More

    ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಿ ರಜನೀಶ್ ಗೋಯೆಲ್ ನೇಮಕ

    ಬೆಂಗಳೂರು: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಡಾ.ರಜನೀಶ್ ಗೋಯಲ್ ಅವರನ್ನು ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ ಮಂಗಳವಾರ ಆದೇಶಿಸಿದೆ.

    ಗೋಯಲ್ ಅವರು 1986ರ ಬ್ಯಾಚ್​ನ ಐಎಎಸ್ ಅಧಿಕಾರಿಯಾಗಿದ್ದಾರೆ. ಸದ್ಯಕ್ಕೆ ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕೂ ಮುನ್ನ ರಾಜ್ಯದ ಅಭಿವೃದ್ಧಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

    ಹಾಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ನ.30ಕ್ಕೆ ಸೇವೆಯಿಂದ ವಯೋನಿವೃತ್ತರಾಗಲಿದ್ದು, ತೆರವಾಗಲಿರುವ ಸಿಎಸ್ ತನಕ ಸೇವಾ ಜ್ಯೇಷ್ಠತೆ ಆಧಾರದಲ್ಲಿ ರಜನೀಶ್ ಗೋಯಲ್ ನಿಯೋಜಿತರಾಗಿದ್ದಾರೆ.

    ಪತಿ ನಂತರ ಪತ್ನಿ !

    ರಾಜ್ಯ ಕಾರ್ಯಾಂಗದ ಮುಖ್ಯಸ್ಥರಾಗುವ ಮುಖ್ಯ ಕಾರ್ಯದರ್ಶಿ ವಿಚಾರದಲ್ಲಿ ಮತ್ತೊಂದು ಗಮನಸೆಳೆಯುವ ಅಂಶವಿದೆ. ಡಾ.ರಜನೀಶ್ ಗೋಯಲ್ ಅವರು ಡಿ.1ರಿಂದ ಕಾರ್ಯಭಾರ ವಹಿಸಿಕೊಳ್ಳಲಿದ್ದು, ವಯೋಮಿತಿ ಪ್ರಕಾರ 2024ರ ಜುಲೈ ತನಕ ಸಿಎಸ್ ಆಗಿರಲಿದ್ದಾರೆ.

    ರಾಜ್ಯದಲ್ಲಿ ಸೇವಾ ಜ್ಯೇಷ್ಠತೆ ಕಟ್ಟುನಿಟ್ಟಾಗಿ ಅನುಸರಿಸುವ ಕಾರಣ ರಜನೀಶ್ ಗೋಯಲ್​ಗೆ ಅವಕಾಶ ಲಭಿಸಿದ್ದು, ಸೇವೆಯಿಂದ ವಯೋನಿವೃತ್ತರಾದ ಬಳಿಕ ಅಜಯ್ ಸೇಠ್ ಅವರು ಈ ಹುದ್ದೆಗೆ ಬರಲು ನಿರಾಕರಿಸಿದರೆ ರಜನೀಶ್ ಅವರ ಪತ್ನಿ ಶಾಲಿನಿ ರಜನೀಶ್ ಅವರು ಸೇವಾ ಜ್ಯೇಷ್ಠತೆ ಪ್ರಕಾರ ಮುಖ್ಯ ಕಾರ್ಯದರ್ಶಿಯಾಗಲಿದ್ದಾರೆ.

    ರಜನೀಶ್ ಗೋಯಲ್ ಪಂಜಾಬ್ ಮೂಲದವರು, 28-7-1964ರಲ್ಲಿ ಜನಿಸಿದ್ದಾರೆ. ಬಿಇ, ಸಾರ್ವಜನಿಕ ಆಡಳಿತದಲ್ಲಿ ಪಿಎಚ್.,ಡಿ. ವ್ಯಾಸಂಗ ಮಾಡಿದ್ದಾರೆ. 1986ರ ಆಗಸ್ಟ್ 25ಕ್ಕೆ ಸರ್ಕಾರಿ ಸೇವೆಗೆ ಸೇರಿದ್ದಾರೆ.

    ಸಿಎಸ್ ನೇಮಕ ಆದೇಶ ಹೊರಬೀಳುತ್ತಿದ್ದಂತೆಯೇ ಖಾಸಗಿ ಹೋಟೆಲ್​ನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ರಜನೀಶ್ ಗೋಯಲ್ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

    ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ: ಕಪ್ ಗೆದ್ದ ಕ್ರಿಕೆಟ್ ತಂಡದ ಹಿಂದಿರುವ ಕರಾವಳಿ ಮಹಿಳೆ ಯಾರು?

    ಮದುವೆ ಒಮ್ಮೆ ಮಾತ್ರ.. ಆದರೆ ಮೋದಿ ಮತ್ತೆ ಮತ್ತೆ ಪ್ರಧಾನಿ ಆಗಬೇಕು: ವಿಶಿಷ್ಟ ರೀತಿಯಲ್ಲಿ ಅಭಿಮಾನ ಮೆರೆದ ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts