More

    ಡ್ರೋನ್‌ ಪ್ರತಾಪ್‌ ಇನ್‌ಸ್ಟಾಗ್ರಾಮ್‌ ಪೋಸ್ಟ್‌ವೊಂದು ಭಾರೀ ವೈರಲ್‌; “ಮೋಸ ಆಗ್ತಿದೆ”..ಎಚ್ಚರ ವಹಿಸಿ..!

    ಕನ್ನಡದ ಬಿಗ್ ಬಾಸ್​ ಸೀಸನ್​ ದಿನೇ ದಿನೇ ಹೊಸ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಸದ್ಯ ಬಿಗ್‌ ಬಾಸ್‌ ಮನೆಯಲ್ಲಿ ಇವರ ಮುಗ್ಧತೆಯನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಮನೆಯಲ್ಲಿ ಉತ್ತಮ ಮತ್ತು ಸೈಲೆಂಟ್‌ ಸ್ಪರ್ಧಿ ಎನಿಸಿಕೊಂಡಿದ್ದಾರೆ.


    ಇದರ ಬೆನ್ನಲ್ಲೇ ಡ್ರೋನ್​ ಪ್ರತಾಪ್​ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮಾಡಲಾದ ಪೋಸ್ಟ್​​​​ವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗಿದೆ. ಡ್ರೋನ್​​​ ಪ್ರತಾಪ್​​​ ಇನ್ಸ್​​​ಟಾಗ್ರಾ ಖಾತೆಯಲ್ಲಿ ಮೋಸ ನಡೆಯುತ್ತಿರುವ ಕುರಿತು ಡ್ರೋನ್‌ ಪ್ರತಾಪ್‌ ಅವರ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಪೋಸ್ಟ್‌ವೊಂದನ್ನು ಶೇರ್‌ ಮಾಡಲಾಗಿದೆ.


    ಡ್ರೋನ್​​​ ಪ್ರತಾಪ್​​ ಅಕೌಂಟ್​​​​ನಲ್ಲಿ ಶೇರ್​​​ ಮಾಡಿರೋ ಪೋಸ್ಟ್​​ನಲ್ಲಿ ಏನಿದೆ?

    ಡ್ರೋನ್‌ ಪ್ರತಾಪ್‌ ಅವರ ಇನ್‌ಸ್ಟಾಗ್ರಾಮ್‌ ಖಾತೆಯಿಂದಲೂ ಪೋಸ್ಟ್‌ ಒಂದನ್ನು ಶೇರ್‌ ಮಾಡಲಾಗಿದ್ದು, ಅದರಲ್ಲಿ ಪ್ರತಾಪ್‌ “ಸ್ನೇಹಿತರೇ ನಾವು ನಮ್ಮ ಖಾತೆಯಿಂದಾಗಲಿ ಹಾಗೂ ಅಧಿಕೃತ ಫ್ಯಾನ್​ ಪೇಜ್​ನಿಂದ ಯಾವುದೇ ರೀತಿಯ Paid promotion ಅಥವಾ Paid Collabaration ಮಾಡುತ್ತಿಲ್ಲ… ಕೆಲವು Fan page ​ಗಳಲ್ಲಿ ಈ ರೀತಿಯ ನಡವಳಿಕೆ ಕಂಡು ಬಂದಿದೆ. ಕೆಲವರು ನಮಗೆ ಇದರ ಬಗ್ಗೆ ಮಾಹಿತಿ ನೀಡಿದ್ದು, ಆದ್ದರಿಂದ ನೀವುಗಳು ಮೋಸ ಹೋಗಬೇಡಿ. ಅದಕ್ಕೆ ನಾವು ಹೊಣೆಯಾಗಿರುವುದಿಲ್ಲ. ಅಂಥ ಖಾತೆಗಳನ್ನು ನೀವುಗಳು Report ಮಾಡಬಹುದು” ಎಂದು ಪೋಸ್ಟ್‌ ಮಾಡಿ ಎಚ್ಚರಿಕೆ ನೀಡಲಾಗಿದೆ.


    ಸೋಷಿಯಲ್​ ಮೀಡಿಯಾಗಳಲ್ಲಿ ಹಣಕ್ಕೋಸ್ಕರು ಕೊಲ್ಯಾಬರೇಷನ್​​ ಹೆಸರಲ್ಲಿ ಸಾಕಷ್ಟು ಪೇಜ್​ಗಳನ್ನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅವರ ಹಸರಿನಿಂದ ಖಾತೆ ತೆಗೆದು ಹಣ ಕೇಳುವ ದಂಧೆ ಇಲ್ಲವೇ ಅಲ್ಲದೇ ಇನ್ನಿತರ ಚಟುವಟಿಗಳನ್ನು ನಡೆಸಲಾಗುತ್ತಿದೆ. ಈ ರೀತಿ ಡ್ರೋನ್​​ ಪ್ರತಾಪ್​​ ಅವರಿಗೂ ಆಗಿದ್ದು, ಸದ್ಯ ಡ್ರೋನ್​ ಪೋಸ್ಟ್​​ಗೆ ಜನ ಕಾಮೆಂಟ್​​​ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts