More

    ರಸ್ತೆಯಲ್ಲೇ ಹರಿಯುತ್ತಿದೆ ಮಳೆ ನೀರು

    -ನರೇಂದ್ರ ಎಸ್. ಮರಸಣಿಗೆ ಹೆಬ್ರಿ

    ಹೆಬ್ರಿ ಹಾಗೂ ಬ್ರಹ್ಮಾವರ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಮಳೆ ನೀರು ಚರಂಡಿಯ ಬದಲು ರಸ್ತೆಯಲ್ಲಿ ಹರಿಯುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮಳೆಯಾದಾಗ ಕೆಸರು ನೀರು ರಸ್ತೆ ಮಧ್ಯೆ ಶೇಖರಣೆಯಾಗುತ್ತದೆ.

    ವಾಹನಗಳು ವೇಗವಾಗಿ ಸಂಚರಿಸುವಾಗ ಜನರಿಗೆ ಕೆಸರು ನೀರಿನ ಅಭಿಷೇಕವಾಗುತ್ತದೆ. ಕೆಳಪೇಟೆಯಾ ಹೆಬ್ಬಾರ್ ಕಾಂಪ್ಲೆಕ್ಸ್ ಬಳಿ ರಸ್ತೆಯಲ್ಲೇ ನೀರು ಹರಿಯುತ್ತದೆ.

    ಹೂಳೆತ್ತಬೇಕು

    ಚರಂಡಿಗಳ ನಿರ್ವಹಣೆ ಮಾಡದೆ ಹಾಗೂ ಹೂಳು ತೆಗೆಯದೆ ಇರುವುದರಿಂದ ನೀರು ರಸ್ತೆಯಲ್ಲಿ ಹರಿಯುತ್ತದೆ. ಪಂಚಾಯಿತಿಗಳು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಲೋಕೋಪಯೋಗಿ ಇಲಾಖೆಯ ರಸ್ತೆಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು ರಸ್ತೆಯಲ್ಲಿ ಹರಿಯುತ್ತದೆ.

    ಕುಚ್ಚೂರು ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ಮುಂದೆ ಕೂಡ ಮಳೆ ನೀರು ರಸ್ತೆಯಲ್ಲಿ ಹರಿಯುತ್ತದೆ. ಈ ರಸ್ತೆ ಹೊಂಡಗುಂಡಿಗಳಿಂದ ಕೂಡಿದೆ.

    ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಕಳೆದ ವರ್ಷ ಬ್ರಹ್ಮಾವರ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆಯ ಸಮಸ್ಯೆ ಬಗ್ಗೆ ಗಮನಕ್ಕೆ ತಂದಾಗ ಶೀಘ್ರ ದುರಸ್ತಿ ಪಡಿಸುವ ಕುರಿತು ಮಾಹಿತಿ ನೀಡಿದ್ದರು. ಈ ವರ್ಷವೂ ಅದೇ ಡೈಲಾಗ್ ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಜನರು ಕೆಸರು ನೀರು ರಸ್ತೆಗೆ ಬರುವುದನ್ನು ತಪ್ಪಿಸಲು ಇಲಾಖೆಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಸಾರ್ವಜನಿಕರು ವಾಹನ ಸವಾರರನ್ನು ನಿಧಾನವಾಗಿ ಚಲಿಸಲು ವಿನಂತಿ ಮಾಡಿಕೊಂಡಿದ್ದಾರೆ. ಬೆಳಗ್ಗೆ ಶಾಲೆಗೆ ಹೋಗುವ ವಿದ್ಯಾರ್ಥಿಗಳ ಬಟ್ಟೆಗೆ ನೀರು ಹಾರಿದರೆ ಸಂಜೆ ತನಕ ಅದೇ ಉಡುಪಿನಲ್ಲಿ ಕುಳಿತುಕೊಳ್ಳಬೇಕು. ಹೈಸ್ಕೂಲ್‌ನಿಂದ ಹಿಡಿದು ಪದವಿ ಕಾಲೇಜು ತನಕದ ನೂರಾರು ವಿದ್ಯಾರ್ಥಿಗಳು ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ಕೆಸರು ನೀರು ಇರಿವಲಗಲಿ ಚಾಲಕರು ವಾಹನಗಳ ವೇಗ ಕಡಿಮೆ ಮಾಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

    ಈ ಹೆದ್ದಾರಿಯಲ್ಲಿ 5 ಕಿಲೋ ಮೀಟರ್ ಮಾತ್ರ ನಮ್ಮ ವ್ಯಾಪ್ತಿಯಲ್ಲಿ ಬರುತ್ತದೆ. ಚರಂಡಿ ಸಮರ್ಪಕವಾಗಿ ಇರದ ಕಾರಣ ರಸ್ತೆಯಲ್ಲಿ ನೀರು ಹರಿಯುತ್ತದೆ. ಈ ಬಗ್ಗೆ ಕ್ರಮ ವಹಿಸಲಾಗುವುದು.

    -ಲಾಯ್ಡ ಸಂದೀಪ್ ಡಿಸಿಲ್ವಾ, ೋಕೋಪಯೋಗಿ ಇಲಾಖೆ ಜೂನಿಯರ್ ಇಂಜಿನಿಯರ್

    ಹೆಬ್ರಿ ಕೆಳಪೇಟೆ ಹೆಬ್ಬಾರ್ ಕಾಂಪ್ಲೆಕ್ಸ್ ಹತ್ತಿರ ಮಳೆ ನೀರು ರಸ್ತೆಯಲ್ಲಿ ಹರಿದು ಕೆಸರಿನ ಸಿಂಚನ ಆಗುತ್ತಿದೆ. ರಸ್ತೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡು ಹೋಗುವಾಗ ಕೆಸರು ನೀರು ಹಾರುತ್ತದೆ.
    -ಸುಧೀರ್ ಹೆಬ್ರಿ, ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts