More

    ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್‌ಗೆ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಪ್ರಶಸ್ತಿ


    ಮಂಗಳೂರು: ಪ್ರತಿಭಾ ಸೌನ್ಶಿಮಠ್ ಇನಿಶಿಯೇಟಿವ್ ನೇತೃತ್ವದಲ್ಲಿ ಪಾಥ್‌ವೇ ಎಂಟರ್‌ಪ್ರೈಸಸ್ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಮತ್ತು ಲೇಡಿಸ್ ಸಲೂನ್ ಸಹಯೋಗದಲ್ಲಿ ನಗರದ ಕದ್ರಿ ಪಾರ್ಕ್‌ನಲ್ಲಿ ಜರಗಿದ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಇದರ 5ನೇ ಆವೃತ್ತಿಯ ೈನಲ್ ಸ್ಪರ್ಧೆಯಲ್ಲಿ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಕಿರೀಟ ಅಗ್ರ ಪ್ರಶಸ್ತಿ ಪಡೆದಿದ್ದಾರೆ.
    25ಕ್ಕೂ ಅಧಿಕ ಸ್ಪರ್ಧಿಗಳು ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 10 ಮಂದಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು-2024 ಕಿರೀಟವನ್ನು ಡಾ.ನಿಶಿತಾ ಶೆಟ್ಟಿಯಾನ್
    ಫೆರ್ನಾಂಡಿಸ್ ಮುಡಿಗೇರಿಸಿಕೊಂಡರು. ಡಾ.ರಶ್ಮಾ ಪ್ರಥಮ ರನ್ನರ್ ಅಪ್, ಡಾ.ಶೃತಿ ಬಳ್ಳಾಲ್ ಹಾಗೂ ರಮ್ಯ ದ್ವಿತೀಯ ರನ್ನರ್ ಅಪ್, ವಿದ್ಯಾ ಸಂಪತ್ ತೃತೀಯ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದಾರೆ ಎಂದು ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ನಿರ್ದೇಶಕ ದೀಪಕ್ ಗಂಗೂಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು-2024ರ ಕ್ಲಾಸಿಕ್ ವಿಭಾಗದಲ್ಲಿ ಸಬೀತಾ ವಿಜೇತರಾಗಿದ್ದು, ಡಾ.ಅರ್ಚನಾ ಪ್ರಥಮ ರನ್ನರ್ ಅಪ್, ಸೌಮ್ಯ ರಾವ್ ದ್ವಿತೀಯ ರನ್ನರ್ ಅಪ್, ಸವಿತಾ ಭಂಡಾರಿ ತೃತೀಯ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದಾರೆ. ಸೂಪರ್ ಕ್ಲಾಸಿಕ್ ವಿಭಾಗದಲ್ಲಿ ನಂದಿನಿ ಅವರು ವಿಜೇತರಾಗಿದ್ದಾರೆ ಎಂದು ಅವರು ತಿಳಿಸಿದರು.
    ಮರ್ಸಿ ಬ್ಯೂಟಿ ಅಕಾಡೆಮಿಯ ಮಾಲಕಿ ಹಾಗೂ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ನಿರ್ದೇಶಕಿ ಮರ್ಸಿ ವೀಣಾ ಡಿಸೋಜ, ಸಂಘಟಕರಾದ ಅನಿಶಾ ಗಂಗೂಲಿ, ಡಾ.ಶೃತಿ ಬಳ್ಳಾಲ್, ವಿದ್ಯಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts