More

    ವೈದ್ಯರ ನಿರ್ಲಕ್ಷ್ಯದಿಂದ ನವಜಾತ ಶಿಶು ಮರಣ?

    ಕೆಸಿಜಿ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆರೋಪ

    ಬೆಂಗಳೂರು: ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ನವಜಾತ ಶಿಶುವೊಂದು ಉಸಿರುಗಟ್ಟಿ ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಚೊಕ್ಕಸಂದ್ರ ನಿವಾಸಿ ದೇವಿಕಾ ಅವರಿಗೆ ತಪಾಸಣೆ ನಡೆಸುತ್ತಿದ್ದ ವೈದ್ಯರು 9 ತಿಂಗಳು ಪೂರ್ತಿಯಾಗಿ 12 ದಿನಗಳು ಕಳೆದ ಬಳಿಕ ಹೆರಿಗೆ ದಿನಾಂಕ ನೀಡಿದ್ದರು. ಆದರೆ ನಿಗದಿತ ದಿನಾಂಕ ಮೀರಿದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ದಿನ ತುಂಬಿರುವುದರಿಂದ ಸಿಸೇರಿಯನ್ ಮಾಡಿ ಎಂದು ಕುಟುಂಬದವರು ಮನವಿ ಮಾಡಿದ್ದರು. ಇದಕ್ಕೆ ನಿರಾಕರಿಸಿದ ವೈದ್ಯರು ಸಹಜ ಹೆರಿಗೆ ಮಾಡುವುದಾಗಿ ಹೇಳಿ ರಾತ್ರಿ 7 ಗಂಟೆವರೆಗೂ ಕಾಯಿಸಿದ್ದರು. ಕೊನೆಗೆ ಅವರೇ ಸಿಸೇರಿಯನ್ ನಡೆಸಿದರು. ಬಳಿಕ ಮಗು ಗಲೀಜು ನೀರು ಸೇವಿಸಿ ಹೊಟ್ಟೆಯಲ್ಲಿ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ ಎಂದು ದೇವಿಕಾ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಗಲಾಟೆ ನಡೆಸಿದರು.

    ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ಕೆ.ಸಿ. ಮೋಹನ್ ಮಾತನಾಡಿ, ಆಸ್ಪತ್ರೆಯ ಪ್ರಸೂತಿ ವಿಭಾಗದ ವೈದ್ಯೆ ತಪಾಸಣೆ ನಡೆಸುತ್ತಿದ್ದರು. ಡಿ. 10ಕ್ಕೆ ಹೆರಿಗೆ ದಿನಾಂಕ ನೀಡಿದ್ದರು. ಸಹಜ ಹೆರಿಗೆ ನಡೆಸಲು ನಿರ್ಧರಿಸಿದ್ದವರು, ನಂತರ ಪ್ರಕರಣದ ಗಂಭೀರತೆ ಅರಿತು ಶಸಚಿಕಿತ್ಸೆ ಮಾಡಿದ್ದಾರೆ. ಜನಿಸಿದಾಗ ಶಿಶುವಿನ ಹೃದಯ ಬಡಿತ ಕಡಿಮೆ ಇತ್ತು ಎಂದು ಎನ್‌ಐಸಿಯುಗೆ ಸ್ಥಳಾಂತರಿಸಿದ್ದಾರೆ. ಆದರೆ ಚಿಕಿತ್ಸೆ ಲಿಸದೆ ಮಗು ಮೃತಪಟ್ಟಿದೆ ಎಂದು ವಿವರಿಸಿದರು.

    ಮರಣೋತ್ತರ ಪರೀಕ್ಷೆಗೆ ಒಳಪಡಿಸಲಿದ್ದು, ವರದಿ ಆಧರಿಸಿ ಆಂತರಿಕ ತನಿಖೆ ನಡೆಸಿ ವೈದ್ಯೆಯ ನಿರ್ಲಕ್ಷ್ಯ ಕಾರಣವಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಮಲ್ಲೇಶ್ವರ ಠಾಣೆಯಲ್ಲಿ ಕುಟುಂಬಸ್ಥರು ವೈದ್ಯೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts