More

    ವಿಚಾರಣೆ ವೇಳೆ ಮತ್ತೊಂದು ಭಯಾನಕ ಸುಳ್ಳು ಹೇಳಿದ ಡ್ರೋನ್ ಪ್ರತಾಪ್​, ವೈದ್ಯರ ವಿರುದ್ಧವೇ ಆರೋಪ

    ಬೆಂಗಳೂರು: ನಾನು ಕ್ವಾರಂಟೈನ್​ಗೆ ಒಳಪಟ್ಟ ವೇಳೆ ವೈದ್ಯರು ಕಿರುಕುಳ ನೀಡಿದ್ದಾರೆ‌ ಎಂದು ಡ್ರೋನ್ ಪ್ರತಾಪ್​ ಆರೋಪಿಸಿದ್ದಾನೆ.

    ತಾನೊಬ್ಬ ವಿಜ್ಞಾನಿ ಎಂದು ಸುಳ್ಳು ಹೇಳಿಕೊಂಡು ಸಾರ್ವಜನಿಕರನ್ನು ವಂಚಿಸಿರುವ ಆರೋಪ ಎದುರಿಸುತ್ತಿರುವ ಡ್ರೋನ್​ ಪ್ರತಾಪ್​ ಕ್ವಾರಂಟೈನ್​ ನಿಯಮ ಉಲ್ಲಂಘಿಸಿದ್ದ. ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಅವನನ್ನು ವಶಕ್ಕೆ ಪಡೆದ ಪೊಲೀಸರು ಕ್ವಾರಂಟೈನ್​ಗೆ ಒಳಪಡಿಸಿದ್ದರು. ಇದೀಗ(ಸೋಮವಾರ) ಪ್ರತಾಪ್​ನ ಕ್ವಾರಂಟೈನ್​ ಅವಧಿ ಮುಗಿದಿದ್ದು, ನೋಡಲ್ ಆಫೀಸರ್ ಆಗಿ ನೇಮಕವಾಗಿದ್ದ ಸಿವಿಲ್ ಡಿಫೆನ್ಸ್ ಕಮಾಂಡೆಟ್ ಚೇತನ್ ಸಿಂಗ್ ಅವರು ವಿಚಾರಣೆ ನಡೆಸಿದರು. ಅಧಿಕಾರಿಗಳ ಪ್ರಶ್ನೆಗೆ ಸರಿಯಾಗಿ ಉತ್ತರಿಸದ ಪ್ರತಾಪ್, ಕ್ವಾರಂಟೈನ್​ನಲ್ಲಿ ವೈದ್ಯರು ನನ್ನೊಂದಿಗೆ ಸಭ್ಯ ರೀತಿಯಲ್ಲಿ ನಡೆದುಕೊಳ್ಳಲಿಲ್ಲ. ಸರಿಯಾದ ಸೌಲಭ್ಯ ನೀಡದೆ ಕಿರುಕುಳ ನೀಡಿದ್ದಾರೆ. ತಪಾಸಣೆಗೆ ಬಂದ ವೈದ್ಯರು ನನ್ನ ವೈಯಕ್ತಿಕ ವಿಚಾರ ಇಟ್ಟುಕೊಂಡು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ. ಅಲ್ಲದೆ ವೈದ್ಯರ ವಿರುದ್ಧ ದೂರು ನೀಡಲು ಚಿಂತನೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.

    ಇದನ್ನೂ ಓದಿರಿ ಹೋಂ ಕ್ವಾರಂಟೈನಲ್ಲಿ ಇದ್ದುಕೊಂಡೇ ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬಿದ ಪೊಲೀಸ್​ ಕಮಿಷನರ್​

    ‘ಡ್ರೋನ್ ಪ್ರತಾಪ್ ವಿಚಾರಣೆ ಬಳಿಕ ಮಾತನಾಡಿದ ಚೇತನ್ ಕುಮಾರ್, ಪ್ರತಾಪ್​ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ್ರು. ಈ ಹಿನ್ನೆಲೆ ಅವರನ್ನು ಕರೆದುಕೊಂಡು ಬಂದು ಸಾಂಸ್ಥಿಕ ಕ್ವಾರಂಟೈನ್ ಮಾಡಿದ್ವಿ. ಈ ಸಂದರ್ಭದಲ್ಲೂ ಅವರು ನಿಯಮ ಉಲ್ಲಂಘಿಸಿದ್ದಾರೆ. ಹಾಗಾಗಿ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್​ಐಆರ್ ದಾಖಲಾಗಿದೆ ಎಂದರು.

    ವೈದ್ಯರ ಮೇಲೆ ಮಾಡುತ್ತಿರುವ ಪ್ರತಾಪ್​ ಮಾಡಿರುವ ಆರೋಪ ಸುಳ್ಳು. ಇವತ್ತಿಗೆ ಅವರ ಕ್ವಾರಂಟೈನ್ ಅವಧಿ ಮುಗಿದಿದೆ. ಅಶೋಕ್ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಅವರಿಗೆ ಅವಶ್ಯಕತೆ ಇದ್ರೆ ಪ್ರತಾಪ್​ನನ್ನು ಕರೆದುಕೊಂಡು ಹೋಗುತ್ತಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

    ಬೆಂಗಳೂರಲ್ಲಿ ಪೊಲೀಸರಿಗೆ ಅಶ್ಲೀಲ ಸನ್ನೆ ಮಾಡಿ ನಿಂದಿಸಿದ ನೈಜೀರಿಯಾ ಪ್ರಜೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts