More

    ಶುರುವಾಗುವುದಕ್ಕಿಂತ ಮುನ್ನವೇ ಸಮಸ್ಯೆಗೆ ಸಿಲುಕಿದ `ದೃಶ್ಯಂ ೨’

    ಮುಂಬೈ: ಈ ವರ್ಷ ಮಲಯಾಳಂನಲ್ಲಿ ಬಿಡುಗಡೆಯಾದ ಕೆಲವೇ ಚಿತ್ರಗಳ ಪೈಕಿ ಮೋಹನ್ ಲಾಲ್ ಅಭಿನಯದ `ದೃಶ್ಯಂ ೨’ ಸಹ ಒಂದು. ಕರೊನಾ ಭಯದಿಂದ ಚಿತ್ರಮಂದಿರಗಳ ಬದಲು ನೇವಾಗಿ ಅಮೇಜಾನ್ ಪ್ರೆöÊಮ್‌ನಲ್ಲಿ ಬಿಡುಗಡೆಯಾದ ಈ ಚಿತ್ರ ಸೂಪರ್ ಹಿಟ್ ಆಗುವುದರ ಜತೆಗೆ ಕನ್ನಡ ಮತ್ತು ತೆಲುಗಿಗೆ ರೀಮೇಕ್ ಸಹ ಆಗುತ್ತಿವೆ. ಬರೀ ಕನ್ನಡ ಮತ್ತು ತೆಲುಗು ಅಷ್ಟೇ ಅಲ್ಲ, ಹಿಂದಿಯಲ್ಲೂ ಈ ಚಿತ್ರವನ್ನು ಪ್ಯಾರಾಮೌಂಟ್ ಸ್ಟುಡಿಯೋಸ್ ನಿರ್ಮಿಸುವುದಾಗಿ ಕೆಲವು ದಿನಗಳ ಹಿಂದಷ್ಟೇ ಹೇಳಿಕೊಂಡಿತ್ತು. ಆದರೆ, ಚಿತ್ರ ಶುರುವಾಗುವುದಕಗಕೂ ಮುನ್ನವೇ ಸಮಸ್ಯೆ ಎದುರಾಗಿದೆ.

    ಇದನ್ನೂ ಓದಿ: ‘ಕೂ’ ವೇದಿಕೆಗೆ ಕಂಗನಾಳನ್ನು ಕೂಗಿ ಕರೆದರು: ಇನ್ಮುಂದೆ ಇದೇ ನನ್ನ ಸ್ವಂತ ಮನೆ ಎಂದು ಟ್ವಿಟ್ಟರ್​ಗೆ ಟಾಂಗ್ ಕೊಟ್ಟ ಬಾಲಿವುಡ್ ಬೆಡಗಿ!

    ವಿಷಯವೇನೆಂದರೆ, `ದೃಶ್ಯಂ’ ಚಿತ್ರವು ಹಿಂದಿಯಲ್ಲಿ ಅಜಯ್ ದೇವಗನ್ ಮತ್ತು ಶ್ರೇಯಾ ಶರಣ್ ಅಭಿನಯದಲ್ಲಿ `ದೃಶ್ಯಂ’ ಎಂಬ ಹೆಸರಿನಲ್ಲಿ ನಿರ್ಮಾಣವಾಗಿ, ಯಶಸ್ವಿಯಾಗಿದ್ದು ಗೊತ್ತೇ ಇದೆ. ಈ ಚಿತ್ರವನ್ನು ವಯಾಕಾಮ್ ೧೮, ಪನೋರಾಮಾ ಸ್ಟುಡಿಯೋಸ್ ಮತ್ತು ಕುಮಾರ್ ಮಂಗತ್ ಜತೆಯಾಗಿ ನಿರ್ಮಿಸಿದ್ದರು. ಈ ಬಾರಿ ಪನೋರಾಮಾ ಸ್ಟುಡಿಯೋಸ್ ಸಹಯೋಗದೊಂದಿಗೆ, ಕುಮಾರ್ ಮಂಗತ್ ಮಾತ್ರ `ದೃಶ್ಯಂ ೨’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಿರ್ಮಾಣದಲ್ಲಿ ಕೈಬಿಟ್ಟಿದ್ದೇಕೆ ಎಂದು ವಯಾಕಾಮ್ ೧೮ ಸಂಸ್ಥೆಯು ಪ್ರಶ್ನಿಸುವುದರ ಜತೆಗೆ ಕೋರ್ಟ್ ಮೆಟ್ಟಿಲೇರಿದೆ.

    ವಯಾಕಾಮ್ ೧೮ ಸಂಸ್ಥೆಯು ಮಂಗತ್‌ಗೆ ಮೊದಲೇ ಈ ಚಿತ್ರದಿಂದ ಸಂಸ್ಥೆಯನ್ನು ಕೈಬಿಡುವಂತಿಲ್ಲ ಮತ್ತು ಸಂಸ್ಥೆಯನ್ನು ಬಿಟ್ಟು ಬೇರೆಯವರೊಂದಿಗೆ ಚಿತ್ರವನ್ನು ನಿರ್ಮಿಸುವಂತಿಲ್ಲ ಎಂದು ಸಪಷ್ಟಪಡಿಸಿತ್ತಂತೆ. ಆದರೆ, ಮಂಗತ್ ವಯಾಕಾಮ್ ೧೮ ಸಂಸ್ಥೆಯನ್ನು ಬಿಟ್ಟು ಬರೀ ಪನೋರಾಮಾ ಸ್ಟುಡಿಯೋಸ್ ಜೊತೆಗೆ ತೊಡಗಿಸಿಕೊಂಡಿರುವುದು ಸಹಜವಾಗಿಯೇ ವಯಾಕಾಮ್ ೧೮ಗೆ ಸಿಟ್ಟು ಬಂದಿದೆ. ಹಾಗಾಗಿ, ಈ ಸಂಬAಧ ಸಂಸ್ಥೆಯು ಕಾನೂನು ಹೋರಾಟ ನಡೆಸುವುದಕ್ಕೆ ಮುಂದಾಗಿದೆ.

    ಇದನ್ನೂ ಓದಿ: ಮತ್ತೆ ಫೀಲ್ಡಿಗಿಳಿದ ನಟಿ ರಾಗಿಣಿ; ಸ್ಮಶಾನ ಸಿಬ್ಬಂದಿಗೆ ಆಹಾರ ಸಾಮಾಗ್ರಿ ವಿತರಣೆ

    ಎಲ್ಲ ಅಂದುಕೊAಡAತೆ ಆಗಿದ್ದರೆ, ಅಜಯ್ ದೇವಗನ್ ಮತ್ತು ಟಬು ಸೇರಿದಂತೆ `ದೃಶ್ಯಂ’ ಚಿತ್ರದಲ್ಲಿ ನಟಿಸಿದ್ದ ಹಲವು ಕಲಾವಿದರು ಈ ಚಿತ್ರದಲ್ಲೂ ನಟಿಸುವುದಕ್ಕೆ ಮುಂದಾಗಿದ್ದರAತೆ. ಆದರೆ, ಇದೀಗ ಚಿತ್ರ ಶುರುವಾಗುವುದಕ್ಕಿಂತ ಮುನ್ನವೇ ಕಾನೂನು ಸಮಸ್ಯೆ ಎದುರಿಸಿರುವ ನಿಟ್ಟಿನಲ್ಲಿ, ಮುಂದೇನಾಗುತ್ತದೋ ಎಂಬ ಕುತೂಹಲ ಎಲ್ಲರಿಗೂ ಇದೆ.

    `ಶಾಕಿನಿ ಡಾಕಿನಿ’ಯಾದ ರೆಜೀನಾ-ನಿವೇತಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts