More

    ಕ್ರಿಕೆಟ್ ಆಟಗಾರನಂತೆ ಮೈದಾನಕ್ಕೆ ಹೋಗುತ್ತಿದ್ದ… ಆದರೆ ಮಾಡುತ್ತಿದ್ದುದು ಬೇರೆಯೇ ಕೆಲಸ !

    ಬೆಂಗಳೂರು : ಕ್ರಿಕೆಟ್ ಆಟವಾಡುವ ಸೋಗಿನಲ್ಲಿ ಬೆಂಗಳೂರಿನ ವಿವಿಧ ಮೈದಾನಗಳಿಗೆ ಹೋಗಿ ಆಟಗಾರರ ಮೊಬೈಲ್ ಕಳವು ಮಾಡುತ್ತಿದ್ದ ಖದೀಮನನ್ನು ನಗರದ ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು 4.5 ಲಕ್ಷ ರೂ. ಮೌಲ್ಯದ 38 ಮೊಬೈಲ್ ಫೋನ್​​ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಬಸವೇಶ್ವರನಗರದ ಬೋವಿ ಕಾಲನಿಯ ನಿವಾಸಿ ಎಂ.ರವಿ (29 ವರ್ಷ) ಎಂಬುವನೇ ಬಂಧನಕ್ಕೊಳಗಾಗಿರುವ ವ್ಯಕ್ತಿ.

    ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಆಫೀಸ್ ಬಾಯ್​ ಆಗಿ ಕೆಲಸ ನಿರ್ವಹಿಸಿರುವ ರವಿ, ಆ ಕೆಲಸ ಬಿಟ್ಟ ಮೇಲೆ ಮದುವೆ ಸಮಾರಂಭಗಳಲ್ಲಿ ಹೂವಿನ ಅಲಂಕಾರ ಮಾಡುತ್ತಿದ್ದ. ಆದರೆ ಕರೊನಾ ಹಿನ್ನೆಲೆಯಲ್ಲಿ ಲಾಕ್​ಡೌನ್ ಆಗಿ ಕೆಲಸವಿಲ್ಲದೆ ಹೋದಾಗ ಕ್ರಿಕೆಟ್ ಆಟದ ಅಭ್ಯಾಸವಿದ್ದುದರಿಂದ ಮೈದಾನಕ್ಕೆ ಹೋಗಿ ಕ್ರಿಕೆಟ್ ನೋಡುತ್ತಾ ಕೂರುತ್ತಿದ್ದನಂತೆ. ಈ ಸಮಯದಲ್ಲಿ ಆಟಗಾರರ ಮೊಬೈಲ್ ಕದ್ದು ಸುಲಭವಾಗಿ ದುಡ್ಡು ಮಾಡುವ ಉಪಾಯ ಹುಡುಕಿದ್ದಾನೆ.

    ಇದನ್ನೂ ಓದಿ: ಹದಿನೇಳರ ಹುಡುಗಿಯ ಮೇಲೆ ಗ್ಯಾಂಗ್ ರೇಪ್… ಸ್ನೇಹಿತೆ ಮನೆಗೆ ಹೋಗಿದ್ದೇ ತಪ್ಪಾಯಿತು!

    ಕ್ರಿಕೆಟ್​ ಆಡುವವನಂತೆ ಬಟ್ಟೆ ಧರಿಸಿ, ಪಂದ್ಯಾವಳಿ ನೋಡುತ್ತಾ ಕೂರುವುದು; ಆಟಗಾರರು ತಮ್ಮೆಲ್ಲರ ಮೊಬೈಲ್​ಗಳನ್ನು ಒಂದೇ ಬ್ಯಾಗ್​ನಲ್ಲಿ ಹಾಕಿಟ್ಟು ಆಟವಾಡಲು ಹೋಗುವುದನ್ನು ಗಮನಿಸಿಕೊಂಡು, ಯಾರಿಗೂ ಗೊತ್ತಾಗದಂತೆ ಬ್ಯಾಗ್ ಲಪಟಾಯಿಸುವುದು; ನಂತರ ಕದ್ದ ಮೊಬೈಲ್ ಫೋನ್​ಗಳನ್ನು ಬೇರೆ ಬೇರೆ ಅಂಗಡಿಗಳಲ್ಲಿ ಮಾರಿ ದುಡ್ಡು ಪಡೆಯುವುದು – ಅವನ ಕಾರ್ಯವೈಖರಿಯಾಗಿತ್ತು. ಈ ರೀತಿಯಾಗಿ ಆರೋಪಿಯು ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನ, ಜಾಲಹಳ್ಳಿಯ ಹೆಚ್​.ಎಂ.ಟಿ. ಗ್ರಾಂಡ್ಸ್, ಮಲ್ಲೇಶ್ವರಂ, ಜಯನಗರ ಮತ್ತು ಬಾಗಲಗುಂಟೆ ಪ್ರದೇಶದ ಮೈದಾನಗಳಿಗೆ ನಿಯಮಿತವಾಗಿ ಹೋಗಿ ಮೊಬೈಲ್ ಕದಿಯುವ ಅಭ್ಯಾಸ ಹೊಂದಿದ್ದ ಎನ್ನಲಾಗಿದೆ.

    ಮಾರ್ಚ್ 11 ರ ಸಂಜೆ ಕದ್ದ ಐದಾರು ಮೊಬೈಲ್​ಗಳನ್ನು ಕವರಿನಲ್ಲಿಟ್ಟುಕೊಂಡು ವಿ,ಪಿ,ರಸ್ತೆಯ ಮೊಬೈಲ್ ಅಂಗಡಿಗೆ ಮಾರುವುದಕ್ಕಾಗಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಗಸ್ತಿನಲ್ಲಿದ್ದ ಪೇದೆಗಳಾದ ಶ್ರೀನಿವಾಸಮೂರ್ತಿ ಮತ್ತು ನವೀನ್​ಕುಮಾರ್ ಅವರಿಗೆ ಸಿಕ್ಕುಬಿದ್ದಿದ್ದಾನೆ. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಸಂಗತಿ ಬೆಳಕಿಗೆ ಬಂದಿದ್ದು, ಆರೋಪಿಯ ಮೇಲೆ ಐಪಿಸಿ ಅಡಿ ಕೇಸು ದಾಖಲಿಸಲಾಗಿದೆ. ನಾಲ್ಕೂವರೆ ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪೆನಿಗಳ 38 ಮೊಬೈಲ್​ಗಳನ್ನು ಜಾಲಹಳ್ಳಿ ಪೊಲೀಸರು ಜಪ್ತಿ ಮಾಡಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    “ಪೆಟ್ಟು ಬಿದ್ದ ಹುಲಿ ಹೆಚ್ಚು ಅಪಾಯಕಾರಿ” : ಮಮತಾ ಬ್ಯಾನರ್ಜಿ ಎಚ್ಚರಿಕೆ

    ಹೇಗ್ಹೇಗೋ ಮುಟ್ಟುತ್ತಾ ‘ಪರೀಕ್ಷೆ’ ನಡೆಸುತ್ತಿದ್ದ ನರ್ಸಿಂಗ್ ಇನ್ಸ್​​ಟಿಟ್ಯೂಟ್ ಮುಖ್ಯಸ್ಥನ ಬಂಧನ

    “ಆ ರಹೀ ಹೇ ಪೊಲೀಸ್… !” ಭರ್ಜರಿ ಆ್ಯಕ್ಷನ್ ಚಿತ್ರಕ್ಕೆ ತಯಾರಾಗಿ !

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts