More

    ಅರ್ಜೆಂಟೀನಾ ಕ್ರಿಕೆಟ್ ತಂಡದ ನಾಯಕಿ ಈಗ ಕರೊನಾ ವಾರಿಯರ್!

    ಬ್ಯೂನಸ್ ಐರಿಸ್: ಕ್ರಿಕೆಟ್ ಮೈದಾನದಲ್ಲಿ ಅರ್ಜೆಂಟೀನಾ ಕ್ರಿಕೆಟ್ ತಂಡವನ್ನು ಮುನ್ನಡೆಸುತ್ತಿದ್ದ ಬ್ಯಾಟುಗಾರ್ತಿ ವೆರೋನಿಕಾ ವಸ್‌ಕ್ವಿಜ್ ಈಗ ಬ್ಯೂನಸ್ ಐರಿಸ್‌ನ ಆಸ್ಪತ್ರೆಯೊಂದರಲ್ಲಿ ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ್ದಾರೆ. ಕ್ರಿಕೆಟರ್ ಮಾತ್ರವಲ್ಲದೆ ವೈದ್ಯೆಯೂ ಆಗಿರುವ 24 ವರ್ಷದ ವೆರೋನಿಕಾ, ಕೋವಿಡ್-19 ರೋಗಿಗಳಿಗೆ ಹಗಲಿರುಳು ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

    ಸರಿಸುಮಾರು 4.62 ಲಕ್ಷ ಕರೊನಾ ಪ್ರಕರಣಗಳನ್ನು ಕಂಡಿರುವ ಅರ್ಜೆಂಟೀನಾದಲ್ಲಿ ಸೋಂಕು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. 9.623 ಮಂದಿ ಮೃತಪಟ್ಟಿರುವ ನಡುವೆ 3.32 ಲಕ್ಷ ಜನರು ಈಗಾಗಲೆ ಗುಣಮುಖರಾಗಿದ್ದರೂ, ಇತ್ತೀಚೆಗೆ ಪ್ರತಿದಿನ 10 ಸಾವಿರ ಹೊಸ ಪ್ರಕರಣಗಳು ಬರುತ್ತಿವೆ. ಇದರಿಂದಾಗಿ ಆರೋಗ್ಯ ಸಿಬ್ಬಂದಿಗೆ ಹೆಚ್ಚಿನ ಸವಾಲು ಎದುರಾಗಿದ್ದು, ವೆರೋನಿಕಾ ಕೂಡ ಇದನ್ನು ದಿಟ್ಟವಾಗಿ ಎದುರಿಸುವಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ.

    ‘ಬ್ಯೂನಸ್ ಐರಿಸ್‌ನಲ್ಲಿ ಕೋವಿಡ್-19 ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿದೆ. ಕರೊನಾ ವೈರಸ್ ಹಾವಳಿ ದೇಶಕ್ಕೆ ದೊಡ್ಡ ಹೊಡೆತ ನೀಡಿದ್ದು, ಸೋಂಕಿನ ವಿರುದ್ಧ ಗೆಲುವಿಗೆ ನಾವು ಹೋರಾಡುತ್ತಿದ್ದೇವೆ’ ಎಂದು ವೆರೋನಿಕಾ ಹೇಳಿದ್ದಾರೆ. ಅವರು ಆ್ಯನಿಸ್ತೀಸಿಯಾ ತಜ್ಞೆಯಾಗಿದ್ದು, ತಂತ್ರಜ್ಞಾನ ಮತ್ತು ಮೂಲಸೌಕರ್ಯಗಳ ಕೊರತೆ ತಮ್ಮ ಕೆಲಸವನ್ನು ಇನ್ನಷ್ಟು ಜಟಿಲವಾಗಿಸಿದೆ ಎಂದಿದ್ದಾರೆ.

    ಇದನ್ನೂ ಓದಿ: VIDEO | ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಯಿಂದ ಜನ್ಮದಿನದಂದು ನೇತ್ರದಾನ ಸಂಕಲ್ಪ

    10ನೇ ವಯಸ್ಸಿನಲ್ಲಿ ಶಾಲಾ ದಿನಗಳಲ್ಲೇ ಕ್ರಿಕೆಟ್ ಪ್ರೀತಿ ಬೆಳೆಸಿಕೊಂಡಿದ್ದ ವೆರೋನಿಕಾ, ಆಗ ಹುಡುಗರೊಂದಿಗೇ ಹೆಚ್ಚು ಆಡುತ್ತಿದ್ದರು. ದಕ್ಷಿಣ ಅಮೆರಿಕ ದೇಶಗಳ ಪೈಕಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಡಿದ ಮೊದಲ ದೇಶವೆಂಬ ಹೆಗ್ಗಳಿಕೆಯನ್ನು ಅರ್ಜೆಟೀನಾ ಹೊಂದಿದ್ದು, ವೆರೋನಿಕಾ ಆ ತಂಡದ ಭಾಗವಾಗಿದ್ದರು. ಇದುವರೆಗೆ 5 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ವೆರೋನಿಕಾ 53 ರನ್ ಗಳಿಸಿದ್ದಾರೆ.

    ಸ್ಟೀವನ್ ಸ್ಮಿತ್ ಆಕಳಿಕೆ ಚಿತ್ರ ಟ್ವೀಟಿಸಿ ತಿರುಗೇಟು ಕೊಟ್ಟ ಸರ್ಫ್ರಾಜ್​ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts