೊಸಳ್ಳಿ ಗಂಗಾಂಬಿಕಾ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ 1686ನೇ ಮದ್ಯವರ್ಜನ ಶಿಬಿರದಲ್ಲಿ ಮಂಗಳವಾರ ನಡೆದ ಸಮಾರೋಪದಲ್ಲಿ ಮಾತನಾಡಿದರು.
    ಮನುಷ್ಯ ಜೀವನದಲ್ಲಿ ಮೌಲ್ಯ ಕಳೆದುಕೊಳ್ಳಬಾರದು. ದುಶ್ಚಟಗಳಿಂದ ಕುಟುಂಬಸ್ಥರಿಗೆ ಅನ್ಯಾಯ ಮಾಡಬಾರದು. ಶಿಬಿರದಲ್ಲಿ ಬಹುತೇಕರು ರೈತರೇ ಇದ್ದು ದುಶ್ಚಟಗಳಿಂದ ದೂರವಿದ್ದು ಕೃಷಿ, ಹೈನುಗಾರಿಕೆ, ಕೋಳಿ ಸಾಕಣೆಯಂಥಹ ಬದುಕು ರೂಪಿಸುವ ಕಡೆಗೆ ಹೆಚ್ಚಿನ ಉತ್ತೇಜನ ನೀಡಿ ಕುಟುಂಬದ ಆರ್ಥಿಕ ಅಭಿವೃದ್ಧಿಗೆ ನೆರವಾಗಿ ಎಂದರು.
    ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯವ್ಯಸನಿಗಳು ಹೆಚ್ಚಾಗುತ್ತಿದ್ದಾರೆ. ದುಡಿದ ಹಣವನ್ನು ಕುಡಿತಕ್ಕೆ ವ್ಯಯ ಮಾಡುತ್ತಿರುವುದರಿಂದ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಮನಸ್ಸನ್ನು ನಿಗ್ರಹಿಸಿ ಹೊಸ ಜೀವನಕ್ಕೆ ಕಾಲಿಡಬೇಕಿದೆ. ಶಿಬಿರದಲ್ಲಿ ಕಲಿತ ಉತ್ತಮ ಸಂಗತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮರಾಗಿ ಬದುಕಿ ಎಂದರು.
    ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ ಮಾತನಾಡಿ, ಧರ್ಮಸ್ಥಳ ಸಂಸ್ಥೆಯಿಂದ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ. ಗುಟ್ಖಾ, ಮದ್ಯ, ಕೆಟ್ಟ ಆಲೋಚನೆ, ಭ್ರಷ್ಟಾಚಾರ ಮೃತ್ಯುವಿಗೆ ದಾರಿಯಾಗಲಿದೆ. ಮದ್ಯದಿಂದ ಮುಕ್ತರಾಗಿ ಅಮೃತದ ಜೀವನವನ್ನು ಕಂಡುಕೊಳ್ಳಿ. ಧರ್ಮದ ಮಾರ್ಗದಲ್ಲಿ ಸಂಪಾದಿಸಿದರೆ ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ತಲುಪಲು ಸಾಧ್ಯ ಎಂದರು.
    ಯೋಜನೆ ಜಿಲ್ಲಾ ನಿರ್ದೇಕ ಪ್ರಕಾಶ್‌ರಾವ್, ತಾಲೂಕು ಯೋಜನಾಧಿಕಾರಿ ಪ್ರಸಾದ್, ಶಿವಲಿಂಗಸ್ವಾಮಿ, ಪುರಸಭಾ ಸದಸ್ಯೆ ಪುಷ್ಪಲತಾ ಮಂಜುನಾಥ್, ಮುಖಂಡರಾದ ಎಚ್.ವಿ.ಗಿರೀಶ್, ರಾಜಶೇಖರ್, ಎ.ಮಣಿ, ರವಿಶಂಕರ್, ನಾಗರಾಜ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮೀ, ಸುಮಾ, ಪವನ್, ನಿರ್ಮಿತಾ ಚಂದನ್ ಇತರರಿದ್ದರು.

    ಮದ್ಯಕ್ಕೆ ದಾಸನಾದರೆ ಹೊರಬರುವುದು ಕಷ್ಟ. ಅನ್ಯ ಪ್ರಾಣಿಗಳು ಮುಟ್ಟದ ಮದ್ಯ ಮನುಷ್ಯನಿಗೆ ಏಕೆ ಬೇಕು? ಮನೆಯ ಯಜಮಾನ ಕುಡಿತಕ್ಕೆ ದಾಸನಾದರೆ ಕುಟುಂಬ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಜತೆಗೆ ಸಮಾಜದಲ್ಲಿ ಮರ್ಯಾದೆಯೂ ಸಿಗುವುದಿಲ್ಲ. ಮನಸ್ಸನ್ನು ಹತೋಟಿಗೆ ತಂದುಕೊಂಡು ಸೂಕ್ತ ಮಾರ್ಗದಲ್ಲಿ ಸಾಗಿ.
    ಶ್ರೀ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ
    ಯಳನಡು ಮಠದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts