More

    ಕಂದಾಯ ಇಲಾಖೆ ದಾಖಲೆಗಳ ಗಣಕೀಕರಣಕ್ಕೆ ಚಾಲನೆ

    ಚನ್ನರಾಯಪಟ್ಟಣ: ಕಂದಾಯ ಇಲಾಖೆಯ ದಾಖಲೆಗಳನ್ನು ಸುರಕ್ಷಿತವಾಗಿ ಇಡುವುದರ ಜತೆಗೆ ಅಗತ್ಯವಿದ್ದಾಗ ಸಾರ್ವಜನಿಕರಿಗೆ ಲಭ್ಯವಾಗುವ ನಿಟ್ಟಿನಲ್ಲಿ ಗಣಕೀಕರಣಗೊಳಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

    ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ಕಂದಾಯ ಇಲಾಖೆಯ ರೆಕಾರ್ಡ್ ರೂಂನ ದಾಖಲೆಗಳ ಗಣಕೀಕರಣ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಗುಣಮಟ್ಟ ಸೇವೆ ಹಾಗೂ ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿ ಮತ್ತು ದಾಖಲೆಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ ದಾಖಲೆಗಳ ಗಣಕೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು.

    ತಾಲೂಕು ಅಭಿಲೇಖಾಲಯ ಶಾಖೆಯ ಮಂಜೂರಿ ಕಡತಗಳಾದ ಎನ್‌ಸಿಆರ್, ಎಲ್‌ಎನ್‌ಡಿ, ಮಿಟೇಷನ್, ಮಿಟೇಷನ್ ವಾಹಿಗಳು, ಅನ್ಯಸಕ್ರಮಣ(ಎಎಲ್‌ಎನ್), 94 ಸಿ ಅಕ್ರಮ ಸಕ್ರಮ, ವಿವಾದಾಸ್ಪದ ಪ್ರಕರಣ, ಕೈಬರಹ ಪಹಣಿ ಸೇರಿದಂತೆ ಒಟ್ಟು 23,815 ಕಡತಗಳನ್ನು ಸ್ಕಾೃನ್ ಮಾಡಿ ಗಣಕೀಕರಣ ಮಾಡಲಾಗಿದ್ದು, ರೆಕಾರ್ಡ ರೂಮ್ನ ಒತ್ತಡ ತಗ್ಗಲಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಒಂದು ಕಂಪ್ಯೂಟರ್ ಹಾಗೂ ಸ್ಕಾೃನರ್ ಅವಶ್ಯಕತೆ ಇದ್ದು, ಶೀಘ್ರವಾಗಿ ಒದಗಿಸಲಾಗುವುದು. ಅಲ್ಲದೆ 2024ರ ಜ.1ರೊಳಗಾಗಿ ರೆಕಾರ್ಡ್ ರೂಮ್ನ ಎಲ್ಲ ದಾಖಲೆಗಳನ್ನು ಗಣಕೀಕರಣಗೊಳಿಸಲಾಗುವುದೆಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಿ.ಎಂ.ಗೋವಿಂದರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್.ಹರೀಶ್, ಡಿವೈಎಸ್ಪಿ ರವಿಪ್ರಸಾದ್, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts