More

    ಬೆಂಗಳೂರಿನಲ್ಲಿ ಎಲ್ಲೆಲ್ಲಿ ಡ್ರೋನ್ ಕ್ಯಾಮರಾ ಕಣ್ಗಾವಲು – ಇಲ್ಲಿದೆ ನೋಡಿ ವಿಷುವಲ್ಸ್​…

    ಬೆಂಗಳೂರು: ಲಾಕ್​ಡೌನ್ ಪರಿಣಾಮಕಾರಿಗೊಳಿಸಲು ಡ್ರೋನ್​ಗೆ ಮೊರೆ ಹೋಗಿರುವ ದಕ್ಷಿಣ ವಿಭಾಗದ ಪೊಲೀಸರು, ತಮ್ಮ ವ್ಯಾಪ್ತಿಯ ನಾಲ್ಕು ಪ್ರದೇಶಗಳಲ್ಲಿ ಡ್ರೋನ್ ಕ್ಯಾಮರಾಗಳನ್ನು ಬಳಸಿ ಪರಿಶೀಲನೆ ನಡೆಸುತ್ತಿದ್ದಾರೆ.

    ಮೊದಲ ಬಾರಿಗೆ ದಕ್ಷಿಣ ವಿಭಾಗದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಖಾಸಗಿ ಸಂಸ್ಥೆಯವರು ಡ್ರೋನ್ ಮೂಲಕ ಪೊಲೀಸರಿಗೆ ಸಾಥ್ ನೀಡಲು ಮುಂದೆ ಬಂದಿದ್ದಾರೆ. ಎರಡು ದಿನಗಳಿಂದ ಜಯನಗರ, ಬನಶಂಕರಿ, ಕುಮಾರಸ್ವಾಮಿ ಲೇಔಟ್ ಹಾಗೂ ಹನುಮಂತನಗರ ವ್ಯಾಪ್ತಿಯಲ್ಲಿ ನಾಲ್ಕು ಡ್ರೋನ್ ಕಾರ್ಯಾಚರಿಸುತ್ತಿದ್ದು, ಮನೆಯಿಂದ ಹೊರ ಬರುವ ಜನರ ಬಗ್ಗೆ ಮಾಹಿತಿ ನೀಡುತ್ತಿವೆ. ಡ್ರೋನ್ ಬರುವ ಶಬ್ದ ಕೇಳಿ ಸಾರ್ವಜನಿಕರೂ ಮನೆಯಿಂದ ಹೊರಬರುವುದನ್ನು ಕಡಿಮೆ ಮಾಡುತ್ತಿದ್ದಾರೆ. ಹೆಚ್ಚಿನ ಜನಜಂಗುಳಿ ಸೇರಿಸುವುದು ಕಂಡುಬಂದ ತಕ್ಷಣ ಆ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ತೆರಳಿ ಜನರಿಗೆ ಎಚ್ಚರಿಕೆ ನೀಡುತ್ತಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಕಟೋಚ್ ಸೆಪಟ್ ತಿಳಿಸಿದ್ದಾರೆ.

    ದಕ್ಷಿಣ ವಿಭಾಗದಲ್ಲಿ 192 ರಸ್ತೆಗಳನ್ನು ಬಂದ್ ಮಾಡಿರುವ ಪೊಲೀಸರು ಒಂದು ಪ್ರದೇಶದಿಂದ ಮತ್ತೊಂದು ಕಡೆ ಅನಗತ್ಯವಾಗಿ ತಿರುಗಾಡದಂತೆ ಕ್ರಮ ಕೈಗೊಂಡಿದ್ದಾರೆ. ಜನರಿಗೆ ಅವಶ್ಯಕತೆ ಇರುವ ತರಕಾರಿ ಅಂಗಡಿ, ಮೆಡಿಕಲ್ ಅಂಗಡಿ, ಕಿರಾಣಿ ಅಂಗಡಿಗಳ ಮ್ಯಾಪಿಂಗ್ ಮಾಡಲಿದ್ದಾರೆ. ಜನರು ಮ್ಯಾಪ್ ಮೂಲಕ ಏಲ್ಲಿ ಏನು ಸಿಗುತ್ತೆ ಎಂಬುದನ್ನು ನೋಡಿಕೊಳ್ಳಬಹುದು. ನಂತರ ಹತ್ತಿರದ ಅಂಗಡಿಗೆ ನಡೆದು ಕೊಂಡು ಹೋಗಬಹುದು ಎನ್ನಲಾಗಿದೆ.

    ಮನೆಯಿಂದ ಹೊರಗೆ ಕಾಲಿಟ್ರೆ ಸಿಕ್ಕಿಬೀಳೋದು ಗ್ಯಾರೆಂಟಿ: ಕಮಿಷನರ್ ಭಾಸ್ಕರ್ ರಾವ್ ನೋಡ್ತಿದ್ದಾರೆ ಹುಷಾರ್!

    ಸೂಪರ್ ಲವ್ ಸ್ಟೋರಿ!: ಸಿನಿಮಾವನ್ನೂ ಮೀರಿದ ಕಥೆ ಈಕೆಯದ್ದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts