More

    ಪೊಲೀಸರ ಡಬಲ್ ಸ್ಟ್ಯಾಂಡರ್ಡ್: ಹಿಂದುಗಳಿಗೊಂದು ನ್ಯಾಯ, ಮುಸ್ಲಿಮರಿಗೊಂದು ನ್ಯಾಯ

    ಮುಂಬಯಿ: ಮಸೀದಿಯಿಂದ ಜೋರಾಗಿ ಅಜಾನ್ ಕೂಗುವುದನ್ನು ಪ್ರಶ್ನಿಸಿದ ಯುವತಿಗೆ ನೋಟಿಸ್ ನೀಡಿದ ಮುಂಬಯಿ ಪೊಲೀಸರು, ಗಣೇಶೋತ್ಸವವನ್ನು ಮಾತ್ರ ಹೆಚ್ಚು ಸದ್ದಾಗದಂತೆ ಆಚರಿಸಿ ಎಂದು ಉಪದೇಶ ಮಾಡುತ್ತಾರೆ! ಪೊಲೀಸರ ಈ ದ್ವಿಮುಖ ನೀತಿ ವಿರುದ್ಧ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

    ಕರಿಷ್ಮಾ ಬೋಸಲೆ ಎಂಬ ಯುವತಿ ಇತ್ತೀಚೆಗೆ ತನ್ನ ಮನೆ ಸಮೀಪದ ಮಸೀದಿಗೆ ಹೋಗಿ, ದಿನಕ್ಕೆ ಹಲವು ಸಲ ಜೋರಾಗಿ ಅಜಾನ್ ಕೂಗುವುದರಿಂದ ತಮಗೆ ಆಗುತ್ತಿರುವ ತೊಂದರೆ ಬಗ್ಗೆ ಹೇಳಿಕೊಂಡಿದ್ದಳು. ಆದರೆ ಅಲ್ಲಿದ್ದವರು ಅವಳೊಂದಿಗೆ ಜಗಳ ಮಾಡಿ ಗದರಿಸಿ ಕಳಿಸಿದ್ದರು. ಅದಾಗಿ ಎರಡೇ ದಿನಗಳಲ್ಲಿ ಪೊಲೀಸರು ಅವಳಿಗೇ ನೋಟಿಸ್ ನೀಡಿದ್ದರು. ಮಸೀದಿಯೊಳಗೆ ಹೋಗಿ ಪ್ರಶ್ನಿಸಿದ್ದು ಸರಿಯಲ್ಲ ಎಂದು ವಾರ್ನಿಂಗ್ ಮಾಡಿದ್ದರು.

    ಇದನ್ನೂ ಓದಿ: ಸಪ್ತಪದಿ ತುಳಿದ ಐದೇ ದಿನಕ್ಕೆ ಮದುಮಗ ಸಾವು, 20 ಜನರಿಗೆ ಕೋವಿಡ್​ ಸೋಂಕು!

    ಇದರಿಂದ ಕೆರಳಿರುವ ನೆಟ್ಟಿಗರು 2018ರಲ್ಲಿ ಇದೇ ಮುಂಬಯಿ ಪೊಲೀಸರು ಗಣೇಶೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಾಡಿಕೊಂಡಿದ್ದ ಮನವಿಯ ಸ್ಕ್ರೀನ್ ಶಾಟ್ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘‘ಪ್ರತಿ ಸಲ ಧ್ವನಿವರ್ಧಕಗಳ ಸದ್ದು ಹೆಚ್ಚಿಸಿದಾಗಲೂ ನೀವು ಶಾಂತಿಯುತ ಆಚರಣೆಯ ಪರವಾಗಿರುವವರ ಪ್ರಾರ್ಥನೆಯನ್ನು ಧಿಕ್ಕರಿಸಿದಂತಾಗುತ್ತದೆ. ಪ್ರಾರ್ಥನೆಗಳು ಯಾವಾಗಲೂ ಧ್ವನಿರಹಿತವಾಗಿರುತ್ತವೆ. ಹೃದಯದಾಳದಿಂದ ಬರುತ್ತವೆ’’ ಎಂದು ಮುಂಬಯಿ ಪೊಲೀಸರು ಅದರಲ್ಲಿ ಬರೆದಿದ್ದಾರೆ. ಅದಲ್ಲದೆ ‘ಸೇ ನೋ ಟು ನಾಯ್ಸ ಪೊಲ್ಯೂಷನ್’ ಎಂಬ ಹ್ಯಾಷ್‌ಟ್ಯಾಗ್ ಕೂಡ ಅದಕ್ಕಾಗಿ ರೂಪಿಸಿದ್ದಾರೆ.

    ಈ ಮನವಿಯ ಸ್ಕ್ರೀನ್‌ಶಾಟ್ ಮತ್ತು ಕರಿಷ್ಮಾ ಬೋಸಲೆಗೆ ನೋಟಿಸ್ ನೀಡಿದ್ದರ ಸ್ಕ್ರೀನ್‌ಶಾಟ್ ಎರಡನ್ನೂ ಅಕ್ಕಪಕ್ಕದಲ್ಲಿಟ್ಟು ‘ಇದು ಪೊಲೀಸರ ದ್ವಿಮುಖ ನೀತಿ’ ಎಂದು ಖಂಡಿಸಿದ್ದಾರೆ. ಇದನ್ನು ನೂರಾರು ಜನ ಬೆಂಬಲಿಸಿದ್ದಾರೆ. ‘‘ಭಾರತ, ಬ್ರಿಟನ್‌ನಂತಹ ದೇಶಗಳಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರು, ಹಾಗಾಗಿ ಅವರ ವಿರುದ್ಧ ಮಾತನಾಡುವಂತಿಲ್ಲ. ಪಾಕಿಸ್ತಾನ, ಸೌದಿ ಅರೇಬಿಯಾದಂತಹ ದೇಶಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರು. ಹಾಗಾಗಿ ಅವರ ವಿರುದ್ಧ ಮಾತನಾಡುವಂತಿಲ್ಲ…’’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

    4ರಿಂದ ಕರ್ನಾಟಕ-ಕೇರಳ ಗಡಿ ಬಂದ್: ಕೇರಳ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts