More

    ಸಾರ್ವಜನಿಕರ ಗಮನಕ್ಕೆ: ಅ. 12ರಂದು ರಾಜ್ಯದ ಪ್ರತಿಯೊಬ್ಬರ ಮೊಬೈಲ್​ಗೆ ಬರಲಿದೆ ಎಮರ್ಜೆನ್ಸಿ ಅಲರ್ಟ್​!

    ಬೆಂಗಳೂರು: ಇಂದು ಬೆಳಿಗ್ಗೆ, ಭಾರತದಲ್ಲಿನ ಅನೇಕ ಮೊಬೈಲ್ ಬಳಕೆದಾರರು ಸರ್ಕಾರದಿಂದ ತುರ್ತು ಎಚ್ಚರಿಕೆಯ ಸಂದೇಶವನ್ನು ಸ್ವೀಕರಿಸಿದ್ದು, ಈ ಸಂಗತಿ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಯಿತು. ಬೆಳಗ್ಗೆ 11:35ಕ್ಕೆ Android ಮತ್ತು iPhoneಗಳಿಗೆ ತುರ್ತು ಸಂದೇಶ ಬಂದಿದ್ದು, ಏನಿದು ಸಂದೇಶ? ಯಾಕೆ ಬಂತು? ಎನ್ನುವ ಪ್ರಶ್ನೆ ಜಾಲತಾಣದಲ್ಲಿ ಚರ್ಚೆಯಾಯಿತು.

    ಈ ಬಗ್ಗೆ ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯೂ ಸಹ ಸ್ಪಷ್ಟನೆ ನೀಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ಸೆಲ್ ಬ್ರಾಡ್‌ಕಾಸ್ಟ್​ ಅಲರ್ಟ್​ ಸಿಸ್ಟಮ್​ ಪರೀಕ್ಷೆಯಾಗಿದೆ. ಈ ಪರೀಕ್ಷೆಯನ್ನು ವಾಸ್ತವವಾಗಿ ಇಂದು ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಮಾಡಲಾಯಿತು. ಆದರೂ ದೇಶದ ಅನೇಕ ಮಂದಿಗೆ ಈ ಸಂದೇಶ ಬಂದಿದೆ.

    ಕರ್ನಾಟಕದಲ್ಲಿ ಅ.12ಕ್ಕೆ
    ಸೆಲ್ ಬ್ರಾಡ್‌ಕಾಸ್ಟ್​ ಅಲರ್ಟ್​ ಸಿಸ್ಟಮ್​ ಪರೀಕ್ಷೆಯನ್ನು ಅ. 12ರಂದು ಕರ್ನಾಟಕದಾದ್ಯಂತ ನಡೆಸುವುದಾಗಿ ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಅ. 12 ಅಂದರೆ ನಾಡಿದ್ದು, ರಾಜ್ಯದ ಜನತೆಯ ಮೊಬೈಲ್​ಗೆ ತುರ್ತು ಎಚ್ಚರಿಕೆಯ ಸಂದೇಶ ಬರಲಿದೆ. ಹೀಗಾಗಿ ಯಾರೂ ಗಾಬರಿ ಪಡಬೇಕಿಲ್ಲ. ಇದು ಸರ್ಕಾರದ ವತಿಯಿಂದಲೇ ನಡೆಯುತ್ತಿರುವ ಪರೀಕ್ಷೆಯಾಗಿದೆ.

    ಏನಿದು ಸೆಲ್ ಬ್ರಾಡ್‌ಕಾಸ್ಟ್​ ಅಲರ್ಟ್​ ಸಿಸ್ಟಮ್​?
    ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ನಮ್ಮ ನಾಗರಿಕರ ಅಮೂಲ್ಯವಾದ ಪ್ರಾಣವನ್ನು ಉಳಿಸಲು ತುರ್ತು ಸಂವಹನ ಅಭಿವೃದ್ಧಿಗಾಗಿ ಈ ಸೆಲ್ ಬ್ರಾಡ್‌ಕಾಸ್ಟ್​ ಅಲರ್ಟ್​ ಸಿಸ್ಟಮ್​ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಭಾರತದ ನಾಗರಿಕರು ಮತ್ತು ಸಮುದಾಯಗಳ ಸುರಕ್ಷತೆಗೆ ಪ್ರತಿ ಟೆಲಿಕಾಂ ಸೇವಾ ಪೂರೈಕೆದಾರರ ಮೇಲೆ ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್‌ನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದು ನಮ್ಮ ಬದ್ಧತೆಯೂ ಹೌದು ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.

    ಇದನ್ನೂ ಓದಿ: ಲೋಡ್ ಶೆಡ್ಡಿಂಗ್ ವಿರೋಧಿಸಿ ಗ್ರಿಡ್‌ಗೆ ಮುತ್ತಿಗೆ; ನರೇಂದ್ರ ಗ್ರಾಮಸ್ಥರಿಂದ ಅಹೋರಾತ್ರಿ ಧರಣಿ

    ವಿವಿಧ ಮೊಬೈಲ್ ಆಪರೇಟರ್‌ಗಳು ಮತ್ತು ಸೆಲ್ ಬ್ರಾಡ್‌ಕಾಸ್ಟ್ ಸಿಸ್ಟಮ್‌ಗಳ ತುರ್ತು ಎಚ್ಚರಿಕೆ ಪ್ರಸಾರದ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಅಳೆಯಲು ಈ ಪರೀಕ್ಷೆಗಳನ್ನು ಕಾಲಕಾಲಕ್ಕೆ ದೇಶದಾದ್ಯಂತ ವಿವಿಧ ಪ್ರದೇಶಗಳಲ್ಲಿ ನಡೆಸಲಾಗುತ್ತದೆ. ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್​ ಸಿಸ್ಟಮ್​ ಅತ್ಯಾಧುನಿಕ ತಂತ್ರಜ್ಞಾನವಾಗಿದ್ದು, ಸಂದೇಶ ಸ್ವೀಕರಿಸುವವರು ನಿವಾಸಿಗಳು ಅಥವಾ ಪ್ರವಾಸಿಗರು ಎಂಬುದನ್ನು ಲೆಕ್ಕಿಸದೆ, ಗೊತ್ತುಪಡಿಸಿದ ಭೌಗೋಳಿಕ ಪ್ರದೇಶದ ಎಲ್ಲ ಮೊಬೈಲ್ ಸಾಧನಗಳಿಗೆ ವಿಪತ್ತು ನಿರ್ವಹಣೆಗಾಗಿ ನಿರ್ಣಾಯಕ ಮತ್ತು ಸಮಯ-ಸೂಕ್ಷ್ಮ ಸಂದೇಶಗಳನ್ನು ಕಳುಹಿಸಲು ಅನುಮತಿ ನೀಡುತ್ತದೆ. ಪ್ರಮುಖ ತುರ್ತು ಮಾಹಿತಿಯು ಸರಿಯಾದ ಸಮಯಕ್ಕೆ ಅನೇಕ ಜನರನ್ನು ತಲುಪುವುದನ್ನು ಈ ಸಿಸ್ಟಮ್​ ಖಚಿತಪಡಿಸಲಿದೆ. ಸಂಭಾವ್ಯ ಬೆದರಿಕೆಗಳ ನಿರ್ಣಾಯಕ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ತಿಳಿಸಲು ಸರ್ಕಾರಿ ಏಜೆನ್ಸಿಗಳು ಮತ್ತು ತುರ್ತು ಸೇವೆಗಳು ಇದನ್ನು ಬಳಸುತ್ತವೆ. ಸುನಾಮಿ, ದಿಢೀರ್​ ಪ್ರವಾಹ, ಭೂಕಂಪನಗಳು ಮುಂತಾದ ಗಂಭೀರ ಸ್ವರೂಪದ ಹವಾಮಾನ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲು ಸೆಲ್ ಬ್ರಾಡ್‌ಕಾಸ್ಟ್ ಅನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಎಚ್ಚರಿಕೆ ಸಂದೇಶದಲ್ಲಿ ಸಾರ್ವಜನಿಕ ಸುರಕ್ಷತಾ ಕ್ರಮಗಳು, ಸ್ಥಳಾಂತರದ ಸೂಚನೆ ಮತ್ತು ಇತರೆ ಮಹತ್ವದ ಮಾಹಿತಿಗಳು ಇರಲಿವೆ.

    ಪರೀಕ್ಷಾ ಹಂತದಲ್ಲಿ ಅನೇಕ ಜನರು ತಮ್ಮ ಮೊಬೈಲ್ ಸಾಧನಗಳಲ್ಲಿ ಈ ತುರ್ತು ಎಚ್ಚರಿಕೆ ಸಂದೇಶಗಳನ್ನು ಪಡೆಯಬಹುದು. ಈ ಎಚ್ಚರಿಕೆಗಳು ಕೇವಲ ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿದೆ ಹೊರತು ನಿಜವಾದ ತುರ್ತು ಪರಿಸ್ಥಿತಿಯನ್ನು ಸೂಚಿಸುವುದಿಲ್ಲ. ಈ ಬಗ್ಗೆ ಮೆಸೇಜ್​ನಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

    ಅ. 12ರಂದು ಕರ್ನಾಟಕದಾದ್ಯಂತ ಈ ಪರೀಕ್ಷೆ ನಡೆಯಲಿದೆ ಎಂದು ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    Cell Broadcast Alert System

    Cell Broadcast Alert System

    ಹಮಾಸ್​ ರೀತಿಯಲ್ಲಿ ದಾಳಿ ಮಾಡಬೇಕಾಗುತ್ತೆ… ಭಾರತಕ್ಕೆ ಖಲಿಸ್ತಾನಿ ಉಗ್ರನ ಬೆದರಿಕೆ!

    ಕಾಡಂಚಿನ ಸಮುದಾಯಗಳ ಸಮಸ್ಯೆ ಸಿಎಂ ಸಿದ್ದರಾಮಯ್ಯ ಸ್ಪಂದನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts