More

    ಹೃದಯಾಘಾತದಿಂದ ಚಾಲಕ ಸಾವು; ವೇಗವಾಗಿ ಚಲಿಸುತ್ತಿದ್ದ ಬಸ್ಸಿನಲ್ಲಿದ್ರು 60 ಜನ ಪ್ರಯಾಣಿಕರು

    ಒಡಿಶಾ: 60 ಮಂದಿ ಪ್ರಯಾಣಿಕರಿದ್ದ ಬಸ್​​ ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ತೀವ್ರ ಎದೆನೋವಿನಿಂದ ಬಳಲುತ್ತಿದ್ದವರು ಸುರಕ್ಷಿತವಾಗಿ ಬಸ್ ನಿಲ್ಲಿಸಿ ಕೊನೆಯುಸಿರೆಳೆದಿದ್ದಾರೆ. ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಈ ದಾರುಣ ಘಟನೆ ನಡೆದಿದೆ.

    ಶೇಖ್ ಅಖ್ತರ್ ಮೃತ. ಬಸ್​​ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಬಸ್​ ಚಲಯಿಸುತ್ತಿದ್ದ ವೇಳೆ ಹೃದಯಾಘಾತವಾಗಿ ಪ್ರಾಣ ಕಳೆದುಕೊಂಡಿದ್ದಾರೆ.

    ನಡೆದಿದ್ದೇನು?: 60 ಮಂದಿ ಪ್ರವಾಸಿಗರಿದ್ದ ಬಸ್ ಪಶ್ಚಿಮ ಬಂಗಾಳದಿಂದ ಬಾಲಸೋರ್‌ನ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೋಗುತ್ತಿತ್ತು. ಮಾರ್ಗಮಧ್ಯೆ ಪಾತಾಪುರ ಚೌಕ್ ಬಳಿ ತೆರಳುತ್ತಿದ್ದ ಬಸ್ ಚಾಲಕನಿಗೆ ಹೃದಯಾಘಾತವಾಗಿತ್ತು. ಚಾಲಕನಿಗೆ ತೀವ್ರ ಎದೆನೋವು ಶುರುವಾಯಿತು. ಆದರೆ, ಬಸ್ ಚಾಲಕ ಚಾಣಾಕ್ಷತನದಿಂದ ವರ್ತಿಸಿದ್ದು, ರಸ್ತೆ ಬದಿ ಬಸ್ ನಿಲ್ಲಿಸಿ ಪ್ರಜ್ಞೆ ತಪ್ಪಿದ್ದಾನೆ.

    ಚಾಲಕನ ಸ್ಥಿತಿ ನೋಡಿದ ಬಸ್ಸಿನಲ್ಲಿದ್ದ ಪ್ರಯಾಣಿಕರು ಸ್ಥಳೀಯರ ಸಹಾಯದಿಂದ ಚಾಲಕನನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಅವರು ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

    ಈ ಬಗ್ಗೆ ಬಸ್ ನಲ್ಲಿದ್ದ ಪ್ರಯಾಣಿಕ ಅಮಿತ್ ದಾಸ್ ಮಾತನಾಡಿ, ಬಸ್ ವೇಗವಾಗಿ ಹೋಗುತ್ತಿದ್ದಾಗ ಚಾಲಕನ ಆರೋಗ್ಯ ಏಕಾಏಕಿ ಹದಗೆಟ್ಟಿದೆ. ಪ್ರಜ್ಞೆ ತಪ್ಪುವ ಮುನ್ನ ಸುರಕ್ಷಿತವಾಗಿ ರಸ್ತೆ ಬದಿಯಲ್ಲಿ ಬಸ್ ನಿಲ್ಲಿಸಿದರು. ಚಾಲಕನ ಎಚ್ಚರಿಕೆಯಿಂದಾಗಿ..ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರ ಪ್ರಾಣ ಉಳಿಯಿತು. ಇಲ್ಲದಿದ್ದರೆ ದೊಡ್ಡ ಅವಘಡ ಸಂಭವಿಸುತ್ತಿತ್ತು ಎಂದಿದ್ದಾರೆ.

    ಕಾರ್ತಿಕ್ ಗೆಲುವಿನ ಹಿಂದೆ ಇದ್ದಾಳೆ ಈಕೆ; ಈ ಮಹಿಳೆಗೂ ಬಿಗ್​ಬಾಸ್​ ವಿನ್ನರ್​ಗೂ ಇದೆ ಸಂಬಂಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts